BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ
  • ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ
  • ಕೊಲೆ ಪ್ರಕರಣದ ಆರೋಪಿಗಳ ಬಂಧನ
  • ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ
  • ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ
  • ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ
  • ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸರಿಂದ ಸಂಕಲ್ಪ
  • ವಿದ್ಯಾರ್ಥಿ ನಿಲಯದ ಮುಂಭಾಗ ಹರಿಯುತ್ತಿರುವ ಚರಂಡಿ ನೀರು: ಕ್ರಮಕ್ಕೆ ಸಾರ್ವಜನಿಕರ ಆಗ್ರಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ
news

ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ

ಹಳ್ಳಿಗರ ಬದುಕಿನ ಅನುಭವ, ಭಾವನೆ, ಸಂಸ್ಕೃತಿ, ಜೀವನ ಮೌಲ್ಯಗಳ ಪ್ರತಿಬಿಂಬ: ಕೊಂಡಜ್ಜಿ ವಿಶ್ವನಾಥ್
By News Desk BenkiyabaleUpdated:July 29, 2026 4:13 pm

ತುಮಕೂರು: ನಿಜವಾದ ಜಾನಪದ ಇನ್ನೂ ಹಳ್ಳಿಗಳಲ್ಲಿಯೇ ಜೀವಂತವಾಗಿದೆ.ಗ್ರಾಮೀಣ ಬದುಕಿನ ಪ್ರತಿಯೊಂದು ಆಯಾಮದಲ್ಲೂ ಜಾನಪದ ಸಂಸ್ಕೃತಿ ಬೆರೆತು ಹೋಗಿದೆಎಂದು ಸದರನ್ ರೈಲ್ವೆ ಅಭಿವೃದ್ದಿ ಮಂಡಳಿ ಸದಸ್ಯ ಕೊಂಡಜ್ಜಿ ವಿಶ್ವನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು, ಅಂತರAಗ ಸಂಸ್ಕೃತಿ ಪ್ರತಿಷ್ಠಾನ(ರಿ) ತುಮಕೂರು ಇವರ ವತಿಯಿಂದ ತುರುವೇಕೆರೆ ತಾಲೂಕು ದಂಡಿನಶಿವರ ಹೋಬಳಿ ಕೊಂಡಜ್ಜಿ ಗ್ರಾಮದಲ್ಲಿ ಆಯೋಜಿಸಿದ್ದ ಅರಳಿ ಮರದಡಿಯಲ್ಲಿ ಮೊಳಗಲಿ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದಿನ ಯುವಜನತೆಗೆ ಜಾನಪದದ ಮಹತ್ವ ಹಾಗೂ ಅದರ ವಿವಿಧ ಪ್ರಕಾರಗಳ ಬಗ್ಗೆ ಸಮರ್ಪಕ ಅರಿವು ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಪೀಳಿಗೆಗೆ ಜಾನಪದ ಪರಂಪರೆಯನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ, ಅದು ಹಳ್ಳಿಗರ ಬದುಕಿನ ಅನುಭವ, ಭಾವನೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳ ಪ್ರತಿಬಿಂಬವಾಗಿದೆ. ಗ್ರಾಮೀಣ ಕಲಾವಿದರ ಬದುಕನ್ನು ಭದ್ರಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಮಾಸಾಶನ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಕೊಂಡಜ್ಜಿ ವಿಶ್ವನಾಥ್ ತಿಳಿಸಿದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ, ಕರ್ನಾಟಕ ಜಾನಪದ ಅಕಾಡೆಮಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ಭಾಗಗಳನ್ನು ತಲುಪಿ ಅಲ್ಲಿನ ಜಾನಪದ ವೈಶಿಷ್ಟತೆಯಾಧರಿತ ಕಾರ್ಯಕ್ರಮ ರೂಪಿಸಿ ಎಲ್ಲ ಜಾನಪದರನ್ನು ಒಗ್ಗೂಡಿಸುವ ಮತ್ತು ಕಲೆಗಳನ್ನು ಪ್ರದರ್ಶನ ಮಾಡಿಸುವ ಮುಖೇನ ವಿಶ್ವ ವಿದ್ಯಾಲಯ ಕಾಲೇಜುಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೂ ತಲುಪಿದೆ. ಹಿರಿಯ ಸದಸ್ಯರು ಜಾನಪದ ವಿದ್ವಾಂಸರು ಆದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಯವರು ಬುಡಕಟ್ಟು ಸಂಸ್ಕೃತಿ ಬಿಂಬಿಸುವ ಕಿಲಾರಿ ಕಲರವ ಎಂಬ ವಿನೂತನ ಕಾರ್ಯಕ್ರಮ ಸಂಘಟಿಸಿ ನಡೆಸಿದ ಕಾರ್ಯಕ್ರಮ ಸೇರಿಎಲ್ಲ ಸದಸ್ಯರು ಒಂದೊAದು ವಿಭಾಗದಲ್ಲಿ ವಿಭಿನ್ನ ಚಟುವಟಿಕೆ ಮೂಲಕ ಜಾನಪದವನ್ನು ತಲುಪಿಸಿದ್ದಾರೆ. ನೂರಾರು ಹಿರಿಯ ಕಲಾವಿದರಿಗೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಂದರ್ಶನ ನಡೆಸಿ ಮಾಸಾಶನ ಮಂಜೂರತಿಗೆ ಆಯ್ಕೆ ಮಾಡುವ ಕೆಲಸ ಸೇರಿದಂತೆ ಯಶಸ್ವಿ ಪ್ರಶಸ್ತಿ ಸಮಾರಂಭ ನಡೆಸುವ ಮೂಲಕ ಹಿರಿಯ ಕಲಾವಿದರಿಗೆ ಗೌರವ ನೀಡುವ ಕೆಲಸ ಮಾಡಿದೆ. ಅದರ ಮುಂದುವರೆದ ಭಾಗವಾಗಿ ಹಳ್ಳಿ ಸಂಸ್ಕೃತಿ ಹಬ್ಬವನ್ನು ಕೊಂಡಜ್ಜಿ ಗ್ರಾಮದಲ್ಲಿ ಆಯೋಜನೆ ಮಾಡಿ ಅಕಾಡೆಮಿ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ನಡೆಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವ ಪ್ರಸಾದ್ ಮಾತನಾಡಿ, ಸಮ ಸಂಸ್ಕೃತಿ, ನೆಲ ಸಂಸ್ಕೃತಿ ಹಾಗೂ ಜಲ ಸಂಸ್ಕೃತಿಯೇ ನಮ್ಮ ಜಾನಪದದ ಮೂಲ ಆಶಯವಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಜಾನಪದ ಸಂಸ್ಕೃತಿಯನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸುವ ಕನಸನ್ನು ನಾನು ಕಂಡಿದ್ದೇನೆ.ಆಕನಸನ್ನು ನನಸಾಗಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಗ್ರಾಮೀಣ ಸಂಸ್ಕೃತಿ, ಜಾನಪದ ಕಲೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಂತರAಗ ಸಂಸ್ಕೃತಿ ಚಿಂತನ ಪ್ರತಿಷ್ಠಾನದ ಸಹಯೋಗದಲ್ಲಿ ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಆಯೋಜಿಸಿದ್ದ ‘ಅರಳಿ ಮರದಡಿಯಲ್ಲಿ ಮೊಳಗಲಿ ಜಾನಪದ’ ಕಾರ್ಯಕ್ರಮವು ಜಾನಪದದ ಸೊಗಡನ್ನು ಅನಾವರಣಗೊಳಿಸಿ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ಸ್ಮರಿಸುವಂತಾಯಿತು.
ಸಾAಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತಗಾಯಕರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ, ದಿಶಾ ಸುಜನ್, ವನಿತಾ ಹಿರೇಮಠ್, ಅಶ್ವಿನಿ ಹಾಗೂ ಶಶಿಕುಮಾರ್ ಅವರು ಸುಶ್ರಾವ್ಯ ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು. ಅವರ ಗಾಯನಕ್ಕೆ ನೆರೆದಿದ್ದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೊಂಡಜ್ಜಿ ಗ್ರಾಮದ ಆದರ್ಶ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಚಿಟ್ಟಿಮೇಳ, ಶ್ರೀಮತಿ ಸಣ್ಣಮ್ಮ ಮತ್ತು ಮಾಯಮ್ಮ ತಂಡ ನಡೆಸಿಕೊಟ್ಟ ಸೋಬಾನೆ ಪದ, ಹಾಗೂ ಪುರುಷೋತ್ತಮ ಮತ್ತು ತಂಡ ಪ್ರದರ್ಶಿಸಿದ ಸೋಮನ ಕುಣಿತ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಗ್ರಾಮೀಣ ಕಲಾವಿದರ ಮನಮೋಹಕ ಪ್ರದರ್ಶನಗಳು ಜಾನಪದದ ಶ್ರೀಮಂತ ಪರಂಪರೆಯನ್ನು ಜೀವಂತವಾಗಿ ಅನಾವರಣಗೊಳಿಸಿದವು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾ.ಶಿ. ದೇವರಾಜು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ್ ಕರಮಲಹಳ್ಳಿ, ಮಂಜೇಶ್ ಚೆನ್ನಾಪುರ, ಡಾ.ಚೌದ್ರಿ ನಾಗೇಶ್, ತಾಂಡವ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ನಮ್ರತಾ ಅವರು ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

(Visited 1 times, 1 visits today)
kannada news karnataka local news tumakur tumkur tumkur news turuvekere ತುಮಕೂರು: ತುರುವೇಕೆರೆ
Previous Articleಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸರಿಂದ ಸಂಕಲ್ಪ
Next Article ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ
News Desk Benkiyabale

Related Posts

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm news

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm news

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm news
ತಾಜಾ ಸುದ್ಧಿಗಳು
news

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm
news

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm
news

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm
news

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm
news

ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ

July 29, 2026 4:15 pm
news

ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ

July 29, 2026 4:13 pm
Our Youtube Channel
Our Picks

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

July 29, 2026 4:22 pm

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm

ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಣೆ

July 29, 2026 4:15 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಪಿಡಿಒಗಳಿಗೆ ಕೆಲಸದಲ್ಲಿ ಒತ್ತಡ ಏರದಂತೆ ಮನವಿ

By News Desk BenkiyabaleJuly 29, 2026 4:22 pm

ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಗುರಿ ಆಧಾರಿತ…

ಹೇಮಾವತಿ ನೀರಿಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ಭರವಸೆ

July 29, 2026 4:20 pm

ಕೊಲೆ ಪ್ರಕರಣದ ಆರೋಪಿಗಳ ಬಂಧನ

July 29, 2026 4:19 pm

ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

July 29, 2026 4:17 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.