
ಹುಳಿಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸೋರಲಮಾವು ಶ್ರೀ ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಚಿಕ್ಕನಾಯಕನಹಳ್ಳಿ ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮನುಷ್ಯನಿಗೆ ಬದುಕಿ ಬಾಳ ಬೇಕಾದರೆ ಧರ್ಮದ ಆಚರಣೆಗೆ ಧರ್ಮದ ಅವಶ್ಯಕತೆ ಬಹಳಷ್ಟು ಇದೆ ಅದನ್ನು ಆಚರಣೆಗೆ ತರಬೇಕು. ನಾವು ಧರ್ಮವನ್ನು ರಕ್ಷಣೆ ಮಾಡಿದರೆ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತದೆ ಎಲ್ಲೂ ಕೈ ಬಿಡಲ್ಲ. ಆದುನಿಕ ಯುಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಯೋಜನೆ ದಾರಿ ದೀಪವಾಗುತ್ತಿದೆ ಎಂದರು.
ಗ್ರಾಪಂ ಸದಸ್ಯರಾದ ಸಿದ್ದಲಿಂಗಸ್ವಾಮಿ ಮಾತನಾಡಿ ಧರ್ಮಸ್ಥಳ ಸಂಸ್ಥೆ ಮಾಡದ ಕೆಲಸ ಇಲ್ಲ. ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವಲ್ಲಿ ನೇರವಾಗಿದೆ. ಆರ್ಥಿಕ ಸ್ವಾವಲಂಬನೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಆರ್ಥಿಕ ಶಿಸ್ತು ಕಲ್ಪಿಸಿ ಕೊಟ್ಟಿದೆ ಎಂದು ತಿಳಿಸಿದರು. ಗ್ರಾ.ಪಂ ಅಧ್ಯಕ್ಷರಾದ ಚಂದ್ರಮ್ಮ, ಯೋಜನಾಧಿಕಾರಿಗಳಾದ ಪ್ರೇಮಾನಂದ ಎಲ್.ಬಿ, ಚೌಳಕಟ್ಟೆ ಗ್ರಾಪಂ ಸದಸ್ಯರುಗಳಾದ ಮಂಜುನಾಥ್, ಪವಿತ್ರ, ಶಾರದಮ್ಮ, ಹಾಲಿನ ಡೈರಿ ಅಧ್ಯಕ್ಷ ವಸಂತ್ ಕುಮಾರ್. ಊರಿನ ಗಣ್ಯರಾದ ಕರಿಯಪ್ಪ ಸ್ವಾಮಿ, ರಂಗಸ್ವಾಮಿ, ತಿಮ್ಮಯ್ಯ, ಮೂರ್ತಣ್ಣ, ಕಾನಕೆರೆ ಒಕ್ಕೂಟ ಅಧ್ಯಕ್ಷ ದೇವರಾಜು, ಸೋರಲಮಾವು ಒಕ್ಕೂಟ ಅಧ್ಯಕ್ಷರಾದ ಕವಿತಾ, ಎಸ್‌ಡಿಎಂಸಿ ಅಧ್ಯಕ್ಷರಾದ ಶಿವಕುಮಾರ್. ಸೇವಾಪ್ರತಿನಿಧಿಗಳಾದ ಮಂಜುಳಾ, ರೇಖಾ, ಜಂಶಿದ, ಧರಣೇಶ್, ಕವಿತಾ, ರೇವಣ್ಣ ಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಕೃಷಿ ಮೇಲ್ವಿಚಾರಕ ಪ್ರಕಾಶ್ ಮಾಡಿದರು. ಸ್ವಾಗತ ಕಾಂತಾಮಣಿ ಮಾಡಿದರು. ವಲಯದ ಮೇಲ್ವಿಚಾರಕ ವಸಂತ್ ವಂದಿಸಿದರು.



