
ತಿಪಟೂರು: ಪತ್ರಿಕಾ ವೃತ್ತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜ ಗೌರವ ನೀಡುತ್ತದೆ. ವೃತ್ತಿ ಬದ್ದತೆಯೊಂದಿಗೆ ಕೆಲಮಾಡಿ ಆಡಳಿತದಲ್ಲಿ ತಪ್ಪುಗಳಾದಾಗ ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ ಕಲ್ಪತರು ಕ್ರಾಂತಿ ಕನ್ನಡ ವಾರಪತ್ರಿಕೆ ೧೩ನೇ ವಾರ್ಷಿಕೋತ್ಸವ, ವಿಶೇಷ ಸಂಚಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ, ಭಾವಗೀತೆ ಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂವಿಧಾನದಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳ ಜೊತೆ ಪತ್ರಿಕಾರಂಗವನ್ನು ನಾಲ್ಕು ಅಂಗವಾಗಿ ಭಾವಿಸಿದ್ದೇನೆ. ಸಮಾಜದಲ್ಲಿ ನೈಜ ನೈತಿಕ ಹೊಣೆ ಹೊತ್ತ ಪತ್ರಿಕಾ ಅಂಗ ಪಾರದರ್ಶಕವಾಗಿ ಸತ್ಯದ ಹಾದಿಯಲ್ಲಿ ಸಾಗಬೇಕು ಅಲ್ಲದೆ ಪತ್ರಕರ್ತರು ಯಾವುದೇ ಸುದ್ದಿಯನ್ನು ನಿಖರವಾಗಿ ಮಾಡಿಬೇಕು. ಸಕಾರತ್ಮಕ ವಿಚಾರಗಳಿರಲಿ, ನಕಾರಾತ್ಮಕ ವಿಚಾರಗಳಿರಲಿ ವಸ್ತು ನಿಷ್ಠವಾಗಿ ವರದಿಮಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾಗ ಪ್ರೋತ್ಸಹಿಸಿ ಬೆನ್ನು ತಟ್ಟುವ ಕೆಲಸ ಮಾಡಿ, ಯಾವುದೇ ಕಾರಣಕ್ಕೂ ತಾರತಮ್ಯ ಮಾಡ ಮಾಡಬಾರದು. ನಡೆಯುವ ಮನುಷ್ಯ ಎಡವುದು ಸಹಜ, ಹಾಗೆ ಆಡಳಿತ ಮಾಡುವವರು ತಪ್ಪುಗಳನ್ನು ಮಾಡಿದ್ದಾಗ ತಿದ್ದುವ ಪ್ರಯತ್ನ ಮಾಡಬೇಕೇ ವಿನಹ ತೇಜೋವಧೆ ಮಾಡಬಾರದು, ವೃತ್ತಿಗೌರವ ಕಾಪಾಡಿಕೊಂಡು ಕೆಲಸ ಮಾಡಬೇಕು. ಸ್ಥಳೀಯ ಸುದ್ದಿಗಳಿಗೆ ಹೆಚ್ಚು ಆಧ್ಯತೆ ನೀಡಬೇಕು ಕಲ್ಪತರು ಕ್ರಾಂತಿ ಪತ್ರಿಕೆ ೧೩ ವರ್ಷ ಪೂರೈಸಿರುವುದು ಸಂತೋಷದ ವಿಚಾರ. ಪತ್ರಿಕೆ ಸಮಾಜಮುಖಿಯಾಗಿ ಕೆಲಸಮಾಡಿ ಜನಮೆಚ್ಚುಗೆಗೆ ಪಾತ್ರವಾಗಲಿ ಎಂದು ತಿಳಿಸಿದರು.
