
ತಿಪಟೂರು: ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ವಿಚಾರಗಳ ಆಧಾರದಲ್ಲಿ ರಾಷ್ಟ್ರಸೇವೆಯೇ ಪರಮ ಗುರಿಯೊಂದಿಗೆರಾಷ್ಟ್ರಕ್ಕೆ ಆಪತ್ತು ಎದುರುದಾಗರಾಷ್ಟ್ರೀಯ ಸ್ವಯಂ ಸೇವಕ ಸಂಘವು ಗಣನೀಯ ರೀತಿಯಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಮನೆ ಮನೆ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಘವು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕಳೆದ ನೂರು ವರ್ಷಗಳಲ್ಲಿ ಹಲವಾರು ಸಮಸ್ಯೆ ಸಂಕಷ್ಟಗಳನ್ನು ಎದುರಿಸಿ ನಿಂತಿದ್ದು, ಸೇವಾ ಬಸ್ತಿ ಕಾರ್ಯಗಳಲ್ಲಿ ಲಕ್ಷಾಂತರ ಸೇವೆಗಳನ್ನು ಮಾಡಿ ಸಂಘದ ಪ್ರೇರಣೆಯಿಂದ ನಲವತ್ತೆದುಕ್ಕೂ ಹೆಚ್ಚು ಸಂಘಟನೆಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಬೃಹತಾದಾಕಾರವಾಗಿ ಬೆಳೆದು ಇಂದು ವಿಶ್ವದ ಬೃಹತ್ ಮಾನವನ ಸಂಘಟನೆಯಾಗಿ ನಿಂತಿದೆ.
ಈ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಪಂಚ ಪರಿವರ್ತನೆ ವಿಷಯಗಳ ಮೂಲಕರಾಷ್ಟ್ರದ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು ಇಡೀ ದೇಶಾದ್ಯಾಂತ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸ್ವ ಆಧಾರಿತ ಜೀವನ, ನಾಗರೀಕ ಕರ್ತವ್ಯ ಪ್ರಜ್ಞೆ, ವಿಷಯಗಳ ಆಧಾರಿತವಾಗಿ ದೇಶದ್ಯಾಂತ ಮನೆ ಮನೆ ಮಹಾ ಸಂಪರ್ಕ ಅಭಿಯಾನವನ್ನು ಡಿ.೦೭ ರಿಂದ ೧೮ ರವರೆಗೆ ಹಮ್ಮಿಕೊಳ್ಳಲಾಗಿದೆ. ವಿಷಯದ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸ್ವಯಂ ಸೇವಕ ಸಂಘ ಮಾಡುತ್ತಿದೆ ಎಂದು ತಿಳಿಸಿದರು.
ಸಂಘವು ೧೦೦ ವರ್ಷ ತುಂಬಿದ್ದು ಸಂಘವನ್ನು ಕಟ್ಟಿದವರು ಇವತ್ತು ಯಾರು ಬದುಕಿಲ್ಲ ಇದರ ಜವಾಬ್ದಾರಿಯನ್ನು ಇಂದಿನ ಜನಾಂಗಕ್ಕೆ ಅರ್ಪಿಸಿದ್ದಾರೆ, ದೇಶವನ್ನು ಬೃಹತ್ ಸಂಘಟನೆಯಾಗಿ ಬೆಳೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ರವೀಂದ್ರ ತಗ್ಗಿನಮನೆ, ಸಂಸ್ಕಾರ ಭಾರತಿಯ ಶ್ರೀಧರ್ ಲಕ್ಕವಳ್ಳಿ, ರಾಜೀವ ಲೊಚನ್, ಪ್ರಭಾ ವಿಶ್ವನಾಥ್, ಗ್ರಾಮಾಂತರ ಸಮಿತಿಯ ಅಧ್ಯಕ್ಷ ಕೊಪ್ಪ ಹೇಮಂತ್‌ಕುಮಾರ್, ಉಪಾಧ್ಯಕ್ಷ ಸಾ ರ್ಥವಳ್ಳಿ ಶಿವಕುಮಾರ್, ಮಂಜುನಾಥ್‌ರ0ಗಾಪುರ, ಖಚಾಂಜಿ ಶಂಕರಮೂರ್ತಿ, ಕಾರ್ಯದರ್ಶೀ ವೈದ್ಯ ಶ್ರೀಧರ್, ರೇಣುಕಾರಾಧ್ಯ, ಬಳ್ಳೇಕಟ್ಟೆ ಸುರೇಶ್, ವಿನಯ್ ಮಡೆನೂರು, ಪ್ರಸನ್ನಕುಮಾರ್, ಮನೋ ಹರ್‌ರಂಗಾಪುರ, ಹಿಂದೂ ಜಾಗರಣಾ ವೇದಿಕೆ ಕೃಷ್ಣ, ಚಂದ್ರ ಶೇಖರ್, ಯೋಗಮಂಜುನಾಥ್, ಶಶಿವಧನದಿವಾಕರ್ ಹೊಘ ನಘಟ್ಟ, ಆಯರಹಳ್ಳಿ ಶಂಕರಪ್ಪ, ಆನಂದಮೂರ್ತಿ ರಾಮನಹಳ್ಳಿ, ನಾಗರಾಜು ಹಾಲ್ಕುರಿಕೆ, ಮಲ್ಲಿಕಾರ್ಜುನ, ಶಿವಾನಂದ್, ಉಮೇಶ್ ಗೋರಗೊ ಂಡನಹಳ್ಳಿ, ಆನಂದ್, ಬಾಬು, ಮತ್ತಿತ್ತರು ಹಾಜರಿದ್ದರು,
ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಸಮಾಜೋತ್ಸವ ಸಮಿತಿಯಿಂದ ಮನೆಮನೆ ಸಂಪರ್ಕ ಅಭಿಯಾನದ ಕಾರ್ಯಕ್ಕೆ ಚಾಲನೆ.



