
ಕೊರಟಗೆರೆ: ತಂದೆ-ತಾಯಿಗಳ ಆಸ್ತಿಗೆ ಮಾತ್ರ ವಾರಸುದಾರರಾಗು ವುದು ಸಾಕಾಗುವುದಿಲ್ಲ, ಅವರು ಬದುಕಿನಲ್ಲಿ ಅನುಸರಿಸಿದ ಆ ದರ್ಶಗಳು, ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊ0ಡು ಹೋಗುವುದು ಮಕ್ಕಳ ಪ್ರಮುಖ ಕರ್ತವ್ಯ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಪೀಠಾ ಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಮಧೇನು ಕನ್ವೆನ್ಷನ್ ಹಾಲ್ ನಲ್ಲಿ ಜಗ್ಗೇಶ್ ಅಭಿಮಾ ನಿಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪೋಷಕರು ನಡೆಸಿದ ಆದರ್ಶ ಜೀವನವನ್ನು ಮಕ್ಕಳು ತಮ್ಮ ಜೀವನ ದಲ್ಲಿ ಅಳವಡಿಸಿಕೊಂಡು,ಸಮಾಜಮುಖಿ ಯಾಗಿ ಬದುಕು ನಡೆಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಸಾಧನೆ ಎಂಬುದು ಒಬ್ಬ ವ್ಯಕ್ತಿಯ ಪ್ರಯತ್ನ ಮಾತ್ರವಲ್ಲ, ಅನೇಕ ಮಂದಿಯ ಸಹಕಾರದ ಫಲ,‘ನಾನೊಬ್ಬನೇ ಸಾಧಿಸಿದ್ದೇನೆ’ ಎನ್ನುವು ದಕ್ಕಿಂತ, ‘ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎನ್ನುವ ಮನೋಭಾವವೇ ನಿಜವಾದ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸಿದರೆ, ಅವರ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಆದರ್ಶವಾಗುತ್ತದೆ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಸದಾ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರ ಬೇಕು ಸಂಘ,ಸAಸ್ಥೆಗಳು ಇಂತಹ ಕಾರ್ಯಗಳಿಗೆ ಪೂರಕವಾಗಿ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಅಲ್ಲದೇ, ಪಟ್ಟಣದ ಇತಿಹಾಸ ಪ್ರಸಿದ್ಧ ಗಂಗಾಧರೇಶ್ವರ ದೇವಾಲಯದ ಜೀರ್ಣೋದ್ಧಾ ರಕ್ಕೆ ತಾಲೂಕು ಆಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಮಾತನಾಡಿ, ಗ್ರಾಮಾಂತರ ಪ್ರದೇಶ ಗಳಲ್ಲಿ ಅನಾವಶ್ಯಕ ವ್ಯಾಜ್ಯಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಸಮಾಜಮುಖಿ ಸಂಘಟನೆಗಳು ಹಾಗೂ ಧಾರ್ಮಿಕ ಗುರುಗಳು ಜನರಲ್ಲಿ ಮನಪರಿವರ್ತನೆ ಮಾಡಿ, ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಪ್ರಗತಿಪರ ರೈತ ಪದ್ಮರಾಜ್, ಧಾರ್ಮಿಕ ಮುಖಂಡ ಎಂ.ಜಿ. ಸುಧೀರ್, ಪತ್ರಕರ್ತರಾದ ರಂಗಧಾ ಮಯ್ಯ, ಯಶಸ್, ಕೆ.ವಿ. ಪುರುಷೋತ್ತಮ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಪಿಎಸ್ ತೀರ್ಥೇಶ್, ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್. ರವಿಕುಮಾರ್, ಜಗ್ಗೇಶ್ ಅಭಿ ಮಾನಿ ಬಳಗದ ಜಿಲ್ಲಾಧ್ಯಕ್ಷ ಡಿ.ಎಲ್. ಮಲ್ಲಯ್ಯ,ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮರಾಜು,ಪ.ಪಂ ಮಾಜಿ ಸದಸ್ಯ ಕೆ.ಬಿ. ಮಂಜುನಾಥ್,ಪಿಡಿಓ ರಾಘವೇಂದ್ರ, ಮುಖಂಡರಾದ ಕಾರ್ ಮಹೇಶ್,ಶಂಕರ್,ಸೋಮ, ಪ್ರದೀಪ್ ಸೇರಿದಂತೆ ಹಲವರು ಇದ್ದರು.



