ಚಿಕ್ಕನಾಯಕನಹಳ್ಳಿ: ಬೇಸಿಗೆ ಆರಂಭದ ಹಿನ್ನಲೆಯಲ್ಲಿ ಸಾಂಕ್ರಾ ಮಿಕ ರೋಗಗಳ ಹತೋಟಿಗೆ ಇಡೀ ತಾಲ್ಲೂಕು ಆಡಳಿತ ಸಜ್ಜಾಗ ಬೇಕಿದೆ ಎಂದು ತಹಸೀಲ್ದಾರ್ ಶ್ರೀಮತಿ ಮಮತ ತಿಳಿಸಿದರು.
ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಮುಂದೆ ಬೇಸಿಗೆ ಆರಂಭಗೊಳ್ಳಲಿದೆ, ಇದರ ಜೊತೆಗೆ ಜಾತ್ರೆಗಳು ಸಹ ಎಲ್ಲಡೆ ನಡೆಯಲಿದ್ದು, ದಾಸೋಹ ಹಾಗೂ ಪ್ರಸಾದ ವಿತರಣೆ ನಡೆಯುವುದರಿಂದ ಶುದ್ದ ಕುಡಿಯುವ ನೀರು ಮತ್ತು ಆಹಾರಗಳ ಬಗ್ಗೆ ನಾವು ಎಚ್ಚರಿಕೆಯಂದರಬೇಕಿದೆ. ಜಾತ್ರೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಥಳೀಯ ಸಂಸ್ಥೆಗಳ ಮೂಲಕ ಅನುಮತಿ ಕಡ್ಡಾಯ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪಿಸಬೇಕೆಂದು ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮ ಲೆಕ್ಕಿಗರಿಗೆ ಸೂಚಿಸಿದರು.
ಬೇಸಿಗೆ ಆರಂಭಕ್ಕೂ ಮುನ್ನ ಶಾಲೆ, ವಸತಿ ನಿಲಯ ಮುಂತಾದ ಕೇಂದ್ರಗಳಿಗೆ ಸರಬರಾಜಾಗುವ ನೀರಿನ ಮೂಲಗಳು ಹಾಗೂ ಅದರ ಶುದ್ದತೆಯ ಇತ್ತೀಚಿನ ವರದಿಯನ್ನು ನಮಗೆ ಕಳುಹಿಸಬೇಕು ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶುದ್ದ ನೀರಿನ ಘಟಕಗಳ ನೀರಿನ ವರದಿಯನ್ನು ಸಹ ನೀಡಬೇಕು ಎಂದರು. ಹೆಣ್ಣುಮಕ್ಕಳ ಹಾಸ್ಟಲ್ ಗಳ ವಾರ್ಡನ್ ಗಳು ಕೇಂದ್ರ ಸ್ಥಳದಲ್ಲಿ ವಾಸಿಸುವುದು ಕಡ್ಡಾಯ ಎಂದರು.
ತಾಲ್ಲೂಕಿನ ಮೂರು ಪ್ರದೇಶದಲ್ಲಿ ಚಿರತೆಗಳ ಓಡಾಟದ ಭೀತಿ ಆ ಭಾಗದ ಜನರಲ್ಲಿ ಆತಂಕ ಮೂಡಿಸಿರುವ ಬಗ್ಗೆ ಗಮನ ಸೆಳೆದು, ಈ ಬಗ್ಗೆ ಅರಣ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಅರಣ್ಯಾಧಿಕಾರಿ ಅಮಿತ್ ರವರನ್ನು ಪ್ರಶ್ನಿಸಿದರು.
ತಾಲ್ಲೂಕಿನ ಆಶ್ರೀಹಾಳ್, ಬಗ್ಗನಹಳ್ಳಿ, ಕೊಡಲಾಗರ ಮುಂತಾ ದೆಡೆ ಚಿರತೆಯ ಓಡಾಟವಿರುವ ಬಗ್ಗೆ ಜನರ ಆತಂಕ ನಿವಾರಣೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಯಾವುದೇ ಕಾರಣದಿಂದ ಸಾಕು ಪ್ರಾಣಿಗಳು ಹಾಗೂ ಇನ್ನಿತರ ಪ್ರಾಣಿಗಳು ಅಸು ನೀಗಿದರೆ ಅದರ ಪ್ರಾಥಮಿಕ ವರದಿ ಕಡ್ಡಾಯವಾಗಿ ಸಲ್ಲಿಕೆಯಾಗಬೇಕೆಂದು ಪಶು ಇಲಾಖೆಯ ಸಹಾಯಕ ನಿದರ್‌uಟಿಜeಜಿiಟಿeಜಶಕ ವೈ.ಜಿ. ಕಾಂತರಾಜುರೆವರಿಗೆ ಸೂಚಿಸಿದರು.
