
ಮಧುಗಿರಿ: ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೃಕುಂಠ ಏಕಾದಶಿ ಪ್ರಯುಕ್ತ ಏರ್ಪಡಿಸಿದ್ದ ದ್ವಾರದರ್ಶನ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿ0ದ ನೆರವೇರಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ದಂಪತಿ, ಎಂಎಲ್ಸಿಆರ್ ರಾಜೇಂದ್ರ ,ಹಿರಿಯ ಐಎಎಸ್ ಅಧಿಕಾರಿ ಉಮಾಶಂಕರ್ ,ಐಎಎಸ್ ಅಧಿಕಾರಿ ಮಧುಗಿರಿ ತಾಲೂಕಿನ ಗೋವಿಂದರಾಜು,ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ ಪಿ ಅಶೋಕ್ ಕೆ ವಿ ಜಿ.ಪಂ ಸಿಇಒ ಪ್ರಭು, ಮಾಜಿ ಶಾಸಕ ಎಂ.ವಿ .ವೀರಭದ್ರಯ್ಯ, ಉಪವಿಭಾಗಿಧಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಎಚ್ ಶ್ರೀನಿವಾಸ್ ,ತಾ.ಪಂ ಇ ಓ ಲಕ್ಷ್ಮಣ್, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹನುಮಂತ ರಾವ್, ಕೊರಟಗೆರೆಯ ಎಚ್. ಮಹದೇವ್ ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಭಾನುವಾರ ಸಂಜೆ ದೇವರಿಗೆ ಅಭಿಷೇಕ ನಡೆಯಿತು.
ಸೋಮವಾರ ಮುಂಜಾನೆ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೂರು ಬಾರಿ ಪ್ರಕಾರೋತ್ಸವ ಮಾಡಿ ಗೋಪುರದ ಮಧ್ಯ ಭಾಗದಲ್ಲಿ ಸಿದ್ದಪಡಿಸಿದ್ದ ದ್ವಾರದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸಾವಿರಾರು ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರ ದರ್ಶನಕ್ಕೆ ಗೋವಿಂದ ನಾಮವಳಿ ಹಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ದರ್ಶನ ಪಡೆದರು. ಬೆಳಿಗ್ಗೆ ೪ರಿಂದ ಮಹಿಳಾ ಸಂಘಟನೆ ಸದಸ್ಯರು ನಿರಂತರವಾಗಿ ದೇವರ ಮೇಲಿನ ಭಕ್ತಿಗೀತೆಗಳನ್ನು ಹಾಡಿದರು.
ಲಡ್ಡು, ಸಿಹಿ ಮತ್ತು ಖಾರದ ಪೊಂಗಲ್, ಚಿತ್ರಾನ, ಭಕ್ತರಿಗೆ ವಿತರಿಸಲಾಯಿತು. ಶ್ರೀವೆಂಕಟೇಶ್ವರನಿಗೆ ಮಾಡಿದ್ದ ವಜ್ರಾಂಗಿ ಅಲಂಕಾರ ಅತ್ಯಕರ್ಷಣೆಯಾಗಿತ್ತು. ತಾಲೂಕಿನಾದ್ಯಂತ ಶ್ರೀವೆಂಕಟೇಶ್ವ ಸ್ವಾಮಿ ದೇಗುಲಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಧಾರ್ಮಿಕ ಕಂಕೈರ್ಯಗಳು ನೆರವೇರಿದವು.
ಭಕ್ತ ಮಂಡಳಿಯವರು ಈ ಸಲ ಅಚ್ಚು ಕಟ್ಟಾಗಿ ಭಕ್ತರಿಗೆ ದೇವರ ದರ್ಶನ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದನ್ನು ಕೊಂಡಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿ0ದರಾಜು, ,ಡಿ.ಜಿ.ಶಂಕರನಾರಾಯಣಶೆಟ್ಟಿ,ಲಾಲಾಪೇಟೆ ಮಂಜುನಾಥ್,ಮಾಜಿ ಸದಸ್ಯ ಅರ್ ಎಲ್ ಎಸ್ ರಮೇಶ್, ಮಂಜುನಾಥ್ ಅಚಾರ್,ಡಿವೈಎಸ್‌ಪಿ ಜಿ.ಮಂಜುನಾಥ್, ಸಿಪಿಐ ಹನುಮಂತ ರಾಯಪ್ಪ, ಪಿಎಸ್ ಐ ಎಂ.ಎಸ್.ಚ0ದ್ರಶೇಖರ, ಭಕ್ತ ಮಂಡ ಳಿಯ ಜಿ. ಆರ್.ಧನಪಾಲ್ ,ಕಿಶೊರ್ ಶೆಟ್ಟಿ ಇತರರು ಇದ್ದರು.
ಲಾಡುಗಳನ್ನು ಮದುಗಿರಿ ವಿದ್ಯಾ ಸಂಸ್ಥೆಯ ಖಜಾಂಚಿ ಎಂ.ಎಸ್.ಧರ್ಮವೀರ್ ಸೇವೆಯಾಗಿ ನೀಡಿದ್ದು ಸರ್ವ ಭಕ್ಷರ ಸಹಕಾರದೊಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.



