
ಚಿಕ್ಕನಾಯಕನಹಳ್ಳಿ: ವಾದ್ಯ ಘೋಷಗಳು, ಡೋಲು ಡಂಗೂರಗಳು, ೫೨ ಸ್ಥಬ್ದ ಚಿತ್ರಗಳು, ಚಿಟ್ಟಿಮೇಳ, ವೀರಗಾಸೆ ಕುಣಿತ ಇವೆಲ್ಲಾ ಸಂವಿಧಾನ ದಿನಕ್ಕಾಗಿ, ದಾರ್ಶನಿಕರ ಜಯಂ ತ್ಯೋತ್ಸವಕ್ಕಾಗಿ ೩ ಕಿಲೋ ಮೀಟರ್ ನಷ್ಟು ಉದ್ದದಲ್ಲಿ ನಡೆದ ಮೆರವಣಿಗೆಯ ಕಲಾಪ್ರಕಾರಗಳು ಅಲ್ಲದೆ ಸಂವಿಧಾನಕ್ಕಾಗಿ, ಅಂಬೇಡ್ಕರ್ ರವರಿಗೆ ಸಮರ್ಪಿಸಿದ ಗೌರವಗಳು, ಎಲ್ಲಾ ಸಮುದಾ ಯದ ದಾರ್ಶನಿಕರ ಜಯಂತ್ಯೋತ್ಸವದ ನೆನಪಿಗಾಗಿ ನಡೆದ ಸಂಭ್ರಮ.
ಒAದು ಕಡೆ ತಾಲ್ಲೂಕು ಕಛೇರಿ ಮುಂಬಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಹಾಗೂ ಮಹಾತ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿ ಅನಾವ ರಣವಾಗುತ್ತಿದ್ದರೆ, ಮತ್ತೊಂದೆಡೆ ವಿವಿಧ ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯದ ಮುಖಂಡರುಗಳನ್ನು ಮತ್ತೊಬ್ಬ ಸಮುದಾಯದ ಮುಖಂಡರಲ್ಲಿ ಪರಿಚಯಿಸುತ್ತಿದ್ದರು, ಈ ಪರಿಚಯ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿಗೆ ತಾಲ್ಲೂಕು ಕಛೇರಿ ಮುಂದೆ ಹಾಗೂ ಸರ್ಕಾರಿ ಪ್ರೌಢಶಾಲೆ ಆವರಣಲ್ಲಿ ನಡೆದ ಸಮಾರಂಭದಲ್ಲಿ ಸಾಕ್ಷಿಯಾಗಿ ಜನರ ಸಹಕಾರಕ್ಕೆ ನಾಣ್ಣುಡಿಯಂತಿತ್ತು.
ಇಡೀ ದೇಶಕ್ಕೆ ಮಾದರಿಯಾಗಿ ಪ್ರಥಮವಾಗಿ ನಡೆಯುತ್ತಿರುವ ದಾರ್ಶನಿಕ ಜಯಂತ್ಯೋತ್ಸವ ಹೇಗಿರಲಿದೆ ಎಂದು ಹತ್ತಿರದಿಂದ ಗಮನಿಸಿದಾಗ, ಮಠಾಧೀಶರು, ಫಾದರ್ ಗಳು, ಮುಸ್ಲಿಂ ಗುರುಗಳು ತಾಲ್ಲೂಕು ಕಛೇರಿ ಮುಂದೆ ಪ್ರತಿಷ್ಠಾನವಾದ ಡಾ.ಬಿ. ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಪ್ರತಿ ಮೆಯ ಅನಾವರಣಗೊಳ್ಳುವಾಗ ಒಂದಾಗಿ ಪುಷ್ಪಾರ್ಚನೆ ಸಲ್ಲಿಸಿ ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಎಂಬ ಮುಖಚರ್ಯ ಅವರ ಮೊಗದಲ್ಲಿ ಕಾಣುತ್ತಿತ್ತು. ಈ ಭಾವದಿಂದಾಗಿ ಬಂದಿದ್ದ ಎಲ್ಲಾ ಸಮುದಾಯದ ಮುಖಂಡರು ದೇಶಕ್ಕೆ ಸಂವಿಧಾನ ಸಮರ್ಪಿಸಿದ ಹಾಗೂ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹಾತ್ಮರ ಕಂಚಿನ ಪ್ರತಿಮೆಗಳ ಮುಂದೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಡುತ್ತಿದ್ದದ್ದು ಅವರಲ್ಲಿದ್ದ ಸಂತಸ ದುಪ್ಪಟ್ಟಾಗಿದ್ದು ಗಮನಿಸುತ್ತಿದ್ದ ನಮಗೆಲ್ಲ ಕಾಣುತ್ತಿತ್ತು.
ಮೆರವಣಿಗೆಯಲ್ಲಿ ೫೨ ಸ್ಥಬ್ದಚಿತ್ರಗಳಲ್ಲಿ ಪ್ರತಿ ಸಮಾಜದ ಗುರುಗಳ ಭಾವಚಿತ್ರಗಳು ಆ ಸಮಾಜದ ಸಂಪ್ರದಾಯಗಳು ಇದ್ದಿದ್ದರಿಂದ ೩ ಕಿಲೋ ಮೀಟರ್ ವರೆಗೆ ನೆರೆದಿದ್ದ ಜನಸಮುದಾಯ ಸ್ಥಬ್ಧಚಿತ್ರಗಳನ್ನುಹಾಗೂ ವಿವಿಧ ಕಲಾಪ್ರಕಾರಗಳನ್ನು ನೋಡಿ ಖುಷಿ ಪಟ್ಟರು. ಮೆರವಣಿಗೆ ಆರಂಭವಾಗಿ ಸುಮಾರು ೨ ಗಂಟೆಯವರೆಗೂ ಸ್ಥಬ್ಧಚಿತ್ರಗಳು ತಾಲ್ಲೂಕು ಕಛೇರಿಯಿಂದ ನೆಹರು ಸರ್ಕಲ್, ಸಿವಿಲ್ ಬಸ್ಟಾಂಡ್ ವರೆಗೆ ಸಾಗಿದ್ದರಿಂದ ಜನಸಮುದಾಯ ಸಂಪೂರ್ಣ ಕಲಾಪ್ರಕಾರಗಳನ್ನು ನೋಡಿ ಮನಸೋತರು.