ತಾಲ್ಲೂಕಿನ ಹುಳಿಯಾರು ಭಾಗದಲ್ಲಿ ಕುರಿಗಳು ಹಾಗೂ ಮಕ್ಕಳ ಮೇಲೆ ನಾಯಿಗಳ ಧಾಳಿಯಾಗಿರುವ ವರದಿ ಬಂದಿದೆ, ಕುರಿಗಳಿಗೆ ತಗಲುವ ಕೆಲವು ರೋಗಗಳಿಗೆ ಸ್ವಯಂ ವೈದ್ಯಕೀಯ ಚಿಕಿತ್ಸೆಯಿಂದಾಗಿ ಸಾವುಗಳಾಗಿದೆ ಎಂಬ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ಮಮತರವರು ಪಶು ಇಲಾಖೆಯಿಂದ ಕುರಿ, ಕೋಳಿ, ಜಾನುವಾರುಗಳಿಗೆ ತಗಲು ವ ಹಲವು ರೋಗಗಳಿಗೆ ಉಚಿತ ಔಷದೋಪಚಾರದ ಬಗ್ಗೆ ಸಾಕಾಣಿಕೆದಾರರಿಗೆ ಸರಿಯಾದ ಸಮಗ್ರ ಮಾಹಿತಿ ನೀಡುವಲ್ಲಿ ಕೊರತೆಯಿದೆ, ಇದರಿಂದಾಗಿ ಖಾಸಗಿ ಔಷಧಿ ಅಂಗಡಿಗಳಿAದ ದೊರೆಯುವ ಪಶುಗಳ ರೋಗದ ಮದ್ದನ್ನು ಪ್ರಯೋಗಿಸಿದ ಪರಿಣಾಮ ಸಾವುಗಳಾಗುತ್ತಿವೆ, ತಕ್ಷಣ ಗ್ರಾಮ ಪಂಚಾಯಿತಿಯ ಸಹಕಾರ ಹಾಗೂ ಮಾಧ್ಯಮಗಳನ್ನು ಬಳಸಿಕೊಂಡು ಔಷದೋ ಪಚಾರ ಹಾಗೂ ಇನ್ನಿತರ ಇಲಾಖಾ ಸವಲತ್ತುಗಳ ಮಾಹಿತಿ ನೀಡಿರಿ ಎಂದು ತಾಕೀತು ಮಾಡಿ ಮುಂದಿನ ದಿನಗಳಲ್ಲಿ ಸಾವು ನೋವು ವರದಿಗಳು ಬಾರದಂತೆ ಕ್ರಮಕೈಗೊಳ್ಳಿ ಎಂದರು.
ಪಟ್ಟಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಪಾದಚಾರಿ ಮಾರ್ಗವನ್ನು ಅತಿ ಕ್ರಮಿಸಿ ತಿಂಡಿ ಹಾಗೂ ಫಾಸ್ಟ್ಫುಡ್ ಅಂಗಡಿಗಳು ಹೆಚ್ಚುತ್ತಿದ್ದು ಅಲ್ಲಿ ಸ್ವಚ್ಚತೆಯ ಪಾಲನೆಯಾಗದಿರುವ ಬಗ್ಗೆ ಸಭೆಯಲ್ಲಿ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಮಂಜಮ್ಮನವರಿಗೆ ಸದರಿ ಸಮಸ್ಯೆ ನಿವಾರಣೆಗೆ ಪೊಲೀಸ್ ಇಲಾಖೆಯ ನೆರವಿನಿಂದ ಕ್ರಮ ಕೈಗೊಳ್ಳಿ ಎಂದರು.
ಸರ್ಕಾರಿ ಅಧಿಕಾರಿಗಳು ವಾಹನ ಚಾಲನೆ ಸಂದರ್ಭದಲ್ಲಿ ಕಾನೂನು ಪಾಲನೆ ಕಡ್ಡಾಯವಾಗಿ ಪಾಲಿಸಬೇಕು, ನಿಯಮ ಉಲ್ಲಂಘಿಸಿದರೆ ಡಂಡ ಪ್ರಯೋಗಿಸಿ ಎಂದು ಆರಕ್ಷಕ ಉಪನಿರೀಕ್ಷಕರಿಗೆ ಸೂಚಿಸಿದರು.
ಸದ್ಯದಲ್ಲಿಯೇ ಆರೋಗ್ಯ ಇಲಾಖೆಯಡಿ ಆಶಾ ಕಾರ್ಯ ಕರ್ತರೊಂದಿಗೆ ಸಭೆ ನಡೆಸಲಾಗುವುದು ಎಂದರು.

(Visited 1 times, 1 visits today)