ದಿವ್ಯ ಸಾನಿಧ್ಯವಹಿಸಿದ ಷಡಕ್ಷರ ಮಠದ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಮಾತನಾಡಿ ಪತ್ರಕರ್ತ ಸಮಾಜದ ಹೋರೆಕೋರೆಗಳನ್ನ ತಿದ್ದುವ ಸಾಧನವಾಗಿ ಆದರ್ಶಮಯ ಜೀವನ ನಡೆಸಿದಾಗ ಸಮಾಜದಲ್ಲಿ ಮನ್ನಣೆಗಳಿಸಲು ಸಾಧ್ಯ, ಹಿಂದೆ ಪತ್ರಕರ್ತರನ್ನು ಕಂಡಾಗ ಗೌರವ ಮೂಡುತ್ತಿತ್ತು ಆದರೆ ಈಗಿನ ಕಾಲದಲ್ಲಿ ಪತ್ರಕರ್ತರನ್ನು ಕಂಡಾಗ ಭಯಪಡುವ ವಾತಾವಣ ಸೃಷ್ಟಿಯಾಗುತ್ತಿದೆ ಅನ್ನುವ ಮಾತುಗಳು ಇತ್ತಿಚಿಗೆ ಕೇಳಿಬರುತ್ತಿರುವುದು ವಿಷಾದಕರ ಬೆಳವಣಿಗೆ. ಪತ್ರಕರ್ತರು ಸಮಾಜದ ಕೈಗನ್ನಡಿಯಾಗಿ ಕೆಲಸ ಮಾಡಬೇಕು ವಿಚಾರಗಳ ಸತ್ಯತೆ ಮತ್ತು ಸ್ಪಷ್ಟತೆಗಳು ಗೊಂದಲಗಳಿಗೆ ದಾರಿಮಾಡಿಕೊಡದೆ, ವಸ್ತು ನಿಷ್ಟವಾಗಿ ವರದಿಮಾಡಿ,ಸಮಾಜದ ದಿಕ್ಸೂಚಿಯಾದಾಗ ಪತ್ರಿಕೆಯ ವರದಿಗಳು ಜನರ ಮನ್ನಣೆಗಳಿಸುತ್ತವೆ.ಹಾಗೂ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರ್ ಆಸ್ವತ್ರೆ ವೈದ್ಯ ಶ್ರೀಧರ್ ಯಾವುದೇ ವೃತ್ತಿ ಇರಲಿ ಅದರಲ್ಲಿ ನಮ್ಮ ಆಸಕ್ತಿ ಹೆಚ್ಚಿದ್ದರೆ ನಾವು ಯಶಸ್ಸು ಸಾಧಿಸಬಹುದು. ಪತ್ರಿಕೋದ್ಯಮ ಇತ್ತಿಚಿನ ದಿನಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಸಣ್ಣಪುಟ್ಟ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳು ಮಾಧ್ಯಮಗಳು, ಹೋರಾಟ ನಡೆಸ ಬೇಕಿದೆ. ಎಲ್ಲಾ ಸವಾಲುಗಳ ನಡುವೆ ವಸ್ತುನಿಷ್ಠ ವರದಿಗಳ ಮೂಲಕ ಸಮಾಜದಲ್ಲಿ ಬದಲಾವಣೆಗೆ ಕೆಲಸ ಮಾಡಬೇಕು. ಕಲ್ಪತರು ಕ್ರಾಂತಿ ೧೩ನೇ ವರ್ಷದ ವಾರ್ಷಿಕ ಸಮಾರಂಭವನ್ನು ಆಚರಿಸುತ್ತಿದ್ದಾರೆ ನಮ್ಮೆಲ್ಲರಿಗೂ ಸಂತಸವನ್ನು ತಂದಿದ್ದಾರೆ ಅವರ ವೃತ್ತಿ ಬದುಕು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ ಪತ್ರಿಕೆಗಳು ಸಮಾಜದ ಕಣ್ಣಾಗಿರಬೇಕು. ಕೇವಲ ಆಳುವ ವರ್ಗದ ಪರವಾಗಿರದೆ. ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಪತ್ರಿಕೋದ್ಯಮ ತಾಂತ್ರಿಕವಾಗಿ ಮುಂದು ವರೆಯುತ್ತಿದೆ. ಪತ್ರಕರ್ತರ ಸಮಾಜ ಹಾಗೂ ಸುದ್ದಿಗಳ ಜೊತೆಜೊತೆಗೆ ತಮ್ಮ ವಯುಕ್ತಿಕ ಜೀವನ ಹಾಗೂ ಕುಟುಂಬದ ಕಡೆಹೆಚ್ಚು ಗಮನ ನೀಡಬೇಕು, ಆರ್ಥಿಕವಾಗಿ ಸಧೃಡರಾದಾಗ ಸ್ವಾವಲಂಭಿ ಜೀವನ ಸಾಧ್ಯ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಹಾಗೂ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಎನ್.