ತುಮಕೂರು: ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದು ಮೂವರು ಮಕ್ಕಳು ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಟನೆ ಗುರುವಾರ ನಗರದ ಹೊರವಲಯದ ಊರುಕೆರೆ ಬಳಿ ರಾಷ್ಟಿçÃಯ ಹೆದ್ದಾರಿ ೪೮ರಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂರು ಮೂಲದ ದ್ಯಾವಪ್ಪ (೬೫), ದುರ್ಗವ್ವ (೬೦) ಮೃತ ದುರ್ದೆÊವಿಗಳು. ಆಟೋ ಚಾಲಕ ವೆಂಕಟೇಶ್ (೩೮), ಶಾಂತಮ್ಮ (೩೮) ಹಾಗೂ ಅವರ ಮಕ್ಕಳಾದ ಅಂಬಿಕಾ (೭), ಮಂಜುನಾಥ್? (೧೩) ಸಂಬAಧಿಕರ ಪುತ್ರ ದೇವೇಗೌಡ (೧೧) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಂಡಿದ್ದಾರೆ.
ಜಾತ್ರೆಗೆ ತೆರಳಿದ್ದ ಕುಟುಂಬ: ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದ್ಯಾವಪ್ಪ ಕುಟುಂಬ ಹುಟ್ಟೂರಿಗೆ ಜಾತ್ರೆಗೆ ತೆರಳಿತ್ತು. ಜಾತ್ರೆ ಮುಗಿಸಿಕೊಂಡು ಗುರುವಾರ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಊರುಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ರಸ್ತೆಬದಿಯ ತಡೆಗೋಡೆಗೆ ಗುದ್ದಿದ್ದು ಈ ಅವಘಡ ಸಂಭವಿಸಿದೆ.
ದಂಪತಿ ಮೃತದೇಹವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(Visited 1 times, 1 visits today)





