
ತುಮಕೂರು: ಭೌತಿಕ ಜೀವನ ಸಮೃದ್ಧಗೊಂಡ0ತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಮಾನವ ಜೀವನ ನಿರರ್ಥಕ. ವೀರಶೈವರು ಲಿಂಗಾಯತರು ಒಂದಾಗಿ ಬಾಳಿದರೆ ಧರ್ಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿ ಕೊಳ್ಳದಿದ್ದರೆ ಮಾನವ ಜೀವನ ನಿರರ್ಥಕವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಎಲ್ಲರನ್ನು ಉದ್ಧರಿಸಿದ್ದಾರೆ. ವೀರಶೈವ ಧರ್ಮ ವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಆದರೆ ಆ ಧರ್ಮ ವೃಕ್ಷದ ಹೂ ಹಣ್ಣುಗಳಂತೆ ಬಸವಾದಿ ಶಿವಶ ರಣರಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ವಿಜ್ಞಾನ ನಾಗರೀಕತೆ ಮತ್ತು ರಾಜಕೀಯ ಸಬಲ ಸಂಘರ್ಷದಲ್ಲಿ ಧರ್ಮ ಸಂಸ್ಕೃತಿ ನಾಶಗೊಳ್ಳಬಾರದು. ನೀತಿಯಿಲ್ಲದ ಶಿಕ್ಷಣ ಭೀತಿ ಇಲ್ಲದ ಶಾಸನ ಮಿತಿಯಿಲ್ಲದ ಜೀವನ ಸೀಮಾತೀತವಾದ ಸ್ವಾತಂತ್ರö್ಯ ಇವು ರಾಷ್ಟç ವಿಘಾತಕಗಳೆಂಬ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಾಣಿಯನ್ನು ನಾವೆಲ್ಲರೂ ಗಮನಿಸಬೇಕಾಗಿದೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಶ್ರೇಯಸ್ಸು ವೀರಶೈವ ಲಿಂಗಾಯತ ಧರ್ಮಕ್ಕೆ ಇದೆ ಎಂದ ಅವರು ರಾಜಕೀಯದಲ್ಲಿ ಧರ್ಮ ಇರಬೇಕು ಎಂದರು.
ವಿನಯ ಬಿದಿರೆ ಅವರು ಧರ್ಮ ಮತ್ತು ರಾಷ್ಟç ಭಕ್ತಿ ಕುರಿತು ಉಪ ನ್ಯಾಸವನ್ನಿತ್ತರು. ಹೆಚ್.ಎನ್.ಚಂದ್ರಶೇಖರ್, ವಿ.ಎಸ್. ಶಶಿಧರ್, ಟಿ.ಎ.ದಕ್ಷಿ ಣಾಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನವೀನ ನಾಯಕ, ತೋಂಟಾರಾಧ್ಯ, ಬಿ.ಹೆಚ್.ಪಂಚಾಕ್ಷರಯ್ಯ, ಗುರು ರೇಣುಕಾರಾಧ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವವನ್ನು ವಹಿಸಿ ಮಾತನಾಡಿದರು. ಟಿ.ಆರ್.ಸದಾಶಿವಯ್ಯ ಸ್ವಾಗತಿಸಿದರು. ಟಿ.ಎಸ್.ಕರುಣಾರಾಧ್ಯರು ನಿರೂಪಿಸಿದರು. ಶ್ರೀಮತಿ ರಶ್ಮಿ ಮತ್ತು ಮಧು ಕುಟುಂಬ ವರ್ಗದವರು ಪೂಜಾ ಸೇವೆ ಸಲ್ಲಿಸಿದರು.



