ಪಾವಗಡ: ಪಟ್ಟಣದ ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವದ ಅಂಗವಾಗಿ ಏರ್ಪ ಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಸಿದ್ದ ನಂಜನಗೂಡು ನಂಜು0ಡೇ ಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ ಧೀಕ್ಷಿತ್ ಭಾಗಿಯಾಗಿ ಜಪಾನಂದ ಶ್ರೀಗಳನ್ನು ಗೌರವಿಸಿ ಆಶೀರ್ವಾದ ಪಡೆದರು.
ಗುರುವಾರ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವದ ಅಂಗವಾಗಿ ಆಶ್ರಮದಲ್ಲಿ ಭಕ್ತರಿಗೆ ಶ್ರೀರುದ್ರಪ್ರಶ್ನ ಹಾಗೂ ಚಮಕ ಪಾಠಗಳ ಭೋಧನೆಯ ಅಂತಿಮಘಟ್ಟದಲ್ಲಿ ಶ್ರೀನಂಜುAಡೇಶ್ವರ ಸ್ವಾಮಿಯ ವಸ್ತç, ಬಿಲ್ವಪತ್ರೆ ಹಾಗೂ ಪ್ರಸಾದಗಳೊಂದಿಗೆ ಆಗಮಿಸಿದ ನೀಲಕಂಠ ಧೀಕ್ಷಿತ್ ರವರು ಆಶ್ರಮದ ಬೆಳವಣಿಗೆ, ನಿರಂತರ ಸೇವಾಕಾರ್ಯಗಳು ಹಾಗೂ ಮತ್ತಿತರ ವಿಷಯಗಳ ಕುರಿತು ಸುಧೀರ್ಘ ಮಾತುಕತೆ ನಡೆಸಿದರು.
ಇದೇ ವೇಳೆ ಶ್ರೀರುದ್ರ ಪಾಠವನ್ನು ನಂಜು0ಡೇಶ್ವರಸ್ವಾಮಿ ಪಾದಾರವಿಂದಗಳಿಗೆ ಮಸರ್ಪಿಸಬೇಕೆಂಬ ಬಯಕೆ ವ್ಯಕ್ತಪಡಿಸಿದ ಶ್ರೀಗಳಿಗೆ ಹೊಸವರ್ಷದ ಏಪ್ರಿಲ್ ೧೮ರಂದು ನಂಜನಗೂಡಿನ ಶಂಕರಮಠದ ಸಹಕಾರದಿಂದ ದೇವಸ್ಥಾನದಲ್ಲಿ ಸಲಕ ಏರ್ಪಾಟು ಮಾಡುವ ಭರವಸೆಯೊಂದಿಗೆ ಪ್ರಕಟಣೆ ನೀಡಿದರು.
ಈ ವೇಳೆ ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಜಿ.ಎಸ್.ಅನಿಲ್ ಕುಮಾರ್, ಜಗದೀಶ್, ರಾಮನಾಥ್, ರಾಮಮೂರ್ತಿ, ಚೈತ್ರ, ಭರತ್, ಸ್ಥಳೀಯ ಅರ್ಚಕ ಸೋಮಸುಂದರA ಸೇರಿದಂತೆ ಆಶ್ರಮದ ಭಕ್ತರು ಇದ್ದರು.



