
ಕೊರಟಗೆರೆ: ಪ್ರತಿನಿತ್ಯದಂತೆ ತನ್ನ ತೋಟ ನೋಡಿಕೊಂಡು ಬರಲು ಹೋದ ವೃದ್ದೆಗೆ ಅಪರಿಚಿತ ವ್ಯಕ್ತಿಗಳು ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮೈ ಮೇಲಿದ್ದ ಒಡವೆಗಳು ದೋಚಿ ಪರಾರಿಯಾಗಿದ್ದು, ಉಸಿರಾಟದ ಸಮಸ್ಯೆಯಿಂದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿ ಸಿಎನ್ ದುರ್ಗಾ ಹೋಬಳಿ ದಾಸಲುಕುಂಟೆ ಗ್ರಾಮದಲ್ಲಿ ನಡೆದಿದ್ದು, ಪ್ರತಿನಿತ್ಯದಂತೆ ತೋಟಕ್ಕೆ ಹೋದ ರತ್ನಮ್ಮ (೬೫)ತೋಟದ ಮನೆಯಲ್ಲಿ ಒಂಟಿ ಇರುವುದನ್ನು ಗಮನಿಸಿದ ಕಳ್ಳರು ವೃದ್ಧೆಯನ್ನು ನಿಯಂತ್ರಿಸಲು ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಬಿಳಿ ಬಟ್ಟೆ ತುರುಕಿದ್ದು ಉಸಿರಾಟದ ಸಮಸ್ಯೆಯಿಂದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ವೃದ್ಧೆಯ ಕುತ್ತಿಗೆಯಲ್ಲಿ ಕೆಂಪು ಹವಳದ ೮ಗ್ರಾಂ ಚಿನ್ನದ ಗುಂಡು, ಕಿವಿಯಲ್ಲಿದ್ದ ೬.ಗ್ರಾಂ ಒಂದು ಜೊತೆ ಓಲೆ, ಬಿಳಿ ಕಲ್ಲಿನ ೨ಗ್ರಾಂ ತೂಕದ ಮೂಗನತ್ತು ದೋಚಿ ಪರಾರಿಯಾಗಿದ್ದು, ಒಟ್ಟು ೮೦ ಸಾವಿರ ಮೌಲ್ಯದ ಒಡವೆಗಳು ಕಳ್ಳತನವಾಗಿದೆ ಎನ್ನಲಾಗಿದೆ.
‘‘ವೃದ್ಧೆ ಒಬ್ಬರೇ ವಾಸಿಸುತ್ತಿದ್ದುದನ್ನು ಗಮನಿಸಿ ಕಳ್ಳರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ, ರಾತ್ರಿ ವೇಳೆ ಪೋಲಿಸ್ ಗಸ್ತು ಹೆಚ್ಚಿಸಬೇಕು’’ ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವನ್ನು ಕರೆಸಿ ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಕಳ್ಳತನದ ಜೊತೆಗೆ ಸಾವಿಗೆ ನಿಖರ ಕಾರಣವೇನು ಎಂಬುದು ವೈದ್ಯಕೀಯ ವರದಿ ಬಳಿಕ ಸ್ಪಷ್ಟವಾಗಲಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ಹಂಚಿಕೊAಡಿದ್ದಾರೆ.

