
ಮಧುಗಿರಿ: ಸ್ಪರ್ಧಾಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಒಬ್ಬ ಉತ್ತಮ ಸಾಧಕ ಹಾಗೂ ಪ್ರಯತ್ನ ನಡೆಸಿ ಸೋತವರ ಮಾರ್ಗದರ್ಶನ ಪಡೆದರೆ ಉತ್ತಮ. ಸಾಧಕನು ಗೆಲುವಿನ ತಂತ್ರಗಳ ಬಗ್ಗೆ ಮಾರ್ಗದರ್ಶನ ಮಾಡಿದರೆ , ಸೋತವನು ತಾನು ಮಾಡಿದ ತಪ್ಪುಗಳ ಬಗ್ಗೆ ತಿಳಿಸಿಕೊಡುವನು, ಇದರಿಂದ ಒಂದು ಕಡೆ ಪ್ರೇರಣೆ ಪಡೆದರೆ, ಇನ್ನೊಂದೆಡೆ ಎಡವದೇ ನಡೆಯು ವುದನ್ನು ಕಲಿತು ಪರಿಣಾಮಕಾರಿಯಾಗಿ ಪರೀಕ್ಷಾ ಸಿದ್ಧತೆ ನಡೆಸಲು ಸಹಕಾರಿಯಾಗುವುದು ಎಂದು ಹರ್ಷ ಆಫೀಸರ್ಸ್ ಅಕಾಡೆಮಿಯ ಸಂಸ್ಥಾಪಕ ಹರ್ಷ ಆರ್ ಕಿವಿಮಾತು ಹೇಳಿದರು.
ಅವರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉದ್ಯೋಗ ಕೋಶ, ವಾಣಿಜ್ಯ ಶಾಸ್ತ್ರ ವಿಭಾಗ, ಐಕ್ಯೂ ಎಸಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಯುಜಿಸಿ-ನೆಟ್,ಕೆ-ಸೆಟ್ ಮತ್ತು ಸ್ಯಾಡ್ ಪರೀಕ್ಷೆಗಳಿಗೆ ಸಂಬ0ಧಿಸಿದ0ತೆ ಹನ್ನೆರೆಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತ ಅನೇಕ ಸ್ಪರ್ಧಾಥಿಗಳು ಕೋಚಿಂಗ್ ಸೆಂಟರ್ ಸೇರುವಿಕೆ ಬಗ್ಗೆ ಗೊಂದಲದಲ್ಲಿ ಇರುತ್ತಾರೆ. ಆರಂಭಿಕ ಹಂತದಲ್ಲಿ ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದರೆ ಅವರಿಗೆ ಮಾರ್ಗದರ್ಶನ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳ ಅವಶ್ಯಕತೆಯಿರುತ್ತದೆ ಎಂದರು, ಮುಂದಿನ ದಿನಗಳಲ್ಲಿ ಕ್ಷೇತ್ರದ ಯುವಜ ನರಿಗಾಗಿ ಶಾಸಕರಾದ ಕೆ.ಎನ್ ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ಆರ್ ರ ಮುಂದಾಳತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದರು.
ಸAಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶಿರಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ನಳಿನಿ.ಎನ್.ಡಿ, ಸ್ಪರ್ಧಾತ್ಮಕ ಪರೀಕ್ಷೆ ಗಳು ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ನ್ನು ನಿರೀಕ್ಷಿಸುತ್ತವೆ. ಪರಿಮಾಣಾತ್ಮಕ ಓದಿಗಿಂತ ಪರಿಣಾಮಕಾರಿಯಾದ ಓದು ವಿಷಯ ವಸ್ತು ಅರ್ಥೈಸಿ ಕೊಳ್ಳುವುದು, ಗ್ರಹಿಕೆ ಮತ್ತು ತಿಳಿದುಕೊಂಡಿದ್ದನ್ನು ನಿಗದಿತ ಸಮಯದ ಪರೀಕ್ಷೇಯಲ್ಲಿ ಹೇಗೆ ಉತ್ತರಿಸುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ.ಆದ್ದರಿಂದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಮೂಲಕ ಗುಣಮ ಟ್ಟದ ಅಧ್ಯಯನ ಮಾಡುವುದು ಒಳಿತು ಎಂದರು.
ಕನ್ನಡ ಉಪನ್ಯಾಸಕ ಡಾ.ಬಂದ್ರೇಹಳ್ಳಿ ಕುಮಾರ್ ಮಾತನಾಡಿ ಪರೀಕ್ಷೆಗಳಿಗೆ ಅನುಗುಣವಾಗಿ ಯೋಜನಾ ಬದ್ಧ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅಧ್ಯ ಯನ ಮಾಡುವುದರಿಂದ ಸಮಯ ವ್ಯರ್ಥವಾಗದೆ ಗುಣಮಟ್ಟದ ಅಧ್ಯಯನ ಮಾಡಲು ಸಾಧ್ಯವಾಗುವುದು ಎಂದರು.
ಕಾರ್ಯಾಗಾರದ ಸಂಯೋಜಕಿ ಡಾ.ಲೀಲಾವತಿ ಹೆಚ್ ಮಾತನಾಡಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಉತ್ತಮವಾಗಿ ಅಧ್ಯಯನ ಮಾಡುವ ಸ್ನೇಹಿತರ ತಂಡ ವನ್ನು ರಚಿಸಿಕೊಂಡು , ಗುಂಪಿನೊ0ದಿಗೆ ಚರ್ಚೆ ಮತ್ತು ವಿಚಾರ ವಿನಿಮಯ ಮಾಡಿಕೊಳ್ಳುವುದರಿಂದ ನೆನಪಿನಲ್ಲಿ ಉಳಿಯುವ, ನಿರ್ಧಾರ ತೆಗೆದುಕೊಳ್ಳುವಲ್ಲಿ , ಮಾರ್ಗದರ್ಶನ ಪಡೆಯುವಲ್ಲಿ, ಪ್ರೇರಣೆ ನೀಡುವಲ್ಲಿ ಉತ್ತಮ ಸ್ನೇಹಿತರ ಅವಶ್ಯಕ ಎಂದರು.
ಕಾರ್ಯಾಗಾರದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ, ಪ್ರಾಧ್ಯಾಪಕರಾದ ಜಯ ಶಂಕರ್, ರಾಮಮೂರ್ತಿ, ಆನಂದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



