
ಪಾವಗಡ: ಕ್ರಿಸ್ಮಸ್ ಎಂಬುದು ದೇವರ ಪ್ರೀತಿಯ ಮಹಾ ಸಂಕಲ್ಪದ ಸಂಕೇತವಾಗಿದ್ದು, ಯೇಸು ಕ್ರಿಸ್ತನ ದಿವ್ಯ ಜನನದ ಸ್ಮರಣರ‍್ಥವಾಗಿ ಜಗತ್ತಿನಾದ್ಯಂತ ಆಚರಿಸಲಾಗುವ ಮಹತ್ವದ ಹಬ್ಬವಾಗಿದೆ. ದೇವರು ಲೋಕವನ್ನು ಅಷ್ಟಾಗಿ ಪ್ರೀತಿಸಿದ್ದರಿಂದ ತನ್ನ ಏಕಮಾತ್ರ ಪುತ್ರನನ್ನು ಮಾನವ ರಕ್ಷಣೆಗೆ ನೀಡಿದನು ಎಂಬ ಸಂದೇಶವನ್ನು ಕ್ರಿಸ್ಮಸ್ ಹಬ್ಬ ಸಾರುತ್ತದೆ.
ಈ ಹಿನ್ನೆಲೆಯಲ್ಲಿ ಪಾವಗಡದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮಿಷನ್ ರ‍್ಚ್‌ನಲ್ಲಿ ದಿನಾಂಕ ೨೪-೧೨-೨೦೨೫ರ ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬವನ್ನು ಭಕ್ತಿಪರ‍್ವಕವಾಗಿ ಹಾಗೂ ಸಂತೋಷಭರಿತವಾಗಿ ಆಚರಿಸಲಾಯಿತು. ರ‍್ಚ್ ಆವರಣವನ್ನು ದೀಪಾಲಂಕಾರ, ನಕ್ಷತ್ರಗಳು ಹಾಗೂ ಕ್ರಿಸ್ಮಸ್ ಅಲಂಕಾರಗಳಿಂದ ಸುಂದರವಾಗಿ ಸಿಂಗಾರಿಸಲಾಗಿತ್ತು. ಭಕ್ತವಿಶ್ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮವನ್ನು ಇನ್ನಷ್ಟು ರ‍್ಥಪರ‍್ಣಗೊಳಿಸಿದರು.
ದಿವ್ಯ ಬಲಿಪೂಜೆಯ ಸಂರ‍್ಭದಲ್ಲಿ ರ‍್ಮಕೇಂದ್ರದ ಗುರುಗಳಾದ ವಂದನೀಯ ಸ್ವಾಮಿ ಫಾದರ್ ಕಾನಿಕಾದಾಸ್ ಅವರು ತಮ್ಮ ಪ್ರವಚನದ ಮೂಲಕ ಕ್ರಿಸ್ತನ ಜನನ ತರುವ ಶಾಂತಿ, ಪ್ರೀತಿ, ಕ್ಷಮೆ ಹಾಗೂ ಸಹೋದರತ್ವದ ಸಂದೇಶವನ್ನು ಮನಮುಟ್ಟುವಂತೆ ವಿವರಿಸಿದರು. ಇದೇ ಸಂರ‍್ಭದಲ್ಲಿ ದೇಶ, ರಾಜ್ಯ, ಪಾವಗಡ ತಾಲ್ಲೂಕಿನ ಒಳಿತಿಗಾಗಿ, ಜನನಾಯಕರ ಆರೋಗ್ಯ ಹಾಗೂ ಸೇವೆಗಾಗಿ ಮತ್ತು ವಿದ್ಯರ‍್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಪ್ರರ‍್ಥನೆ ಸಲ್ಲಿಸಲಾಯಿತು. ರ‍್ಮಭಗಿನಿಯರು, ಪಾಲನಾ ಸಮಿತಿ ಸದಸ್ಯರು ಹಾಗೂ ಕುಟುಂಬ ಸದಸ್ಯರು ಈ ಪ್ರರ‍್ಥನೆಯಲ್ಲಿ ಭಾಗವಹಿಸಿದರು.
ರ‍್ಚ್‌ನಲ್ಲಿ ಕ್ರಿಬ್ (ಗೋಶಾಲೆ) ಪ್ರರ‍್ಶನ, ಕ್ರಿಸ್ಮಸ್ ಕೇರಲ್ಸ್ ಹಾಗೂ ಪ್ರಭು ಕ್ರಿಸ್ತನ ಆರಾಧನಾ ಗೀತೆಗಳು ಸಂಭ್ರಮಾಚರಣೆಗೆ ವಿಶೇಷ ಮೆರುಗು ನೀಡಿದವು. ಬಳಿಕ ಮಕ್ಕಳು, ಯುವಕರು, ಕುಟುಂಬ ಸದಸ್ಯರು ಹಾಗೂ ಭಕ್ತವಿಶ್ವಾಸಿಗಳು ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪರಸ್ಪರ ಉಡುಗೊರೆಗಳ ವಿನಿಮಯವೂ ನಡೆಯಿತು.
ಕರ‍್ಯಕ್ರಮದ ಅಂತ್ಯದಲ್ಲಿ ಸಭಿಕರಿಗೆ ಕ್ರಿಸ್ಮಸ್ ಕೇಕ್ ಹಾಗೂ ಸಿಹಿತಿಂಡಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಈ ಕ್ರಿಸ್ಮಸ್ ಉತ್ಸವವು ಸಭಿಕರ ಮನಗಳಲ್ಲಿ ದೇವರ ಪ್ರೀತಿ, ಸೇವಾಭಾವ ಹಾಗೂ ಸಹೋದರತ್ವವನ್ನು ಮತ್ತಷ್ಟು ಗಾಢಗೊಳಿಸಿತು.
ಈ ವೇಳೆ ರ‍್ಮ ಕೇಂದ್ರದ ಪಾಲನಾ ಸಮಿತಿಯ ಎಸ್ ಮೈಕಲ್ ನಾಡರ್, ಮರಿಯಾ ಜೋಸೆಫ್, ಕೆವಿನ್ ಮತ್ತು ಕುಟುಂಬಸ್ಥರು ಸೆಂಟ್ ಅನ್ಸ್ ಮಡ್ರಾಸ್ ಸಂಸ್ಥೆಯ ರ‍್ಮಭಗಿನಿಯರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು



