ತುಮಕೂರು: ಎಐಸಿಸಿಯ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ ಸಂಘಟನಾ ಅಭಿಯಾನದ ಅಂಗವಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬAಧಿಸಿದAತೆ ಕಾರ್ಯಕರ್ತರ ಅಭಿಪ್ರಾಯ ಆಲಿಸುವ ಸಭೆಯನ್ನು ಎಐಸಿಸಿ ವೀಕ್ಷಕರಾದ ಸಂಗೀತ ಬೇನಿವಾಲ್ ಅವರ ಸಮ್ಮುಖದಲ್ಲಿ ಡಿಸಿಸಿ ಅಧ್ಯಕ್ಷರಾದ ಜಿ.ಚಂದ್ರಶೇಖರ ಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಮಾತನಾಡಿ, ಎಐಸಿಸಿ ವೀಕ್ಷಕರಾಗಿರುವ ಸಂಗೀತ ಬೇನಿವಾಲ್ ಅವರು ಪಕ್ಷದ ಹಿರಿಯರ ನಿರ್ದೇಶನದಂತೆ ಜಿಲ್ಲಾಧ್ಯಕ್ಷರ ನೇಮಕಕ್ಕೆ ಕಾರ್ಯಕರ್ತರ ಅಭಿವೃದ್ದಿ ಸಂಗ್ರಹಿಸಲು ಇಲ್ಲಿಗೆ ಆಗಮಿಸಿದ್ದಾರೆ. ಕಾರ್ಯಕರ್ತರು, ಮುಖಂಡರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು. ಇದು ಪಕ್ಷ ಸಂಘಟನೆಗೆ ಬಹಳ ಪ್ರಮುಖವಾಗಲಿದೆ. ಈಗಾಗಲೇ ಸಂಗೀತ ಬೇನಿವಾಲ್ ಅವರು ಬಿಹಾರ, ಮಹಾರಾಷ್ಟç ಮತ್ತು ಉತ್ತರಾಖಾಂಡ ರಾಜ್ಯಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ವಿವಿಧ ಜಿಲ್ಲೆಗಳ ಅಧ್ಯಕ್ಷರ ಆಯ್ಕೆಗೆ ನಿಷ್ಪಕ್ಷಪಾತ ವರದಿ ಸಲ್ಲಿಸಿ, ಎಲ್ಲರನ್ನು ಒಳಗೊಳ್ಳುವ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ. ಹಾಗಾಗಿ ನೀವುಗಳು ಸಹ ತುಮಕೂರು ಜಿಲ್ಲಾಧ್ಯಕ್ಷರು ಯಾರು ಆಗಬೇಕು ಎಂಬುದನ್ನು ಯಾವುದೇ ಅಂಜಿಕೆ ಇಲ್ಲದೆ ತಿಳಿಸಬೇಕೆಂದರು.
ಕೆಪಿಸಿಸಿ ವೀಕ್ಷಕರಾದ ಮಿಲಿಂದ್ ದೇವಸೇನ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ತುಮಕೂರು ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಗೀತ ಬೇನಿವಾಲ್ ಆಗಮಿಸಿದ್ದು, ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ಅವರ ಮುಂದಿಡದೇ, ಕೇವಲ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬAಧಿಸಿದAತೆ ಮಾತ್ರ ಅಭಿಪ್ರಾಯ ತಿಳಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ವೀಕ್ಷಕರಾದ ವಿಜಯ ಕುಮಾರ್ ಮಾತನಾಡಿ, ಈ ಹಿಂದೆ ಮಂತ್ರಿಗಳು, ಶಾಸಕರು ಶಿಫಾರಸ್ಸು ಮಾಡಿದ ವ್ಯಕ್ತಿಯನ್ನು ಕಾರ್ಯಕರ್ತರಿಗೆ ಇಷ್ಟ ಇರಲಿ, ಇಲ್ಲದಿರಲಿ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ತಿಲಾಂಜಲಿ ಇಟ್ಟು, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನ್ ಅಭಿಯಾನ ಆರಂಭಿಸಿದೆ. ಬೆಳಗಾವಿ ಅಧಿವೇಶನದ ತೀರ್ಮಾನದಂತೆ ಎಐಸಿಸಿ ಈ ತೀರ್ಮಾನ ತೆಗೆದು ಕೊಂಡಿದ್ದು, ಕಾರ್ಯಕರ್ತರಿಂದ ಆಯ್ಕೆ ಯಾಗುವ ಅಧ್ಯಕ್ಷ ನೇರವಾಗಿ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುವಷ್ಟು ನೇರ ಸಂಪರ್ಕ ಹೊಂದಿರುತ್ತಾನೆ. ಜಿ.ಪಂ., ತಾ.ಪಂ, ಹಾಗೂ ಸ್ಥಳೀಯ ಸಂಸ್ಥೆಗಳ ಟಿಕೇಟ್ ಹಂಚಿಕೆಯ ಜೊತೆಗೆ, ಶಾಸನ ಸಭೆಯ ಟಿಕೇಟ್ ಹಂಚಿಕೆ ಸಂದರ್ಭದಲ್ಲಿಯೂ ಜಿಲ್ಲಾಧ್ಯಕ್ಷರ ಅಭಿಪ್ರಾಯಕ್ಕೆ ಹೆಚ್ಚಿನ ಮನ್ನಣೆ ದೊರೆಯಲಿದೆ ಎಂದು ಸಲಹೆ ನೀಡಿದರು.
ಎಐಸಿಸಿ ವೀಕ್ಷಕರಾದ ಸಂಗೀತ ಬೇನಿವಾಲ್ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ನಿರ್ದೇ ಶನದಂತೆ ಜಿಲ್ಲಾಧ್ಯಕ್ಷರ ಆಯ್ಕೆಯ ಅಭಿಪ್ರಾಯ ಸಂಗ್ರಹಿಸಲು ಇಲ್ಲಿಗೆ ಆಗಮಿಸಿದ್ದೇನೆ. ನೀವು ನೇರವಾಗಿ ತಮ್ಮ ಅಭಿಪ್ರಾಯವನ್ನು ನನ್ನ ಬಳಿ ತಿಳಿಸಬಹುದು. ಇಲ್ಲವೇ ಅಭಿಪ್ರಾಯ ಸಂಗ್ರಹಿಸುವ ಫಾರಂ ತುಂಬುವ ಮೂಲಕವೂ ನನಗೆ ಮಾಹಿತಿ ನೀಡಬಹುದು. ಆಗಸ್ಟ್ ೧೪ ರವರೆಗೆ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಆಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸುತ್ತೇನೆ. ಆಗಸ್ಟ್ ೧೭ಕ್ಕೆ ಜಿಲ್ಲಾಧ್ಯಕ್ಷರ ಘೋಷಣೆಯಾಗಲಿದೆ ಎಂದರು.
ಕಾAಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಜಿ.ಚಂದ್ರ ಶೇಖರ ಗೌಡ, ಮಾಜಿ ಶಾಸಕರಾದ ಡಾ.ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಜಿಲ್ಲಾ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಎಐಸಿಸಿ ವೀಕ್ಷಕರಾದ ರೇಖಾ ಹುಲಿಯಪ್ಪ ಗೌಡ ಇದ್ದರು.
(Visited 1 times, 1 visits today)





