BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ
  • ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
  • ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ
  • ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್
  • ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು
  • ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ
  • ಜಿಲ್ಲಾಡಳಿತದಿಂದ ಸ್ವಾತಂತ್ರ ದಿನಾಚರಣೆ
  • ಡಿಸಿಎಂಯಿ0ದ ಭಾರತ್ ಜೋಡೋ ಯುವ ಮಿಷನ್ ನೋಂದಣಿ ದೃಢೀಕರಣ ಪತ್ರ ವಿತರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
news

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

ಜು.೦೩: ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿಯಿಂದ ದಲಿತ ಜನಾಗ್ರಹ ಸಮಾವೇಶ
By News Desk BenkiyabaleUpdated:July 01, 2026 5:04 pm

ತುಮಕೂರು: ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ,ವಿಶೇಷ ಘಟಕ ಯೋಜನೆಯ ಏಕಗವಾಕ್ಷಿ ನೀತಿ ಹಾಗೂ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ, ಜುಲೈ ೦೩ ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ದಲಿತ ಜನಾಗ್ರಹ ಸಮಾವೇಶವನ್ನು ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವುದಾಗಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಲಿತರ ಭೂಮಿ ಹಕ್ಕಿಗಾಗಿ ದಸಂಸ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ.ನಮ್ಮ ಹೋರಾಟದ ಭಾಗವಾಗಿಯೇ ಪಿಟಿಸಿಎಲ್ ಕಾಯ್ದೆಜಾರಿಗೆ ಬಂದರೂ ಸಮರ್ಪಕವಾಗಿ ದಲಿತರ ಜಮೀನು ಅವರಿಗೆ ದೊರೆತ್ತಿಲ್ಲ. ಪ್ರಸ್ತುತ ಡಿಸಿಎಂ ಆಗಿರುವ ದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಕಂದಾಯ ಮಂತ್ರಿಗಳು ಆಗಿದ್ದು, ಅದ್ಯತೆಯ ಮೇರೆಗೆ ದಲಿತರಿಗೆ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ದಲಿತರ ಹೋರಾಟದ ಫಲವಾಗಿ ಜಾರಿಗೆ ಬಂದ ಎಸ್.ಸಿ.ಪಿ ಮತ್ತು ಟಿ.ಎಸ್‌ಪಿ ಯೋಜನೆಯ ನಿಯಮಗಳನ್ನು ಮೀರಿ ಹಣಖರ್ಚು ಮಾಡಲಾಗಿದೆ. ಕಾಯ್ದೆ ಬಂದು ದಿನದಿಂದ ಇದುವರೆಗೂ ಸುಮಾರು ೩-೪.೫೦ ಲಕ್ಷಕೋಟಿ ರೂಗಳನ್ನು ಈ ವರ್ಗಗಳಿಗೆ ಖರ್ಚು ಮಾಡಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ ಬಹುತೇಕ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ, ರಸ್ತೆ ನಿರ್ಮಾಣದಂತಹ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ. ಇದರ ಬಗ್ಗೆ ಲೆಕ್ಕ ಕೇಳಿದರೂ ಸರಕಾರದಿಂದ ಉತ್ತರವಿಲ್ಲ. ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರೂ, ಪ್ರಸ್ತುತ ಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ ಆದರೂ ವಿಶೇಷ ಅಧಿವೇಶನ ಕರೆದು ದಲಿತರಿಗೆ ಮೀಸಲಿಟ್ಟ ಹಣವೆಷ್ಟು, ಎಷ್ಟು ಅನುದಾನವನ್ನು ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ದಿಗೆ ಖರ್ಚು ಮಾಡಲಾಗಿದೆ ಎಂದು ಅಂಕಿ ಅಂಶದ ಸಮೇತಚರ್ಚೆ ನಡೆಸಿ, ಸತ್ಯಾಂಶವನ್ನುಜನತೆಯ ಮುಂದಿಡಲಿ ಎಂಬುದು ನಮ್ಮ ಒತ್ತಾಯವಾಗಿದೆ. ಜುಲೈ ೦೩ ರಂದು ಪ್ರೀಡಂ ಪಾರ್ಕಿನಲ್ಲಿ ನಡೆಯುವ ದಲಿತ ಜನಾಗ್ರಹ ಸಮಾವೇಶದ ಸ್ಥಳಕ್ಕೆ ಸಿ.ಎಂ. ಹಾಗೂ ಡಿಸಿಎಂ ಆಗಮಿಸಿ ಮನವಿ ಪಡೆದು, ಸ್ಪಷ್ಟ ಭರವಸೆ ನೀಡಬೇಕು ಎಂದು ಮಾವಳ್ಳಿ ಶಂಕರ್ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮಾತನಾಡಿ, ದಲಿತ ಚಳವಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದ ತುಮಕೂರು ಜಿಲ್ಲೆ. ಜಿಲ್ಲೆಯ ಅಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ, ಅನಾಚಾರಗಳಂತಹ ಪ್ರಕರಣಗಳು ನಡೆದಾಗ ದಸಂಸ ಮುಂಚೂಣಿಯಲ್ಲಿದ್ದು, ಹೋರಾಟ ರೂಪಿಸಿ, ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಹಾಗಾಗಿ ಜುಲೈ ೦೩ ರ ದಲಿತ ಜನಾಗ್ರಹ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಿಂದ ೧೫೦೦ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದೇವೆ. ಅಂದು ಕಂದಾಯ ಸಚಿವರಾಗಿರುವ ಡಾ.ಜಿ.ಪರಮೇಶ್ವರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ನಮ್ಮ ಮನವಿ ಆಲಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ದಸAಸ ಸಂಘಟನಾ ಸಂಚಾಲಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಚೇಳೂರು ಶಿವನಂಜಪ್ಪ ಅವರುಗಳು ಮಾತನಾಡಿ, ಜುಲೈ ೦೩ರ ಸಮಾವೇಷಕ್ಕೆ ಜಿಲ್ಲೆಯಿಂದ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ಕುಂದೂರು ಮುರುಳಿ, ಮುಖಂಡರಾದ ಬಿ.ಕೆ.ಕೃಷ್ಣಕುಮಾರ್, ನರಸೀಯಪ್ಪ, ಚಂದ್ರಶೇಖರ್, ದಾದಾಪೀರ್ ಕೊರಟಗೆರೆ, ಚೇತನ್ ಗುಬ್ಬಿ, ರಂಜನ್ ತುಮಕೂರು, ಕೃಷ್ಣಸ್ವಾಮಿ, ಸುರೇಶ್, ಕರುಣಾಕರ್, ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur
Previous Articleಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ
Next Article ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
News Desk Benkiyabale

Related Posts

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm news
ತಾಜಾ ಸುದ್ಧಿಗಳು
news

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm
news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm
news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm
news

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm
news

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
news

ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ

August 14, 2026 5:39 pm
Our Youtube Channel
Our Picks

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

By News Desk BenkiyabaleAugust 14, 2026 5:46 pm

ತುಮಕೂರು: ಭಾರತದ ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಭಾರತ್ ಸಂಚಾರ್ ನಿಗಮ ನಿಯಮಿತ ಗ್ರಾಹಕರಿಗೆ ಹೊಸ ಪ್ಯೂಚರ್ ಒಳಗೊಂಡಿರುವ ಡಿಜಿಟಲ್…

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.