ತುಮಕೂರು: ದಿನಾಂಕ ೨೬.೦೭.೨೦೨೬ ರಂದು ರಾತ್ರಿ ೭-೨೦ ಗಂಟೆಯಿ0ದ ರಾತ್ರಿ ೮-೫೦ ಗಂಟೆಯ ಮದ್ಯದಲ್ಲಿ ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಬೆಳಗುಂಬ, ಗರುಡ ಕೆಫೆ ಹತ್ತಿರ ರಾಜಣ್ಣ, ಪುಟ್ಟತಾಯಮ್ಮರವರ ಅಡಿಕೆ ತೋಟದ ಬಳಿ ದೇವರಾಯನದುರ್ಗ-ತುಮಕೂರು ಟಾರ್ ರಸ್ತೆಯಲ್ಲಿ ವೀರಣ್ಣ @ ಮಲ್ಲನನ್ನು ಯಾರೋ ದುಷ್ಕರ್ಮಿಗಳು, ಯಾವುದೋ ಉದ್ದೇಶದಿಂದ, ಯಾವುದೋ ಆಯುಧದಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿದ್ದ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಮೊ.ನಂ. ೧೯೭/೨೦೨೬ ಕಲಂ ೧೦೩(೧) ಃಓS ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ.ಎಂ.ಎಲ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ರವರ ಮುಂದಾಳತ್ವದಲ್ಲ್ಲಿ ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕೆ.ಆರ್, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ-೦೧ ಪ್ರಸನ್ನಕುಮಾರ್ ಕೆ. ಹಾಗೂ ಸಿಬ್ಬಂದಿಗಳಾದ ಮೋಹನ್ ಕುಮಾರ್, ಎ.ಎಸ್.ಐ. ಹನುಮರಂಗಯ್ಯ, ನಿಜಾಮುದ್ದಿನ್, ಹಾಗೂ ಸೈಮನ್ ವಿಕ್ಟರ್, ರಮೇಶ್, ಶಾಂತಕುಮಾರ್ ಕೆ.ಎಸ್, ರಮೇಶ್ ಕೆ, ಗಿರೀಶ್, ಸೈಯದ್ ರಿಫತ್ ಅಲಿ, ಹರೀಶ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ನರಸಿಂಹರಾಜು, ರಮೇಶ್ ಹಾಗೂ ಜಗದೀಶ ರವರುಗಳ ತಂಡವು ಸದರಿ ತಂಡವು ಈ ಪ್ರಕರಣದಲ್ಲಿ ಕೃತ್ಯವೆಸಗಿದ್ದ ಆರೋಪಿಗಳಾದ ಚೇತನ್ @ ಗೂಳಿ, ಶಿವಕುಮಾರ್ @ಆರ್.ಎಕ್ಸ್ ಹಾಲು, ಕುಮಾರ್ ಡಿ @ ಉಂಡಲೇ, ಸಂದೀಪ @ ಹಾಸ್ನ ಅವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತಾರೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ, ಐ.ಪಿ.ಎಸ್ ರವರು ಮತ್ತು ಕೇಂದ್ರವಲಯ ಡಿ.ಐ.ಜಿ.ಪಿ ರವರಾದ ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
(Visited 1 times, 1 visits today)





