ಕುಣಿಗಲ್: ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳನ್ನು ಬರಿ ಪವಾಡಪುರುಷರಾಗಿ ನೋಡಿ ದ್ದೇವೆ ಆದರೆ ಅವರ ಜ್ಞಾನಶಕ್ತಿ ಸಮಾಜದ ಡೊಂಕು ತಿದ್ದುವ ಭಂಡಾರವಾಗಿತ್ತು ಎಂದು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ ತಿಳಿಸಿದರು.
ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂ ಗೇಶ್ವರ ದೇಗುಲದ ಸಮೀಪವಿರುವ ಶ್ರೀ ಸಿದ್ಧ ಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುಣಿಗಲ್ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಾಗಡಿ ಕಸಾಪ ಸಹಯೋಗದಲ್ಲಿ ನಡೆದ ಶ್ರೀ ಗುರು ಸಿದ್ಧಲಿಂಗೇಶ್ವರ ಸಮಗ್ರ ವಚನಗಳ ಸಂಗ್ರಹ ಮತ್ತು ಅರ್ಥ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಿದ್ಧಲಿಂಗೇಶ್ವರ ತತ್ವಗಳು ಮತ್ತು ಅವರ ಆ ಧ್ಯಾತ್ಮ ಸಿದ್ಧಾಂತ ಬದುಕಿನ ದಿಕ್ಕನ್ನು ಬದಲಿಸುತ್ತದೆ ಯೋಗಶಕ್ತಿ, ತಪಶಕ್ತಿಯಿಂದ ಇಂದಿಗೂ ಸಾಕಷ್ಟು ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಇವರು ಬರೆದಿರುವ ಅಮೂಲ್ಯ ವಚನಗಳ ಸಂಗ್ರಹವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಿದೆ ವಚನಗಳಿಗೆ ಭಾವಾರ್ಥಗಳನ್ನು ಬರೆದು ಪುಸ್ತಕ ಹೊರತಂದು ಸಿದ್ಧಲಿಂಗೇಶ್ವರರ ವಚನಗಳನ್ನು ಉಳಿಸುವ ಕೆಲಸವಾಗಿದೆ.
ಸಿದ್ಧಲಿಂಗೇಶ್ವರ ಸ್ವಾಮಿಗಳ ಗದ್ದಿಗೆ ದರ್ಶನ ಪಡೆಯುವವರು ಪುಸ್ತಕವನ್ನು ಓದಬೇಕು ಮತ್ತು ಎಡೆಯೂರು ಇತಿಹಾಸ ತಿಳಿಯಬೇಕು ಜತೆಗೆ ಕುಣಿ ಗಲ್ ಕಸಾಪ ಒಳ್ಳೆಯ ಕೆಲಸಮಾಡುತ್ತಿದೆ ಎಂದರು.
ಪುಸ್ತಕದ ಕತೃ ಡಾ.ಸಿದ್ಧಲಿಂಗಸ್ವಾಮಿ ಮಾತ ನಾಡಿ, ಹಳಗನ್ನಡ ಶೈಲಿಯ ಸಿದ್ಧಲಿಂಗೇಶ್ವರ ಸ್ವಾಮಿಗಳ ವಚನಗಳ ಕಲೆಹಾಕಿ ಅವುಗಳಿಗೆ ಹೊಸಕನ್ನಡ ರೂಪ ನೀಡಿ ಸತತ ೪ ವರ್ಷ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ಸಂಶೋಧನೆ ಮಾಡಿ ಪುಸ್ತಕ ಬರೆಯುವ ಕೆಲಸವಾಗಿದೆ. ಈ ಪುಸ್ತಕದ ಪ್ರತಿಯೊಂದು ವಚನಗಳು ಕೂಡ ನಮ್ಮ ಬದಕನ್ನು ಮೌಲ್ಯಯುತವಾಗಿ ಮುನ್ನೆಡೆಸುವ ದಾರಿ ದೀಪವಾಗಿದೆ. ಸಿದ್ಧಲಿಂಗೇಶ್ವರ ದೇಗುಲದ ಗ್ರಂಥಾಲಯಗಳಿಗೂ ಪುಸ್ತವನ್ನು ನೀಡುವ ಕೆಲಸ ಮಾಡುತ್ತೇವೆ ಸಿದ್ಧಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪುಸ್ತಕ ಅನಾವರಣಗೊಂಡಿದ್ದು ನನ್ನ ಪುಣ್ಯ ಕುಣಿಗಲ್ ಕಸಾಪಗೆ ಅಭಿನಂದಿಸುವೆ ಎಂದರು.
