
ತುಮಕೂರು: ಭಾರತ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಡಾ. ಬಿ.ಆರ್ ಅಂಬೇಡ್ಕರ್. ಭಾರತದ ಜನತೆ ಬಾಬಾ ಸಾಹೇಬರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗೋಣ, ಬಾಬಾ ಸಾಹೇಬರು ತಾವು ವಿಷ ಉಂಡು ನಮಗೆ ಅಮೃತವನ್ನು ಉಣ್ಣಿಸಿದ್ದಾರೆ, ಅವರು ಭಾರತದ ಪ್ರತಿಯೊಬ್ಬ ಪ್ರಜೆಗೂ ಸರ್ವ ಸಮಾನತೆಯ ಬದುಕನ್ನು ಕಾಣಲು ಅನುಕೂಲವಾಗುವಂತಹ ಕಾರ್ಯವನ್ನು ಮಾಡಿದ್ದಾರೆಂದು ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಅವರು ತಿಳಿಸಿದ್ದಾರೆ.
ತುಮಕೂರು ನಗರದ ಅಮಾನಿಕೆರೆ ಆವರಣದಲ್ಲಿ ಡಿಸೆಂಬರ್ ೬ ಶನಿವಾರ ಸಂಜೆ ೫.೩೦ ಗಂಟೆಯಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ ೬೯ನೇ ಪರಿ ನಿರ್ವಾಣ ದಿನದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮತ್ತು ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗೆಗೆ ಏನು ಹೇಳಿ ಬಣ್ಣಿಸಿದರು ಕಡಿಮೆಯೇ ವರ್ಷದ ೩೬೫ ದಿನವು ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ನಾವು ತಿಳಿದುಕೊಂಡರು ಸಾಲದು ಹಾಗಾಗಿ ಸಂವಿಧಾನದ ಮಹತ್ವವನ್ನು ನಾವು ಎಲ್ಲರಿಗೂ ತಿಳಿ ಹೇಳಬೇಕು ಇಂತಹ ಅಂಬೇಡ್ಕರ್ ರವರು ಮತ್ತೆ ಮತ್ತೆ ಜನಿಸಿ ಬರಲಿ ಎಂದರು.
ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಗೋವಿಂದರಾಜು ಮಾತನಾಡಿ ಇಂದು ೬೯ನೇ ಪರಿ ನಿರ್ವಾಣ ದಿನವನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸುದೈವ, ಈ ದಿನ ಬಹಳ ದುಃಖಕರವಾಗಿದೆ. ಅಂಬೇಡ್ಕರ್ ಅವರು ಇನ್ನೂ ಸ್ವಲ್ಪ ದಿನಗಳು ನಮ್ಮೊಟ್ಟಿಗೆ ಇರಬೇಕಾಗಿತ್ತು. ನಮ್ಮ ದೇಶಕ್ಕೆ, ಜನತೆಗೆ ಅವರ ಅವಶ್ಯಕತೆ ಬಹಳ ಇತ್ತು. ಅವರು ಜಗತ್ತಿಗೆ. ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನಾವು ಇಂದು ನೆನಪು ಮಾಡಿಕೊಳ್ಳುತ್ತಿದ್ದೇವೆಂದರೆ, ಎಲ್ಲರು ಇಂದು ಸಮಾನತೆಯಿಂದ ಬದುಕುತ್ತಿದ್ದೇವೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಸಮಾನತೆಯಿಂದಾಗಿ ಎಲ್ಲರೂ ಅವರಿಗೆ ಗೌರವವನ್ನು ನೀಡುವ ಮೂಲಕ ಪರಿನಿರ್ವಾಣ ದಿನವನ್ನು ಆಚರಿಸೋಣ ಎಂದು ತಿಳಿಸಿದರು.
ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈ.ಎಸ್ ಮಾತನಾಡಿ ನಮ್ಮ ದೇಶದಲ್ಲಿ ಏಕೈಕ ವ್ಯಕ್ತಿ ವಿಧಿವಶರಾದಾಗ ೧೯೩ ರಾಷ್ಟçಗಳು ತಮ್ಮ ದೇಶದ ಧ್ವಜಗಳನ್ನು ಕೆಳಗಿಳಿಸಿ ಗೌರವ ಸಮರ್ಪಣೆ ಮಾಡಿದ್ದವು. “ಆ ವ್ಯಕ್ತಿ ಯಾರೆಂದರೆ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು” ಧ್ವನಿ ಇಲ್ಲದವರಿಗಾಗಿ, ಸಾಮಾಜಿಕ ಸಮಾನತೆಗಾಗಿ,ನಿವಾರಣೆಗಾಗಿ, ತಮ್ಮ ಜೀವನವನ್ನೇ ಪಣವಾಗಿಟ್ಟು ಸಮಸಮಾಜದ ಕನಸು ಕಂಡು ಹೋರಾಡಿದ ಮಹಾನ್ ಚೇತನ ತ್ಯಾಗ ಮಹಿ ನಮ್ಮ ಡಾ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ರವರ ೬೯ನೇ ಪರಿನಿರ್ವಾಣ ದಿನವನ್ನು ಇಂದು ನಾವು ಆಚರಿಸುತ್ತಿದ್ದೇವೆ, ಅವರು ಇಂದು ನಮ್ಮೊಟ್ಟಿಗೆ ಇಲ್ಲ, ಆದರೆ ಅವರ ಆಶಯಗಳಿಗೆ ಮತ್ತು ಅವರು ನೀಡಿರುವ ಸಂವಿಧಾನಕ್ಕೆ ಸಾವಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾ ಅಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈ.ಎಸ್, ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜು ಕೆ, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಪುರದ ಕಟ್ಟೆ ಮಂಜು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಅಟ್ರಾಸಿಟಿ ಕಮಿಟಿ ಸದಸ್ಯರಾದ ರಂಜನ್ ಎ, ಕರ್ನಾಟಕ ಮಾದಿಗ ಸಮಾಜ ಜಿಲ್ಲಾ ಅಧ್ಯಕ್ಷರಾದ ರಾಜೇಶ್ ಎಚ್. ಬಿ, ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸದಸ್ಯರಾದ ಮೇಳ್ಳಿಕಲ್ಲಹಳ್ಳಿ ಯೋಗೀಶ್, ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ತುಮಕೂರು ನಗರ ಅಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲ್ಲಸ್ ಅಹ್ಮದ್, ಬಿಜೆಪಿ ಮುಖಂಡರಾದ ಗಂಗಾಧರ್, ಪದಾಧಿಕಾರಿಗಳಾದ ಅಜಿತ್, ಮೊಯಿನ್ ಅಹಮದ್, ಕಾವ್ಯ, ಸುಮಾ ರಂಗನಾಥ್, ಕೃಷ್ಣಮೂರ್ತಿ, ರಂಗಸ್ವಾಮಿಯ ಕೆ.ಎಸ್, ಶಿವಣ್ಣ ಕೊತ್ತಿಹಳ್ಳಿ, ಹನುಮನರಸಯ್ಯ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.



