ತುಮಕೂರು: ತಾಲ್ಲೂಕಿನ ಚಿನಗ ಗ್ರಾಮದಲ್ಲಿ ರೈತರಿಗಾಗಿ ರೇಷ್ಮೆ ಕೃಷಿ ಹಾಗೂ ರೇಷ್ಮೆ ಹುಳು ಸಾಕಾಣಿಕೆ ಕುರಿತು ಗುಂಪು ಚರ್ಚೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ತುಮಕೂರಿನ ರೇಷ್ಮೆ ಇಲಾಖೆಯ ಉಪ ನಿರ್ದೇಶಕರು ಲಕ್ಷಿ÷್ಮನರಸಯ್ಯ ಟಿ. ರವರು ರೈತರಿಗೆ ರೇಷ್ಮೆ ಕೃಷಿಯ ಮಹತ್ವ, ಹಿಪುö್ಪನೇರಳೆ ಬೆಳೆ ಬೆಳೆಯುವ ವೈಜ್ಞಾನಿಕ ವಿಧಾನ, ರೇಷ್ಮೆ ಹುಳು ಸಾಕಾಣಿಕೆಯ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಕೋಕೂನ್ ಉತ್ಪಾದನೆ ಹಾಗೂ ರೇಷ್ಮೆ ಕೃಷಿಯಿಂದ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಈಗಾಗಲೇ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳದ ರೈತರು ಸಹ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆದು ರೇಷ್ಮೆ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಸರ್ಕಾರದಿಂದ ರೇಷ್ಮೆ ಕೃಷಿಗೆ ಲಭ್ಯವಿರುವ ವಿವಿಧ ಸಹಾಯಧನಗಳ ಕುರಿತು ವಿವರಿಸಿದ ಅವರು, ವಿಬಿಜಿ-ರಾಮ್‌ಜಿ ಯೋಜನೆಯಡಿ ಹಿಪುö್ಪನೇರಳೆ ತೋಟ ಅಭಿವೃದ್ಧಿಗೆ ಕೊಡುವ ಸಹಾಯಧನ ಬಗ್ಗೆ ಮಾಹಿತಿ ನೀಡಿದರು, ಹನಿ ನೀರಾವರಿ (ಡ್ರಿಪ್ ಇರಿಗೇಷನ್) ವ್ಯವಸ್ಥೆ ಅಳವಡಿಸಿಕೊಳ್ಳಲು ಶೇ.೯೦ರಷ್ಟು ಸಹಾಯಧನ.
ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ೨೨೫ ಚದರ ಅಡಿ ವಿಸ್ತೀರ್ಣದ ಮನೆಗೆ ಸಾಮಾನ್ಯ ವರ್ಗದ ರೈತರಿಗೆ ೬೭,೫೦೦ ಹಾಗೂ ಎಸ್‌ಸಿ/ಎಸ್‌ಟಿ ರೈತರಿಗೆ ೮೧,೦೦೦, ೬೦೦ ಚದರ ಅಡಿ ಮನೆಗೆ ಕ್ರಮವಾಗಿ ೨.೪೩೭೫ ಲಕ್ಷ ಹಾಗೂ ೨.೯೨೫ ಲಕ್ಷ ಮತ್ತು ೧೦೦೦ ಚದರ ಅಡಿ ಮನೆಗೆ ಕ್ರಮವಾಗಿ ೩.೩೭೫ ಲಕ್ಷ ಹಾಗೂ ೪.೦೫ ಲಕ್ಷ ಸಹಾಯಧನ ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.
೧೦೦ ಮೊಟ್ಟೆಗಳಿಗೆ ೧,೦೦೦ ಚಾಕಿ ಪ್ರೋತ್ಸಾಹಧನ, ಬೈವೋಲ್ಟೆöÊನ್ ಗೂಡುಗಳಿಗೆ ಪ್ರತಿ ಕೆ.ಜಿ.ಗೆ ೩೦ ಪ್ರೋತ್ಸಾಹಧನ ಹಾಗೂ ರೇಷ್ಮೆ ಇಲಾ ಖೆಯಿಂದ ಸೋಂಕು ನಿವಾರಕ ಔಷಧಿ ಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರದಿಂದ ಸಲಕ ರಣೆಗಳ ಖರೀದಿಗೆ ಸಾಮಾನ್ಯ ೫೬೨೫೦ ಮತ್ತು ೬೭೫೦೦ ರೂಗಳ ಸಹಯಾಧನ ರೈತರಿಗೆ ನೀಡಲಾಗುತ್ತಿದೆ.
ಒಂದು ಎಕರೆ ಹಿಪುö್ಪನೇರಳೆ ತೋಟದಲ್ಲಿ ವರ್ಷಕ್ಕೆ ಸುಮಾರು ೨೦೦ ರಿಂದ ೨೫೦ ಮೊಟ್ಟೆಗಳ* ರೇಷ್ಮೆ ಹುಳು ಸಾಕಾಣಿಕೆ ನಡೆಸಬಹುದಾಗಿದ್ದು, ಪ್ರತಿ ೧೦೦ ಮೊಟ್ಟೆಗಳಿಗೆ ೮೦ ರಿಂದ ೧೦೦ ಕೆ.ಜಿ. ಗೂಡು ಉತ್ಪಾದನೆ ಸಾಧ್ಯವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೂಡುಗಳಗೆ ಪ್ರತಿ ಕೆ.ಜಿ.ಗೆ ೬೦೦ ರಿಂದ ೮೦೦ ವರೆಗೆ ದರ ದೊರೆಯುತ್ತಿದ್ದು, ಸೂಕ್ತ ನಿರ್ವಹಣೆ ಮಾಡಿದರೆ ಒಂದು ಎಕರೆಯಿಂದ ವರ್ಷಕ್ಕೆ ಸುಮಾರು ೧ ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಆದಾಯ ಗಳಿಸಬಹುದೆಂದರು.
ಕಾರ್ಯಕ್ರಮದಲ್ಲಿ ಚಿನಗ ಗ್ರಾಮದ ರೈತರು, ರೇಷ್ಮೆ ಇಲಾಖೆಯ ರೇಷ್ಮೆ ವಿಸ್ತರಣಾ ಅಧಿಕಾರಿ ಪೂಜಾ ಎಲ್ ಉಪಸ್ಥಿತರಿದ್ದರು.
(Visited 1 times, 1 visits today)