ಭಾನುಪ್ರಶಾಂತ್ ಮಾತನಾಡಿ ಸ್ವತಂತ್ರ ಪೂರ್ವದಿಂದಲ್ಲೂ ಪತ್ರಿಕೋದ್ಯಮವು ಸಮಾಜದ ಕೈಗನ್ನಡಿಯಾಗಿ,ಕೆಲಸ ಮಾಡುತ್ತಾ ಬಂದಿದೆ.ಅನೇಕ ಪತ್ರಕರ್ತರು ತಮ್ಮ ವರದಿಗಳ ಮೂಲಕವೇ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ನಿಟ್ಟಿನಲ್ಲಿ ಇಂದಿನ ಪತ್ರಕರ್ತರು ಯಾವುದೇ ಹಣ ಅಧಿಕಾರದ ಲಾಲಸೆಗಳಿಗೆ ಬಲಿಯಾಗದೆ.ವೃತ್ತಿಘನತೆ ಕಾಪಾಡಿಕೊಳ್ಳ ಬೇಕು ಎಂದು ತಿಳಿಸಿದರು
ಸಾರ್ವಜನಿಕ ಆಸ್ಪತ್ರೆ ಖ್ಯಾತ ವೈದ್ಯರಾದ ಡಾ.ರಕ್ಷಿತ್ ಗೌಡ ಮಾತನಾಡಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಭ್ರಷ್ಟಚಾರ, ಜನವಿರೋಧಿ ಕ್ರಮಗಳ ವಿರುದ್ದ ಧ್ವನಿಎತ್ತುವ ಕೆಲಸ ಮಾಡುತ್ತ, ವ್ಯವಸ್ಥೆಯನ್ನ ಜಾಗರೂಕವಾಗಿ ಇಡುವ ಕೆಲಸ ಮಾಡಬೇಕು. ಪತ್ರಿಕಾ ರಂಗವು ಸುದ್ದಿಯೊಂದಿಗೆ ಸಮಾಜದಲ್ಲಿ ಸಂಬAಧವನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾಪ0ಚಾಯಿತಿ ಮಾಜಿ ಸದಸ್ಯ ಅಶ್ವತ್ ನಾರಾಯಣ್ ಮಾತನಾಡಿ ಪತ್ರಿಕೆಗಳು ಸಮಾಜ ತಿದ್ದುವ ಕೆಲಸ ಮಾಡಬೇಕು. ಸಮಾಜಮುಖಿ ಕೆಲಸಗಳನ್ನ ಜನರಮುಂದೆ ಇಟ್ಟಾಗ ಓದುಗರಿಂದ ಸ್ಪಂದನೆ ಸಿಗುತ್ತದೆ. ಮಾಧ್ಯಮ ಜವಾಬ್ದಾರಿಯಿಂದ ಕೆಲಸ ಮಾಡಿ. ಅಸಮಾನತೆ ಅವ್ಯಸ್ಥೆಗಳನ್ನ ಆಡಳಿತದ ಗಮನಕ್ಕೆ ತರಬೇಕು. ಕಲ್ಪತರು ಕ್ರಾಂತಿ ಪತ್ರಿಕೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ನೊಂದವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್‌ಕುಮಾರ್. ಇಒ ಸುದರ್ಶನ್. ಗ್ರೇಡ್ ೨ ತಹಶೀಲ್ದಾರ್ ಜಗನ್ನಾಥ್. ಮಾಜಿ ನಗರಸಭಾ ಸದಸ್ಯ ನಾಗರಾಜು .ಮುಖಂಡರಾದ ಡಿ.ಆರ್ ಬಸವರಾಜು. ಬೆಸ್ಕಾಂ ಇಂಜಿನೀಯರ್ ನರಸಿಂಹ ಮೂರ್ತಿ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್‌ಕರೀಕೆರೆ ಜಿಲ್ಲಾನಿರ್ದೇಶಕ ಸುಪ್ರತೀಕ್ ಹಳೇಮನೆ. ಕಲ್ಪತರು ಕ್ರಾಂತಿ ಸಂಪಾದಕ ಮಂಜುನಾಥ್ ಹಾಲ್ಕುರಿಕೆ ಅಧ್ಯಕ್ಷತೆ ವಹಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಾಯಕಿ ಶ್ರೀಮತಿ ರೂಪನಾಗೇಂದ್ರ . ಜಯರಾಮ್ ತಾಂಡವಮೂರ್ತಿ ಮುಂತಾದವರು ಅಭಿನಂದಿಸಿಲಾಯಿತು. ಕಾರ್ಯಕ್ರಮದಲ್ಲಿ ಶ್ಯಾಮ್‌ಸುಂದರ್, ಶಾರದಮ್ಮ, ಕಿರಣ್‌ರಾಜ್, ಕುಮಾರ್, ದಯಾನಂದ್, ಮತ್ತಿತ್ತರು ಹಾಜರಿದ್ದರು.



