
ತುಮಕೂರು: ಪ್ರಸ್ತುತ ಯುವ ಪೀಳಿಗೆಯು ಸಂವಿಧಾನದ ಆಗುಹೋಗುಗಳ ಬಗ್ಗೆ ಅರಿವನ್ನು ಹೊಂದಿ ದೇಶವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿದಿರಬೇಕು. ಸಂವಿಧಾ ನದ ಭವಿಷ್ಯ ಯುವಪೀಳಿಗೆಯ ಕೈಯಲ್ಲಿದೆ ಎಂದು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಉಪನ್ಯಾಸಕ ಡಾ. ಡಿ. ಜೆ ಶಶಿಕುಮಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವ ರಯ್ಯ ಸಭಾಂಗಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿ ಕೊಳ್ಳಲಾಗಿದ್ದ ೭೬ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವು ಸಂದರ್ಭ ಮತ್ತು ಸಮಯಕ್ಕೆ ಅನುಗುಣ ವಾಗಿ ಬದಲಾವಣೆಯನ್ನು ಹೊಂದಿರುತ್ತಿರುತ್ತದೆ. ಕಾರ್ಯಾಂ ಗ, ಶಾಸಕಾಂಗ, ಮತ್ತು ನ್ಯಾಯಾಂಗಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನಲ್ಲಿಯೂ ಇರಬೇಕು. ಸಂವಿಧಾನದ ಸವಾಲುಗಳನ್ನು ಹೇಗೆ ಎದುರಿಸಿ ಬದುಕಬೇಕು ಎಂಬುದನ್ನು ಯುವ ಪೀಳಿಗೆಗೆ ತಿಳಿದಿರಬೇಕು ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಂವಿಧಾನವು ಪ್ರಜಾಪ್ರಭುತ್ವ ಪರಿಪಾಲನೆಯ ದಿಕ್ಸೂಚಿಯಾಗಿದ್ದು, ಸಮಾಜದಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ಪಡೆಯುವ ಹಕ್ಕಿದ್ದು, ಸಂವಿಧಾನದ ಮಹತ್ವ ಪ್ರತಿಯೊಬ್ಬರಿಗೂ ತಿಳಿಯ ಬೇಕು.ಅಂಬೇಡ್ಕರ್ ಸಂವಿಧಾನದ ಪರಿಕಲ್ಪನೆಗಳಲ್ಲಿ ನಾವೆಲ್ಲ ರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರಿಗೂ ಸ್ವತಂತ್ರವಾಗಿ ಮತ ಹಾಕುವ ಹಕ್ಕಿದೆ ಎಂದು ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಂ. ಕೊಟ್ರೇಶ್ ಮಾತನಾಡಿ, ಸಂವಿಧಾನ ಪ್ರತಿನಿತ್ಯವು ಆಚರಣೆಯಾಗಬೇಕು, ಭಾರತದಲ್ಲಿರುವ ಸಂವಿಧಾನವು ಚಲನಶೀಲತೆಯ ಪ್ರತೀ ಕವಾಗಿದೆ. ಭಾರತವು ಪ್ರಜಾಸತ್ತಾತ್ಮಕವಾದ ಯಶಸ್ವಿ ರಾಷ್ಟç್ರವಾಗಿದ್ದು, ಭಾರತದಲ್ಲಿರುವ ಪ್ರತಿಯೊಬ್ಬರು ಭಾರತದ ಸಂವಿಧಾನವನ್ನು ತಿಳಿದಿರಬೇಕು ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇ ಶಕರಾದ ಡಾ. ಕೇಶವ ಉಪಸ್ಥಿತರಿದ್ದರು.