ಕುಣಿಗಲ್ ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್, ಮಾತನಾಡಿ ಇಂತಹ ಪುಸ್ತಕಗಳು ಸಿದ್ಧವಾಗುವುದು ಇಂದಿನ ಜಾಯಮಾನದಲ್ಲಿ ತುಂಬ ವಿರಳ ಇಂತಹ ಪ್ರಯತ್ನ ನಡೆಸಿರುವ ಯುವಲೇಖಕರ ಶ್ರಮ ಅಪಾರ ಪುಸ್ತಕವನ್ನು ಪ್ರೀತಿಸುವ ಕೆಲಸ ಮಾಡೋಣ ಮನೆಗಳಲ್ಲಿ ಪುಟ್ಟ ಗ್ರಂಥಾಲಯ ಮಾಡಿಕೊಂಡು ನಿತ್ಯ ಅಧ್ಯ ಯನಮಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿ ಸಲು ನಾವು ಅಳಿಲು ಸೇವೆಮಾಡುತ್ತಿದ್ದೇವೆ, ಕುಣಿ ಗಲ್ ತಾಲೂಕು ಕೇಂದ್ರದ ಕನ್ನಡ ಭವನದ ಲ್ಲೂ ಕಸಾಪ ಗ್ರಂಥಾಲಯ ಮಾಡುತ್ತಿದೆ ಎಂದರು.
ಮಾಗಡಿ ಕಸಾಪ ಅಧ್ಯಕ್ಷ ತಿ.ನಾ ಪದ್ಮನಾಭ ಮಾತನಾಡಿ, ಸಿದ್ಧಗಂಗೆ ಸಿದ್ಧಲಿಂಗಶ್ರೀಗಳು ಮತ್ತು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಕೂಡ ಸಿದ್ಧಲಿಂಗೇಶ್ವರ ಸಮಗ್ರ ವಚನದ ಪುಸ್ತಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಶಿರ್ವಾದದ ಮುನ್ನುಡಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ವಚನ,ಭಾವಾ ರ್ಥ ಜತೆಗೆ ಸಿದ್ಧಲಿಂಗ ಶ್ರೀಗಳ ಬದುಕು ಮತ್ತು ಪವಾಡಗಳ ಬಗ್ಗೆ ಮಾಹಿತಿ ಇದೆ ಎಂದರು.
ಬಾಳೆಹೊನ್ನುರು ಶಾಖೆಯ ಎಡೆಯೂರು ರೇಣುಕಾ ಶಿವಾಚಾರ್ಯ ಶ್ರೀಗಳು ಕೃತಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ಆಶಿರ್ವಚನ ನೀಡಿದರು.
ಗದ್ದಿಗೆ ಮೇಲೆ ಪುಸ್ತಕವಿಟ್ಟು ಪೂಜೆ:
ಪುಸ್ತಕ ಬಿಡುಗಡೆಗೂ ಮುನ್ನ ಸಿದ್ಧಲಿಂಗೇಶ್ವರ ಗದ್ದಿಗೆಮೇಲೆ ಪುಸ್ತಕವಿಟ್ಟು ಪೂಜೆ ಸಲ್ಲಿಸಿ ದೇಗುಲಕ್ಕೆ ಪುಸ್ತಕ ಅರ್ಪಿಸುವ ಕೆಸಲಮಾಡಲಾಯಿತು.
ಸಿದ್ಧಲಿಂಗೇಶ್ವರ ಪ್ರೌಢಶಾಲೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಗಿರಿಗೌಡ,ಗೌರವಾಧ್ಯಕ್ಷ ಡಿ.ಸಿ ರಾಮಕೃಷ್ಣ, ಕಾರ್ಯದರ್ಶಿ ಚಂದ್ರಶೇಖರ್, ಉಮೇಶ್,ಪುಟ್ಟಸ್ವಾಮಿ,ಗೋವಿಂದರಾಜು, ಶಿಕ್ಷಣ ಅಧಿಕಾರಿ,ಎ.ಟಿ ರಂಗದಾಸಪ್ಪ, ಕುಣಿಗಲ್ ಬಿಇಒ ಬೋರೇಗೌಡ, ಕುಣಿಗಲ್ ತಾಲೂಕು ಕಸಪಾ ಕೋಶಾಧ್ಯಕ್ಷ ರಾಮಣ್ಣ, ಎಡೆಯೂರು ಹೋಬಳಿ ಕಸಾಪ ಅಧ್ಯಕ್ಷ ಶಿವಕುಮಾರ್, ಸಿದ್ಧಲಿಂಗೇಶ್ವರ ಪ್ರೌಢಶಾಲೆಯ ಹಳೆವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಜರಿದ್ದರು.

(Visited 1 times, 1 visits today)