ಹುಳಿಯಾರು
“ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫ ದಿನಗಳ ಕೆಲಸ ದೊರೆಯಲಿದೆ”ಎಂದು ಗಾಣದಾಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕೋಕಿಲ ರಾಜು ಕರೆ ನೀಡಿದರು.
ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ಮತ್ತು ಮಜರೇ ಗ್ರಾಮಗಳನ್ನೊಳಗೊಂಡAತೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಬೀದಿನಾಟಕ ಹಾಗೂ ಐಇಸಿ ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾರು ಗುಳೆ ಹೋಗದೆ ತಮ್ಮ ಊರಿನಲ್ಲಿ ಸರ್ಕಾರ ನಿಗದಿ ಪಡಿಸಿದ ದಿನಗಳ ವರೆಗೆ ಕೆಲಸ ಮಾಡಬಹುದು. ವೈಯಕ್ತಿಕ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫ ದಿನಗಳ ಕೆಲಸ ಪಡೆಯಬೇಕಾದರೆ ಕೂಲಿಕಾರರು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ನಿಮಗೆ ನಿರಂತರ ಕೆಲಸ ನೀಡುತ್ತೇವೆ. ಅಂದಾಗ ೧೨೫ ದಿನಗಳ ಕಾಲ ಕೆಲಸ ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ಅರ್ಹ ಎಲ್ಲಾ ಕೂಲಿಕಾರರು ಕೆಲಸ ಮಾಡಬಹುದು ಎಂದರು.
ಯೋಜನೆಯ ಸಂಪೂರ್ಣ ಮಾಹಿತಿಯುಳ್ಳ ನೈಜವಾಗಿ ಹಳ್ಳಿಯ ಸೊಗಡನ್ನು ಆಕರ್ಷಕವಾಗಿ ಸಾರ್ವಜನಿಕರ ಗಮನ ಸೆಳೆಯುವಂತೆ ನಾಟಕ ಮಾಡಲಾಯಿತು.
ಈ ವೇಳೆ ಪಂಚಾಯಿತಿ ತಾಂತ್ರಿಕ ಸಹಾಯಕರಾದ ಹೊನ್ನೇಶ್ ಬಿ.ಎಸ್, ಕರಾವಸೂಲಿಕಾರರು ಪುಟ್ಟರಾಜು, ಡಿಇಒ ಅಮೃತ, ಬಿಎಫ್‌ಟಿ ಓಂಕಾರ್ ಮೂರ್ತಿ, ಟಿಆರ್‌ಎಂ ಪ್ರೇಮ, ಪಂಚಾಯಿತಿ ಸಿಬ್ಬಂದಿಗಳು, ಎಂಬಿಕೆ, ಸಂಜೀವಿನಿ ಸಂಘದ ಸದಸ್ಯರು, ದವನ ಭೂಮಿಕೆ ಸಾಂಸ್ಕöÈತಿಕ ಟ್ರಸ್ಟ್ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.

(Visited 1 times, 1 visits today)