ತುಮಕೂರು: ಮಲ್ಲ@ವೀರಣ್ಣ (೩೮) ವರ್ಷ ಇತನನ್ನ ಬೀಕರವಾಗಿ ಹತ್ಯೆಮಾಡಲಾಗಿದ್ದು, ಮತ್ತೆ ತುಮಕೂರಿನಲ್ಲಿ ನೆತ್ತರು ಹರಿದಿದೆ, ಇದನ್ನು ಗಮನಿಸಿದರೆ ತುಮಕೂರು ನಗರ ಕ್ರೆ0 ಸಿಟಿಯಾಗಿ ಮಾರ್ಪಾಡಾಗುತ್ತಿದೆಯಾ ಎನ್ನುವ ಆತಂಕ ತುಮಕೂರು ನಗರದ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಕೊಲೆಯಾದ ರೌಡಿಶೀಟರ್ ಮಲ್ಲನನ್ನ ಬೆಳಗುಂಬ ಬಳಿಯಿರುವ ಗರುಡ ಕೆಫೆ ಮುಂಭಾಗದಲ್ಲಿ ಕೊಚ್ಚಿ ಕೊಲೆಗೈದಿದ್ದಾರೆ. ತುಮಕೂರು ನಗರಕ್ಕೆ ಅಂಟಿಕೊ0ಡ0ತಿರುವ ಬೆಳಗುಂಬ ಸಮೀಪ ನಡೆದಿರುವ ಭೀಕರ ಹತ್ಯೆ ನಗರದ ಜನರನ್ನ ಬೆಚ್ಚಿ ಬೀಳಿಸಿದೆ, ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ನಾಲ್ಕೆದು ಮಂದಿ ದುಷ್ಕರ್ಮಿಗಳು ಕೊಚ್ಚಿ ಕೊಂದಿದ್ದಾರೆ ಎನ್ನಲಾಗುತ್ತಿದೆ.
ರಾತ್ರಿ ೮:೩೦ ಸುಮಾರಿಗೆ ರೌಡಿಶೀಟರ್ ಮಲ್ಲನ ಮೇಲೆ ಚೇತನ್ @ ಗೂಳಿ ಎನ್ನುವ ಜಿಮ್ ಟ್ರೆನರ್ ಪುಡ ಹುಡುಗರ ಗುಂಪು ಕಟ್ಟಿಕೊಂಡು ಬಂದು ಏಕಾ ಏಕಿ ಅಟ್ಯಾಕ್ ಮಾಡಿ ಕೊಚ್ಚಿ ಕೊಲೆಗೈದಿದ್ದಾರೆ, ದುಷ್ಕರ್ಮಿಗಳು ಮಲ್ಲ ಎಂದಿನ0ತೆ ಬಾರಿನಲ್ಲಿ ಪಾನಮತ್ತನಾಗಿ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ಹೊಂಚು ಹಾಕಿ ಸಂಚು ರೂಪಿಸಿ ಆತನ ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ನಂತರ ಹತ್ಯೆ ಮಾಡಿದ್ದಾರೆ.
ಬೆಳಗುಂಬ ವಾಸಿಯಾಗಿದ್ದ ರೌಡಿಶೀಟರ್ ಮಲ್ಲ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದ. ಈ ಹಿಂದೆ ನೆಡೆದಿದ್ದ ಗೆಡ್ಡೆರಾಜ ಮರ್ಡರ್ ಕೇಸಿನಲ್ಲಿ ಆರೋಪಿಯಾಗಿದ್ದ.
ಕೊಲೆಕೇಸು ಅಲ್ಲದೇ ಬೇರೆ ಕೃತ್ಯಗಳನ್ನು ಮಾಡಿ ಪೋಲಿಸ್ ಇಲಾಖೆ ರೌಡಿಶೀಟರ್ ತೆರೆದಿದ್ದರು, ವಿಚಾರಣಾ ನ್ಯಾಯಾಲಯವು ಈ ತನಿಕೆ ಅಪರಾಧಿ ಎಂದು ಶಿಕ್ಷೆ ಪ್ರಕಟಿಸಿತ್ತು, ಉಚ್ಚ ನ್ಯಾಯಾಲಯದಲ್ಲಿ ಪ್ರಕರದಿಂದ ಬಿಡುಗಡೆ ಹೊಂದಿದ್ದ, ಮಾಜಿ ರೌಡಿಗಳು ಮಾಡುವ ಕೆಲಸ ರಾಜಕಾರಣ ಹಾಗಾಗಿ ಈತ ಸಹ ರಾಜಕೀಯ ಪುಡಾರಿಯಾಗಿ ಗುರುತಿಸಿಕೊಂಡಿದ್ದ ಎಂದು ಪೋಲಿಸ್ ಮಾಹಿತಿ ಹೊರಬಂದಿದೆ.
ತನ್ನ ಅಕ್ಕನ ಮಗಳನ್ನು ಚೇತನ್ ಪ್ರೀತಿಸುತಿದ್ದ ಆ ಹುಡುಗಿಯ ಪ್ರೇಮ ಕತೆಗೆ ಅಡ್ಡಿಪಡಿಸಿ ಬೇರೆಯವರೊಂದಿಗೆ ಮದುವೆ ಮಾಡಿಸಿ ತನ್ನ ಮನೆಯಲ್ಲಿ ಮನೆಯಲ್ಲಿ ಅಕ್ಕನ ಮಗಳು ಮತ್ತು ಅವರ ಗಂಡನಿಗೆ ಆಶ್ರಯ ನೀಡಿದ್ದ. ಇದರಿಂದ ಬೇಸರ ಗೋಂಡ ಚೇತನ್ @ಗೂಳಿ ಮಲ್ಲನ ಹತ್ಯೆಗೆ ಮೈಸೂರು ಮೂಲದವರಿಗೆ ಸುಪಾರಿ ನೀಡಿದ್ದ ಎನ್ನಲಾಗಿತ್ತು ಅದನ್ನ ತನ್ನ ಪ್ರಭಾವದಿಂದಾಗಿ ಸರಿಪಡಿಸಿಕೊಂಡಿದ್ದ, ಆದರೆ ತನ್ನ ದ್ವೇಷ ಮರೆಯದೇ ತಾನೇ ಪುಂಡ ಹುಡುಗರ ಗುಂಪು ಕಟ್ಟಿಕೊಂಡ ಚೇತನ್ ಮಲ್ಲನನ್ನು ಭೀಕರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗುತ್ತದೆ.
ತನ್ನ ಮನೆಯ ಸಮೀಪವೇ ತನ್ನ ದುರ್ಮ ರಣ ಎನ್ನುವುದು ರೌಡಿಶೀಟರ್ ಮಲ್ಲನಿಗೆ ತಿಳಿದಿರಲಿಲ್ಲ, ತನ್ನ ಹತ್ಯೆಗೆ ಈ ಹಿಂದೆ ಸುಪಾರಿ ಕೊಟ್ಟಿರುವುದು ತಿಳಿದಿದ್ದರೂ ಸಹ ಯಾಮಾರಿ ಹತ್ಯೆಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿನಿಮೀಯ ರೀತಿಯಲ್ಲಿ ಕೊಲೆಗೈದ ದುಷ್ಕರ್ಮಿ ಗಳು ಕೊಲೆಯಾದ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕ್ಯಾತ್ಸಂದ್ರ ಪೋಲೀಸರು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು, ತಕ್ಷಣ ಎಲ್ಲಾ ರೀತಿಯ ಕ್ರಮ ಕೈಗೊಂಡು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.





