BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
  • 2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ
  • ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ
  • ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ
  • ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು
  • ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
  • ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ
  • ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ
news

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ

ಮಕ್ಕಳನ್ನು ಓದಿಗೆ ಸೀಮಿತಗೊಳಿಸದೆ ಕ್ರೀಡೆಗೆ ಪ್ರೋತ್ಸಾಹಿಸಿ: ಸಿದ್ಧಲಿಂಗ ಸ್ವಾಮೀಜಿ
By News Desk BenkiyabaleUpdated:July 27, 2026 5:06 pm

ತುಮಕೂರು: ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ೭೫ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಆರಂಭವಾದ ಆರು ದಿನಗಳ ಯೋನೆಕ್ಸ್- ಸನ್‌ರೈಸ್ ರಾಜ್ಯ ರ‍್ಯಾಂಕಿAಗ್ ಬ್ಯಾಡ್ಮಿಂಟನ್ ಅಂಡರ್-೧೧ ಮತ್ತು ಅಂಡರ್-೧೩ ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಸ್ವಾಮೀಜಿ, ಮಕ್ಕಳನ್ನು ಕೇವಲ ಓದಿಗೆ ಸೀಮಿತ ಗೊಳಿಸಬೇಡಿ, ಅವರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು. ಇಲ್ಲಿ ಸೇರಿರುವ ೧೧ರಿಂದ ೧೩ ವರ್ಷದ ಮಕ್ಕಳ ಮುಖದಲ್ಲಿ ಉತ್ಸಾಹದ ಚಿಲುಮೆ ಉಕ್ಕುತ್ತಿದೆ.ಇಂತಹ ಮಕ್ಕಳಿಗೆ ಸರಿಯಾದ ತರಬೇತಿ ನೀಡಿದರೆ ಅವರು ದೊಡ್ಡ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತವರು ಕುಗ್ಗುವುದು, ಗೆದ್ದವರು ಹಿಗ್ಗುವುದು ಬೇಡ. ಸೋತವರು ಮತ್ತಷ್ಟು ತಯಾರಿ ಮಾಡಿಕೊಂಡು ಗೆಲುವು ಪಡೆಯಲು ಪ್ರಯತ್ನಿಸಿಬೇಕು. ಗೆದ್ದವರು ಮತ್ತೊಂದು ಸ್ಪರ್ಧೆಯ ಗೆಲುವಿನತ್ತ ಗಮನಹರಿಸಬೇಕು. ಶ್ರದ್ಧೆ, ಆತ್ಮವಿಶ್ವಾಸ, ತಯಾರಿಯೊಂದಿಗೆ ಸಾಧನೆ ಮಾಡಬಹುದು. ಕ್ರೀಡೆಯಲ್ಲಿ ಎತ್ತರಕ್ಕೆ ಏರಿ ದೇಶದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ರಾಜಕೀಯ ಕ್ಷೇತ್ರಕ್ಕಿಂಥಾ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ. ನಮ್ಮ ಕ್ರೀಡಾಪಟುಗಳನ್ನು ರಾಷ್ಟಿçÃಯ, ಅಂತರರಾಷ್ಟಿçÃಯ ಮಟ್ಟಕ್ಕೆ ತಯಾರು ಮಾಡುವ ಕಾಳಜಿ ಹೊಂದಿರುವುದು ಶ್ಲಾಘನೀಯ. ಯಲಹಂಕ ಬಳಿ ಸರ್ಕಾರದಿಂದ ೪೦ ಎಕರೆ ಜಮೀನು ಪಡೆದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ತರಬೇತಿ ನೀಡಿ ಹೊಸ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ನೆರವಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರ ಕ್ರೀಡಾಪುಟಗಳು, ಕ್ರೀಡಾ ಪ್ರೇಮಿಗಳಿಗೆ ಹೆಸರಾಗಿದೆ. ದೊಡ್ಡ ಮಟ್ಟದ ಹಲವಾರು ಪಂದ್ಯಾವಳಿಗಳು ನಡೆದಿವೆ. ಈ ಬಾರಿ ರಾಜ್ಯ ಮಟ್ಟದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿರುವುದು ಅಭಿಮಾನದ ವಿಚಾರ. ಈ ಪಂದ್ಯಾವಳಿ ಮೂಲಕ ರಾಷ್ಟç, ಅಂತರ ರಾಷ್ಟಿçÃಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಬ್ಯಾಡ್ಮಿಂಟರ್ ಪಟುಗಳು ಹೊರಹೊಮ್ಮಲಿ. ನಗರದ ಕ್ರೀಡಾ ಪ್ರೇಮಿಗಳು ಆರು ದಿನಗಳ ಕಾಲ ನಡೆಯುವ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಮಾತನಾಡಿ, ಈ ಟೂರ್ನಮೆಂಟ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನಗರದಲ್ಲಿ ೬೪೦ ಆಟಗಾರರು ನೋಂದಣಿ ಮಾಡಿದ್ದಾರೆ. ರಾಜ್ಯದ ಅನೇಕ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮುಂಬರುವ ಒಲಂಪಿಕ್ ಗುರಿ ಇಟ್ಟುಕೊಂಡು ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಲು, ಸಿದ್ಧಪಡಿಸಲು ಈ ಟೂರ್ನಮೆಂಟ್ ಉತ್ತಮ ವೇದಿಕೆ ಆಗಲಿದೆ ಎಂದು ಹೇಳಿದರು.
ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ಖಜಾಂಚಿ ನಿಶ್ಚಿತಾ, ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ.ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ.ಮುರಳಿಧರ್, ಸಂಯೋಜಕರಾದ ನಿಶಾಂತ್, ಗುರು ಪ್ರಸಾದ್, ಉದ್ಯಮಿಗಳಾದ ಅಜಯ್ ಕುಮಾರ್, ಎಂ. ನಾಗರಾಜು, ಟಿ.ವಿ. ವೆಂಕಟಸ್ವಾಮಿ, ಊರುಕೆರೆ ಪುರುಷೋತ್ತಮ್, ಜಿಲ್ಲಾ ಅಮೆಚೂರ್‌ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎನ್. ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)
13 badminton badminton kannada news karnataka local news Mla jyothiganesh tumakur tumkur under 11 ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleರೌಡಿಶೀಟರ್ ಮಲ್ಲ ಭೀಕರ ಹತ್ಯೆ
Next Article ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ
News Desk Benkiyabale

Related Posts

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm news

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm news

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm news
ತಾಜಾ ಸುದ್ಧಿಗಳು
news

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm
news

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm
news

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm
news

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm
news

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm
news

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm
Our Youtube Channel
Our Picks

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

By News Desk BenkiyabaleOctober 29, 2026 5:45 pm

ಪಾವಗಡ: ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಗುರುವಾರ ಪಾವಗಡಕ್ಕೆ ಭೇಟಿ ನೀಡಿ…

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.