ಹುಳಿಯಾರು: ಚಿಕ್ಕನಾಯಕನಹಳ್ಳಿ ಶಾಸಕರು ಜಾತಿಧರ್ಮ ನೋಡದೆ ಅನೇಕ ಸಮುದಾಯಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಿ ಬೆಳೆಸುವ ಮೂಲಕ ತಾಲೂಕನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುತ್ತಿರುವುದು ಅಭಿನಂದನಾರ್ಹ. ಆದರೆ ಶಾಸಕರ ನೆರವಿನ ಹಸ್ತದ ಪಟ್ಟಿಯಲ್ಲಿ ವಿಶ್ವಕರ್ಮ ಸಮುದಾಯ ಸೇರದಿರುವುದು ನೋವಿನ ಸಂಗತಿಯಾಗಿದೆ. ಇದಕ್ಕೆ ನಮ್ಮ ಸಮಾಜದ ಸಂಘಟನೆ ಕೊರತೆಯೇ ಕಾರಣವಾಗಿದ್ದು ಶಾಸಕರು ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನ ಕಟ್ಟಲು ನಿವೇಶನ ಮತ್ತು ಹಣಕಾಸಿನ ನೆರವು ನೀಡಿ ಮೇಲೆತ್ತುವಂತೆ ನಿವೃತ್ತ ಮುಖ್ಯಶಿಕ್ಷಕ ಎ.ಡಿ.ರವೀಂದ್ರಚಾರ್ ಅವರು ಮನವಿ ಮಾಡಿದರು.
ಹುಳಿಯಾರಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
ಹುಳಿಯಾರು ಗ್ರಾಮ ಪಂಚಾಯ್ತಿಯಾಗಿದ್ದ ಸಂದರ್ಭದಲ್ಲಿ ಒಂದೇ ಬಾರಿ ಭಗ ವಂತಚಾರ್, ಕಲ್ಪನಾ, ಕವಿತಾ ಈ ಮೂವರೂ ಚುನಾಯಿತರಾಗಿದ್ದರು. ಸಣ್ಣ ಸಮುದಾಯ ವಾಗಿದ್ದರೂ ಸಹ ಇತರೆ ಸಮುದಾಯ ದವರೊಂದಿಗೆ ಹೆಚ್ಚು ಪ್ರೀತಿ ವಿಶ್ವಾಸವಿಟ್ಟು ಕೊಂಡಿದ್ದರಿAದ ಭಗವಂತಚಾರ್ ಅವರನ್ನು ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದರು. ನಂತರ ಮಂಜಮ್ಮ ಅವರನ್ನೂ ಸಹ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ ಪಟ್ಟಣ ಪಂಚಾಯ್ತಿಯಾದ ದಿನಗಳಿಂದ ಯಾರೊಬ್ಬರೂ ಚುನಾಯಿತರಾಗದಿರುವುದು ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯ ಜೊತೆಗೆ ಯುವಕರಲ್ಲಿ ನಾಯಕತ್ವದ ಗುಣ ಇಲ್ಲದಾಗಿರುವುದು ಪ್ರಮುಖ ಕಾರಣವಾಗಿದೆ. ಈ ನ್ಯೂನತೆಗಳನ್ನು ಸರಿಪಡಿಸಿಕೊಂಡು ರಾಜಕೀಯವಾಗಿ ಬೆಳೆಯಲು ಯುವ ಜನಾಂಗ ಮುಂದಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕ ರಾಘವೇಂದ್ರಚಾರ್ ಅವರು ಮಾತನಾಡಿ “ವಿಶ್ವಕರ್ಮ ಎನ್ನುವುದು ಕೇವಲ ಒಂದು ಜಾತಿಗೆ ಸೀಮಿತವಾದದ್ದಲ್ಲ. ಇಡೀ ವಿಶ್ವದಲ್ಲಿ ತಂತ್ರಜ್ಞಾನ, ಸೃಷ್ಟಿಶೀಲತೆ ಮತ್ತು ನಾವೀನ್ಯತೆಯನ್ನು ಬಿತ್ತುವವರೇ ವಿಶ್ವಕರ್ಮರು. ಇಂಜಿನಿಯರ್‌ಗಳು, ಶಿಲ್ಪಿಗಳು, ತಂತ್ರಜ್ಞರು, ಮೆಕ್ಯಾನಿಕ್‌ಗಳು, ವಾಸ್ತುಶಿಲ್ಪಿಗಳು ಮತ್ತು ಕಾರ್ಮಿ ಕರೆಲ್ಲರೂ ಈ ಪರಂಪರೆಗೆ ಸೇರುತ್ತಾರೆ ಎಂದರು.
ಪ್ರಾಚೀನ ವೇದಗಳು ಮತ್ತು ಶಾಸ್ತç ಗ್ರಂಥಗಳಲ್ಲಿ ವಿಶ್ವಕರ್ಮನನ್ನು ಸೃಷ್ಟಿಯ ಮೂಲ ಶಕ್ತಿಯೊಂದಿಗೆ ಸಂಯೋಜಿಸಲಾಗಿದೆ. ದೇವತೆಗಳಿಗೆ ಅರಮನೆಗಳನ್ನು, ನಗರಗಳನ್ನು ಹಾಗೂ ಶಿವನ ತ್ರಿಶೂಲ, ವಿಷ್ಣುವಿನ ಚಕ್ರ, ರಥಗಳು ಹಾಗೂ ದೇವಸ್ಥಾನಗಳಂತಹ ಅದ್ಭುತ ನಿರ್ಮಾಣಗಳನ್ನು ವಿಶ್ವಕರ್ಮರು ಮಾಡಿಕೊಟ್ಟಿದ್ದಾರೆ ಎಂದು ಸ್ಮರಿಸಿದರು. ರಾಮಾಯಣದಲ್ಲಿ ಲಂಕಾನಗರಿ ಮತ್ತು ಮಹಾಭಾರತದಲ್ಲಿ ದ್ವಾರಕಾ ನಗರ ನಿರ್ಮಾಣದ ಹಿಂದೆ ವಿಶ್ವಕರ್ಮರ ಪಾತ್ರವಿರುವುದನ್ನು ಉದಾಹರಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಹಕಾರ ಸಂಘದ ಅಧ್ಯಕ್ಷ ರಮೇಶ್, ತಾಂತ್ರಿಕ ಸಲಹೆಗಾರ ಪ್ರಭು, ನಿವೃತ್ತ ಪಿಡಿಒ ಮಲ್ಲೇಶಣ್ಣ, ನಿರ್ದೇಶಕರುಗಳಾದ ಮಂಜುನಾಥ್, ನಟೇಶ್, ಕುಮಾರ್, ಕಾರ್ಗಿಲ್ ಸತೀಶ್, ವಕೀಲರಾದ ಸತೀಶ್, ತನುಜಾ, ಮತ್ತಿತರರು ಇದ್ದರು.

(Visited 1 times, 1 visits today)