
ಮಧುಗಿರಿ: ಸಂಘ ಸಂಸ್ಥೆಗಳನ್ನು ಕೇವಲ ವಿಜಿಟಿಂಗ್ ಕಾರ್ಡ್ಗಳ ಬಳಕೆಗೆ ಮಾತ್ರ ಸೀಮಿತವಾಗಿರಿಸದೆ ಸಮಾಜದ ಏಳಿಗೆ ಬದ್ಧ ವಾಗಿ ಕಾರ್ಯ ನಿರ್ವಹಿಸುವಂತಾಗ ಬೇಕು ಎಂದು ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಶ್ರೀ ಡಾ.ಹನುಮಂತನಾಥಸ್ವಾಮಿಜೀ ಕರೆ ನೀಡಿದರು.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮೀದೇ ವಿಪುರ ಗ್ರಾಮದ ದೇವಸ್ಥಾನದ ಸನ್ನಿದಿಯಲ್ಲಿ ಕುಂಚಶ್ರೀ ಗಿರಿ ಬಳಗದ ವತಿ ಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸದಸ್ಯತ್ವ ನೊಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಶ ಸೇವೆ ದೇಶ ಸೇವೆ,ಜನ ಸೇವೆಯೇ ಜನಾರ್ದನ ಸೇವೆಯಾಗಿದ್ದು ಸೇವೆಯನ್ನು ಪೂಜಿಸುವಂತಾಗಬೇಕು, ಟ್ರಸ್ಟ್ ನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿ ಜತೆಗೆ ಶಿಕ್ಷಣ,ದೇವಾಲಯ,ಧರ್ಮ, ಸಮುದಾಯದ ಕಡೆಗೆ ಗಮನ ಹರಿಸಬೇಕು, ವಧುವರರ ಅನ್ವೇಷಣಾ ಕೇಂದ್ರ,ಉದ್ಯೋಗ ಮೇಳಗಳ ಆಯೋಜನೆ ದೇವಾಲಯಗಳ ಸ್ವಚ್ಚತೆಯಂತೆ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು. ಕುಂಚಿಟಗ ಸಮುದಾಯ ಎಲ್ಲಾ ಸಮುದಾಯಗಳನ್ನು ಗೌರವಿಸುತ್ತದೆ.ಮುಂದಿ ನ ದಿನಗಳಲ್ಲಿ ಯುವ ಪೀಳಿಗೆಗೆ ಹೆಚ್ಚಿನ ಆ ದ್ಯತೆ ನೀಡಬೇಕು.ಮಠದ ವತಿಯಿಂದ ಬಡ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಪ್ರಾಥಮಿಕ ಶಿಕ್ಷಣ ದಿಂದ ಉನ್ನತ ಶಿಕ್ಷಣದ ವರೆವಿಗೂ ಉಚಿತ ಶಿಕ್ಷಣವನ್ನು ನೀಡಲಾಗುವುದು.ಮಾನವ ಸ್ವಾರ್ಥಕ್ಕೆ ತಾನು ತೊಡಗಿಸಿ ಕೊಳ್ಳದೆ ಧಾನ ಧರ್ಮಗಳಲ್ಲಿ ಹೆಚ್ಚು ತೊಡಗಿಸಿ ಕೊಳ್ಳುವಂತಾಗಬೇಕು,ಬಡತನ ಸಿರಿತನ ಶಾಪವಲ್ಲ ಎಂದರು.
ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ,ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಪೂಜಾ ಕೈಂ ಕರ್ಯಗಳಿಗೆ ಹಾಗೂ ದೇವಾಲಯದ ಸ್ವಚ್ಛತೆ ಗೆ ಆದ್ಯತೆ ನೀಡ ಲಾಗುತ್ತಿರುವುದು ಸಂತ ಸದವಿಷಯವಾಗಿದೆ.ಸಮುದಾಯದ ಆಸ್ತಿತ್ವದ ಜತೆಗೆ ಸ್ವಾಭಿಮಾನ ಬದುಕನ್ನು ನಾವು ಬಾಳ ಬೇಕಾಗಿದೆ.ನಾವುಗಳು ಸ್ವಂತ ಕೃಷಿ ಉದ್ಯೋಗ ಹೊಂದುವುದರ ಮೂಲಕ ಆರ್ಥಿಕವಾಗಿ ಸಧೃಡರಾಗಬೇಕಾಗಿದೆ.ನಿಮ್ಮ ಸುಖ ಸಂತೋಷ ಗಳಿಗೆ ನಾವುಗಳು ಭಾಗಿದಾರರಾ ಗಿರುತ್ತೇವೆ.ಇಂತಹ ಕಾರ್ಯ ಕ್ರಮಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳು ತೊಡಗಿಸಿಕೊಳ್ಳುವಂತಾಗಬೇಕು, ಪದಾಧಿಕಾರಿಗಳು ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು ಟ್ರಸ್ಟ್ ಮುಂದುವರೆಸಿಕೊAಡು ಹೋಗಬೇಕೆಂದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ,ಸಮುದಾಯದವನ್ನು ಎಚ್ಚೆತ್ತು ಕೊಳ್ಳುವಂತಹ ಕಾರ್ಯದಲ್ಲಿ ಟ್ರಸ್ಟ್ ಪದಾಧಿಕಾರಿಗಳು ಮುಂದೆ ಬಂದಿರುವುದು ಸ್ವಾಗಾತಾರ್ಹ,ಸರ್ಕಾರ ನೀಡುವಂತಹ ಸೌಲಭ್ಯ ಗಳನ್ನು ಬಳಸಿ ಕೊಂಡು ಕುಲ ಕಸಬುಗಳನ್ನು ಮುಂದುವರೆಸಿ ಕೊಂಡು ಹೋಗುತ್ತಿದ್ದರು ಸಹ ರೈತರು ಆರ್ಥಿಕವಾಗಿ ಸಧೃಡರಾಗಲು ಆಗುತ್ತಿಲ್ಲ,ನಮ್ಮ ಭಾಗದಲ್ಲಿ ಸೂಕ್ತವಾದ ನೀರಾವರಿ ಸೌಲಭ್ಯಗಳಿಲ್ಲವಾಗಿವೆ.ಟ್ರಸ್ಟ್ ನವರು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.ರಾಜಕೀಯ ಅಧಿಕಾರದಿಂದ ಜನರಿಗೆ ಹೆಚ್ಚು ಸಹಾಯ ಮಾಡ ಬಹುದಾಗಿದೆ.ರಾಸುಗಳು ಮೃತಪಟ್ಟರೆ ಮಾಲೀಕರಿಗೆ ಈ ಹಿಂದೆ ಬಹಳ ಅನಾನೂಕೂಲವಾಗುತ್ತಿತ್ತು ನನ್ನ ಅವಧಿಯಲ್ಲಿ ಜಾರಿ ಮಾಡಿದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಇಂದೂ ವಾರ್ಷಿಕವಾಗಿ ಸುಮಾರು ೨೫ ಕೋಟಿ ರೂಗಳನ್ನು ಮೃತಪಟ್ಟ ರಾಸುಗಳ ಮಾಲೀಕರಿಗೆ ವಿಮಾ ಹಣವನ್ನು ವಿತರಿಸಲಾಗುತ್ತಿದ್ದು ಹೈನುಗಾರರಿಗೆ ಅನೂಕೂಲವಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಡಿ.ಸಿ,ತಾಲೂಕು ಕುಂಚಿಟಗರ ಸಂಘದ ಅಧ್ಯಕ್ಷ ರಾಜಶೇಖರ್,ನೆರೆಯ ಆಂದ್ರ ಕುಂಚಿಟಿಗರ ಅಭಿವೃದ್ಧಿ ನಿಗಮ ಮಂಡಲಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ್,ಮುಕುಂದಪ್ಪ,ದಾಸೇಗೌಡ,ಬಸ್ ಮಾಲೀಕರಾದ ರಂಗಸ್ವಾಮಿ,ರಾಜು ಬಸವಂತನಹಳ್ಳಿ,ಬಿಜೆಪಿ ಮುಖಂಡ ನಾಗರಾಜು,ಕಸವನಹಳ್ಳಿ ರಮೇಶ್,ಪ್ರೊ ಶಿವಕುಮಾರ್,ಟ್ರಸ್ಟ್ ನ ಪದಾಧಿಕಾರಿಗಳಾದ ರವಿಶಂಕರ್,ಕಾ0ತಲಕ್ಷ್ಮೀ,ಶಿವರಾಮ್ ಕೆ,ರಂಗನಾಥ್,ಕಿರಣ್ ಕುಮಾರ್ ಹೆಚ್.ಡಿ, ಸುರೇಂದ್ರ ಎ.ಟಿ,ವಿಜಯ್ ಕುಮಾರ್.ಬಿ.ವಿ, ತಿಪ್ಪೇಸ್ವಾಮಿ,ಕೃಷ್ಣಮೂರ್ತಿ,ಶ್ರೀರಾಮಮೂರ್ತಿ, ಲೋಕೇಶ್.ಎಂ.ಎನ್.ಮುರಳಿಕುಮಾರ್,ಹೆಚ್.ಕೆ.ಮAಜುನಾಥ್ ಗೌಡ,ನಾಗಭೂಷಣ್ ಮುಂತಾದವರು ಇದ್ದರು.



