BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
  • ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ
  • ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ
  • ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ
  • ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ
  • ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ
  • ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು
  • ಈ ಬಾರಿ ಹಬ್ಬ ಬಲು ದುಬಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್
news

ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್

ಶಾಲಾ ಮಕ್ಕಳಿಗೆ ವಿಶೇಷ ಪವಾಡ ಬಯಲು ಹಾಗೂ ಜಾಗೃತಿ ಕಾರ್ಯಕ್ರಮ
By News Desk BenkiyabaleUpdated:July 09, 2026 2:32 pm

ತುಮಕೂರು: ಪಂಚಾ0ಗ ನೋಡುವುದಕ್ಕಿಂತ ನಮ್ಮ ದೇಹದ ಪಂಚ ಅಂಗಗಳ ಕಡೆ ಗಮನ ನೀಡಿ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನವಿರಲಿ” ಎಂದು ಪ್ರಖ್ಯಾತ ಪವಾಡ ಬಯಲು ಸಂಶೋಧಕ ಹಾಗೂ ಚಿಂತಕ ಪ್ರೊ.ಹುಲಿಕಲ್ ನಟರಾಜ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪವಾಡ ಬಯಲು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ತಮ್ಮ ವಿಶಿಷ್ಟ ಶೈಲಿಯ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸಿದ ಅವರು, ಹಲವು ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಸಾಬೀತುಪಡಿಸಿದರು.
“ಮನುಷ್ಯ ಕಂಡುಹಿಡಿದ ತಂತ್ರಜ್ಞಾನ ಸದಾ ಅಪ್ಡೇಟ್ ಆಗುತ್ತಿದೆ, ಆದರೆ ಮನುಷ್ಯನ ಮನಸ್ಸು ಮಾತ್ರ ಔಟ್ ಡೇಟೆಡ್ ಆಗುತ್ತಿದೆ. ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಬೇಕೇ ಹೊರತು ಅದಕ್ಕೆ ದಾಸರಾಗಬಾರದು. ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರ ಸರಿದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನವೇ ನಿಜವಾದ ಶಕ್ತಿ. ಇಂದಿನ ಶಿಕ್ಷಣ ಮಾರುಕಟ್ಟೆಯ ಸರಕಾಗುವುದಕ್ಕಿಂತ ಮಾನವೀಯತೆಯ ಸರಕಾಗಬೇಕಿದೆ. ಶಿಕ್ಷಣವು ಕೇವಲ ಪರೀಕ್ಷೆಗಾಗಿ ಇರದೆ, ಪ್ರತಿಭಾವಂತರನ್ನು ಮತ್ತು ಪ್ರಜ್ಞಾವಂತರನ್ನು ಸೃಷ್ಟಿಸಬೇಕು. ಸಮಾಜದಲ್ಲಿರುವ ಮೂಢನಂಬಿಕೆಗಳು ಅಳಿಯಬೇಕು ಮತ್ತು ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಚಿಂತನೆ ಬೆಳೆಯಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕ ಗಳಿಸುವ ಯಂತ್ರಗಳನ್ನು ಸೃಷ್ಟಿಸಬಾರದು. ಅದು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು” ಎಂದರು.
ಕಾರ್ಯಕ್ರಮದುದ್ದಕ್ಕೂ ಹುಲಿಕಲ್ ನಟರಾಜ್ ಅವರು ನಡೆಸಿಕೊಟ್ಟ ವೈಜ್ಞಾನಿಕ ಪ್ರಯೋಗಗಳು ಮತ್ತು ಚಮತ್ಕಾರಗಳ ಹಿಂದಿನ ರಹಸ್ಯಗಳನ್ನು ಕಂಡು ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಕೇವಲ ಮನರಂಜನೆ ಮಾತ್ರವಲ್ಲದೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.ಕೋಟಿ ವರ್ಷಗಳ ಕ್ಯಾಲೆಂಡರ್ ಅನ್ನು ನೆನಪಿನಲ್ಲಿರಿಸಿಕೊಂಡು ದಿನಾಂಕಗಳನ್ನು ಹೇಳುವ ಕ್ಯಾಲೆಂಡರ್ ಶಿವಕುಮಾರ್ ತಮ್ಮ ದಿನಾಂಕಗಳನ್ನು ಕಂಡುಕೊಳ್ಳುವ ವಿಧಾನವನ್ನು ಪ್ರದರ್ಶಿಸಿದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಚೆನ್ನಬಸವ ಪ್ರಸಾದ್, ಜಂಟಿ ಕಾರ್ಯದರ್ಶಿ ಡಾ.ಸಾಯಿ ಪ್ರಸಾದ್, ಹಿರಿಯ ಕಾರ್ಯ ನಿರ್ವಾಹಕ ಸದಸ್ಯ ಮುನಿಗಂಗಪ್ಪ, ಶೈಕ್ಷಣಿಕ ಸಂಯೋಜಕರಾದ ಮಿಥಿಲಾ, ಮುಖ್ಯೋಪಾಧ್ಯಾಯಿನಿ ವನಿತಾ ಕೆ. ಉಪಸ್ಥಿತರಿದ್ದರು. ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಈ ವಿಶಿಷ್ಟ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಟಿ.ನರೇಂದ್ರಬಾಬು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಿಕ್ಷಕಿ ಶಶಿಕಲಾ ಟಿ.ಎಸ್. ಸ್ವಾಗತಿಸಿದರು. ಶಿಕ್ಷಕಿ ಎಚ್.ಬಿ. ಸುಮಾ ವಂದಿಸಿದರು.

(Visited 1 times, 1 visits today)
HULIKAL NATARAJ kannada news local news tumakur tumkur tumkur news ತುಮಕೂರು:
Previous Articleಬೂತ್ ಏಜೆಂಟ್ ನೇಮಿಸಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ
Next Article ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ
News Desk Benkiyabale

Related Posts

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm news
ತಾಜಾ ಸುದ್ಧಿಗಳು
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm
news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm
news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm
news

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
news

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
news

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm
Our Youtube Channel
Our Picks

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

By News Desk BenkiyabaleAugust 21, 2026 7:05 pm

ತುಮಕೂರು: ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣದಲ್ಲಿ ಸಿಲುಕಿದ್ದ ತುರುವೇಕೆರೆ ತಾಲೂಕಿನ ಮಾಯಸಂದ್ರ ನಾಡಕಚೇರಿ ವ್ಯಾಪ್ತಿಯ ತುಯಲಹಳ್ಳಿ ವೃತ್ತದ ಗ್ರಾಮ ಸಹಾಯಕ…

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.