
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಿತ್ತಲಪುರ ಗ್ರಾಮದ ಸರ್ವೆ ನಂ ೫೨ ರಲ್ಲಿರುವ ಅಯ್ಯನಗುಡ್ಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅಧಿಕಾರಿಗಳು ರಾತ್ರಿ ಏಳುಗಂಟೆ ಸಮಯದಲ್ಲಿ ಬಂದು ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ಗುರುತು ಮಾಡಿ ಹೊಗಿರುವುದು ಇದೀಗ ಗ್ರಾಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ,
ಶನಿವಾರ ರಂದು ತುಮಕೂರು ಉಪ ವಿಭಾಗಧಿಕಾರಿ,ತಹಶೀಲ್ದಾರ್,ಅರಣ್ಯ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಹಿತ್ತಲಪುರ ಗ್ರಾಮದ ಅಯ್ಯನಗುಡ್ಡೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ಗುರುತು ಮಾಡಿರುವುದು ಇದೀಗ ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಬುಧವಾರ ಉಜ್ಜನಿ, ಹಿತ್ತಲಪುರ, ಹಾಗೂ ಬಿ.ಜಿ ಕೋಪ್ಪಲು ಗ್ರಾಮಸ್ಥರು ಅಯ್ಯನಗುಡ್ಡೆ ಯಲ್ಲಿರುವ ಸಾಧು ಸಂತರು ವಾಸಿಸುವ ಗುಹೆಗೆ ಬೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಕಲ್ಲು ಗಣಿಗಾರಿಕೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು, ಬಳಿಕ ಮಾಧ್ಯಮದವರೊಂದಿಗೆ ಗ್ರಾಮಸ್ಥರು ಮಾತನಾಡಿ ಶನಿವಾರ ರಾತ್ರಿ ಏಳು ಗಂಟೆಯ ಸಮಯದಲ್ಲಿ ಅಧಿಕಾರಿಗಳು ಬಂದು ಗಣಿಗಾರಿಕೆ ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ದಾರೆ ಅಧಿಕಾರಿಗಳು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಗ್ರಾಮಸ್ಥರ ಗಮನಕ್ಕೆ ತರದೆ ರಾತ್ರೋ ರಾತ್ರಿ ಸ್ಥಳ ಪರಿಶೀಲನೆ ನಡೆಸಿರುವ ಕಾರಣ ಏನು, ಕಲ್ಲು ಗಣಿಗಾರಿಕೆ ನಡೆಸಲು ಗುರುತಿಸಿರುವ ಸ್ಥಳದಲ್ಲಿ ಸಾಧು ಸಂತರು ನೆಲೆಸಿದ್ದು ಅವರು ಕುಂತು ನಿಂತು ಹೊಗಿರುವ ಕುರುಹುಗಳಿವೆ ಸದ ತುಂಬಿರುವ ಸೊಣೆ (ಕಲ್ಯಾಣಿ) ಇದೆ ಸಿದ್ದಪುರುಷರು ಇಂದಿಗೂ ಒಡಾಡುತ್ತಾರೆ ಎಂಬುದು ಹಿರಿಯರ ನಂಬಿಕೆ ಮಕರ ಸಂಕ್ರಾ0ತಿಯ0ದು ಇಲ್ಲಿ ಪೂಜೆ ನಡೆಯುತ್ತದೆ ವನ್ಯ ಜೀವಿಗಳಾದ ಚಿರತೆ,ಕರಡಿ,ನರಿ,ತೋಳಗಳು,ನವಿಲು ವಾಸಸ್ಥಾನವಾಗಿದೆ ಬೆಟ್ಟದಲ್ಲಿರುವ ಸಿದ್ದಪುರುಷರ ಗುಹೆಗು ಹೇಮಗಿರಿ ವರದರಾಜ ಸ್ವಾಮಿಯ ದೇವಾಲಯಕ್ಕೂ ನೇರ ಸಂಪರ್ಕ ಇದೆ, ಇಷ್ಟೆಲ್ಲ ಇರುವ ಈ ಪ್ರದೇಶದಲ್ಲಿ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಸುತ್ತಮುತ್ತಲ ಹತ್ತು ಹಳ್ಳಿಗಳ ರೈತರಿಗೆ ಮರಣ ಶಾಸನ ಬರೆಯಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು ಯಾರೊ ಒಬ್ಬರ ಉದ್ದಾರಕ್ಕಾಗಿ ಬೆಟ್ಟದ ಸುತ್ತಮುತ್ತಲ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆಯಲಾಗಿರುವ ರೇಷ್ಮೆ,ತೆಂಗು,ಅಡಕೆ,ಮಾವು,ರಾಗಿ,ಭತ್ತ ಬೇಳೆಯಲಾಗಿದೆ ಪಕ್ಕದಲ್ಲೆ ಶಿವನಹಳ್ಳಿ ಕೆರೆ ಇದೆ ಉಜ್ಜನಿ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ಯೋಜನೆಗೆ ನಿವೇಶನ ಗುರುತಿಸಲಾಗಿದೆ ಇಷ್ಟೆಲ್ಲ ಹೊಂದಿಕೊ0ಡ0ತಿರುವ ಅಯ್ಯನ ಗುಡ್ಡೆಯಲ್ಲಿ ಗಣಿಗಾರಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಲು ಮುಂದಾಗಿರುವುದು ಸಾವಿರಾರು ರೈತರ ಕುಟುಂಬಗಳ ಹೊಟ್ಚೆಯ ಮೇಲೆ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ,ಈಗಾಗಲೆ ಬಿಸೆಗೌಡನ ದೊಡ್ಡಿ ಗ್ರಾಮದಲ್ಲಿ ಗಣಿಗಾರಿಕೆಯ ಕಾರಣದಿಂದ ನೂರಾರು ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾಗಿ ಮನೆಗೆ ಬೀಗ ಹಾಕಿಕೊಂಡು ಜೀವನಕ್ಕಾಗಿ ತಂದೆ ತಾಯಿ ಮಕ್ಕಳ ಸಹಿತ ಬೆಂಗಳೂರು ಸೇರಿದ್ದಾರೆ ಅಧಿಕಾರಿಗಳೆ ನಿಮ್ಮಿಂದ ಇನ್ನೆಷ್ಟು ಮಂದಿ ರೈತರು ಗ್ರಾಮಗಳನ್ನು ತೊರೆಯಬೇಕು ಇದು ಈಗೆ ಮುಂದುವರೆದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಇದಕ್ಕೆ ಅವಕಾಶ ಕಲ್ಷಿಸಬೇಡಿ ಎಂದರು ಈ ವೇಳೆ ಸ್ಥಳಿಯರಾದ ನಾಗೇಶ್,ಚನ್ನೇಗೌಡ,ರವಿಕುಮಾರ್,ವಿಶ್ವನಾಥ್,ಶಿವಣ್ಣ,ರಾಜೇಶ್,ಶ್ರೀ ಶ್ರೀಧರ,ಗವಿಯಪ್ಪ,ಸಿಂದಲಿ0ಗ, ಶಿವರಾಜು, ರವಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು





