ಹುಳಿಯಾರು: ಹುಳಿಯಾರು ಸಮೀಪದ ದಸೂಡಿ ಗ್ರಾಮದಲ್ಲಿ ಕಳೆದೊಂದು ತಿಂಗಳಿAದ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಗ್ರಾಮಸ್ಥರು ಜಲಕ್ಷಾಮದಿಂದ ಕಂಗೆಟ್ಟಿದ್ದಾರೆ. ಸುಮಾರು ೮೫೦ ಕ್ಕೂ ಹೆಚ್ಚು ಮನೆಗಳು ಹಾಗೂ ೫,೦೦೦ ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ದೊಡ್ಡ ಗ್ರಾಮದಲ್ಲಿ ಈಗ ನೀರಿಗಾಗಿ ಅಹಾಕಾರ ಮುಗಿಲು ಮುಟ್ಟಿದೆ.
ಗ್ರಾಮದ ಬನಶಂಕರಿ ದೇವಸ್ಥಾನದ ಬಳಿ, ರಂಗನಾಥಪ್ಪ ಅವರ ಮನೆಯ ಹತ್ತಿರ, ಬಾಳೆಗೊಂದಿ ಹಳ್ಳ, ಆಸ್ಪತ್ರೆಯ ಮುಂಭಾಗ, ಕೆ.ಕೆ.ಕುಮಾರಣ್ಣ ಅವರ ಮನೆಯ ಹತ್ತಿರ ಹಾಗೂ ಅರಳಿಮರದ ಬಳಿ ಹೀಗೆ ಒಟ್ಟು ಆರು ಸಾರ್ವಜನಿಕ ಕೊಳವೆಬಾವಿಗಳಿದ್ದವು. ಇವುಗಳ ಮೂಲಕವೇ ಇಡೀ ಗ್ರಾಮಕ್ಕೆ ಇಷ್ಟೂ ದಿನ ನೀರು ಪೂರೈಸಲಾಗುತ್ತಿತ್ತು. ಆದರೆ, ಪ್ರಕೃತಿಯ ಮುನಿಸೋ ಅಥವಾ ಅಂತರ್ಜಲದ ಅತಿಯಾದ ಬಳಕೆಯೋ, ನಾಲ್ಕು ಕೊಳವೆಬಾವಿಗಳಲ್ಲಿ ನೀರು ಸಂಪೂರ್ಣವಾಗಿ ಬರಿದಾಗಿದ್ದು, ಉಳಿದ ಎರಡು ಕೊಳವೆ ಬಾವಿಗಳ ಲ್ಲಿಯೂ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ.
೧೫ ದಿನಗಳಿಂದ ಟ್ಯಾಂಕರ್ ಆಸರೆ: ಪಂಚಾಯಿತಿಯವರು ತಕ್ಕಮಟ್ಟಿಗೆ ನೀರಿರುವ ಕೊಳವೆಬಾವಿಯಿಂದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಿ, ಮೂರು-ನಾಲ್ಕು ದಿನಕ್ಕೊಮ್ಮೆ ಒಂದೊAದು ಬೀದಿಗೆ ನೀರು ಹರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕಳೆದ ೧೫ ದಿನಗಳಿಂದ ಈ ಆಸರೆಯೂ ಕಸಿದುಕಂಡAತಾಗಿದ್ದು, ಈಗ ಖಾಸಗಿ ಕೊಳವೆಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಆದರೂ ಸುತ್ತಮುತ್ತಲ ಜಮೀನು ಹಾಗೂ ಕೊಳವೆಬಾವಿಗಳಲ್ಲೂ ನೀರು ಸಿಗದಿರುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಶಾಲೆಗಳಿಗೂ ಆವರಿಸಿದ ಜಲಕಂಠಕ: ನೀರಿನ ಅಭಾವದ ಬಿಸಿ ಕೇವಲ ಮನೆಗಳಿಗಷ್ಟೇ ಅಲ್ಲದೆ ಶಾಲೆಗಳಿಗೂ ತಟ್ಟಿದೆ. ಶಾಲೆಯಲ್ಲಿ ಬಿಸಿಊಟ ತಯಾರಿಸಲು ನೀರಿಲ್ಲದೆ, ಅಕ್ಕಪಕ್ಕದ ಜಮೀನುಗಳಲ್ಲಿ ’ಮೋಟಾರ್ ಲೈನ್ ಥ್ರೀ ಫೇಸ್ ಕರೆಂಟ್’ ಬಂದಾಗ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೋಗಿ ನೀರು ತಂದು ಸ್ಟಾಕ್ ಮಾಡಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಪಕ್ಕದ ಉಮ್ಲಾನಾಯ್ಕನತಾಂಡ್ಯ, ಬಲ್ಲಪ್ಪನಹಟ್ಟಿಯಲ್ಲೂ ಕೂಡ ನೀರಿದ ತಾತ್ವರ ಇದೆ.
ದಸೂಡಿಯಲ್ಲಿದ್ದ ’ಶುದ್ಧ ಕುಡಿಯುವ ನೀರಿನ ಘಟಕ’ ಕೂಡ ನೀರಿನ ಕೊರತೆಯಿಂದಾಗಿ ನಿಷ್ಕಿçಯಗೊಳ್ಳುವ ಹಂತ ತಲುಪಿದೆ. ಬೆಳಿಗ್ಗೆ ಕೇವಲ ೩೦ ರಿಂದ ೪೦ ಕ್ಯಾನ್ ನೀರು ಫಿಲ್ಟರ್ ಆದರೆ ದೊಡ್ಡ ವಿಷಯ ಎಂಬAತಾಗಿದೆ. ಇದರಿಂದಾಗಿ ಗ್ರಾಮಸ್ಥರು ಕುಡಿಯಲು ಮತ್ತು ಅಡುಗೆ ಮಾಡಲು ದಿನವೂ ಖಾಸಗಿ ಕೊಳವೆಬಾವಿಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಕರೆಂಟ್ ಬಂದಾಗ ಅಕ್ಕಪಕ್ಕದ ಜಮೀನು ಮಾಲೀಕರನ್ನು ಕಾಡಿ-ಬೇಡಿ, ಸುಡುವ ಬಿಸಿಲಿನಲ್ಲಿ ಸಾಲು ನಿಂತು ನೀರು ತರುವುದು ಇಲ್ಲಿನ ಮಹಿಳೆಯರು ಮತ್ತು ಮಕ್ಕಳ ದಿನಚರಿಯಾಗಿದೆ.
ಬೇಸಿಗೆಯ ನೀರಿನ ಸಮಸ್ಯೆ ನಿವಾರಿಸಲು ತಾಲೂಕಿನಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿದ್ದು ಹದಿನೈದು ದಿನಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಆದರೆ ದಸೂಡಿ ನೀರಿನ ಸಮಸ್ಯೆ ಈ ಸಮಿತಿಗೆ ತಿಳಿದಿದೆಯೋ ಅಥವಾ ತಿಳಿದೂ ಸ್ಪಂಧಿಸದೆ ನಿರ್ಲಕ್ಷಿö್ಯಸಿದ್ದಾರೋ ತಿಳಿಯದಾಗಿದೆ. ಗ್ರಾಪಂ ಪಿಡಿಒ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಹಾಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ದಸೂಡಿ ಗ್ರಾಮಕ್ಕೆ ಶಾಶ್ವತ ನೀರಿನ ಸೌಕರ್ಯ ಒದಗಿಸದಿದ್ದರೆ, ಮುಂಬರುವ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
(Visited 1 times, 1 visits today)



