ಕೊರಟಗೆರೆ: ಮಳೆ ಇಲ್ಲದೆ ಜಾನುವಾರು, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು, ರಾತ್ರಿ ಹೊತ್ತಲ್ಲಿ ಕೆರೆಯ ನೀರನ್ನು ಖಾಸಗಿ ತೋಟಕ್ಕೆ ಬಳಸಿಕೊಳ್ಳುತ್ತಿದ್ದು ಇವರ ವಿರುದ್ದ ಕಠಿಣ ಕ್ರಮ ತೊಗೆದುಕೊಳ್ಳಬೇಕು ಎಂದು ನವಿಲುಕುರಿಕೆ ಗ್ರಾಮಸ್ಥರ ಒತ್ತಾಯವಾಗಿದೆ.
ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ನವಿಲುಕುರಿಕೆ ಗ್ರಾಮದ ಎನ್ನವ ವ್ಯಕ್ತಿಕೆರೆಯ ನೀರನ್ನ ಕಳೆದ ೨೦ ದಿನಗಳಿಂದ ನಿರಂತರವಾಗಿ ಕೆರೆಯ ನೀರು ಬಳಸುತ್ತಿದ್ದಾರೆಂದು ರೈತರು ಆರೋಪ ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಲು ಹೋದ ರೈತರ ವಿರುದ್ದ ತನ್ನ ತಪ್ಪು ಮುಚ್ಚಿಕೊಳ್ಳಲು ರೈತರ ವಿರುದ್ಧವೇ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ರೈತರು ಆರೋಪ ಮಾಡಿದರು.
ನವಿಲುಕುರಿಕೆ ಗ್ರಾಮದ ರೈತ ಮರಿಯಪ್ಪ ಮಾತನಾಡಿ ಕಳೆದ ಸುಮಾರು ೨೦ ದಿನಗಳಿಂದ ಪಂಪ್ ಮೂಲಕ ನೀರನ್ನು ನಿರಂತರವಾಗಿ ತೋಟಕ್ಕೆ ಹರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದ್ದು, ಇದರಿಂದ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆರೆಯ ತುಬೂನ್ನ ಸಹ ಹಾಳು ಮಾಡಿದ್ದು, ಅದರಿಂದ ನೀರು ಕೂಡ ಪೋಲು ಆಗುತ್ತಿದೆ. ಬೇಸಿಗೆಯ ಸಂದರ್ಭದಲ್ಲಿ ಜಾನುವಾರುಗಳು ಹಾಗೂ ಪಕ್ಷಿಗಳಿಗೆ ಇದೇ ಕೆರೆಯ ನೀರು ಪ್ರಮುಖ ಆಧಾರವಾಗಿದ್ದು, ನೀರನ್ನು ಖಾಸಗಿ ಜಮೀನಿಗೆ ಬಳಸುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡ ಶ್ರೀರಂಗಯ್ಯ ಮಾತನಾಡಿ ಕೆರೆಯ ನೀರನ್ನು ಕೃಷಿ ಅಥವಾ ಖಾಸಗಿ ತೋಟಗಳಿಗೆ ಬಳಸುವ ವಿಚಾರದಲ್ಲಿ ಸರ್ಕಾರ ಹಾಗೂ ಸಂಬAಧಪಟ್ಟ ಇಲಾಖೆಗಳ ನಿಯಮಗಳಿದ್ದರೂ, ಅವುಗಳನ್ನು ಉಲ್ಲಂಘಿಸಿ ನೀರು ಬಳಸಲಾಗುತ್ತಿದೆ. ನಾನು ನವಿಲುಕುರಿಕೆ ಗ್ರಾಮದ ಕೆರೆಯನ್ನ ಮೀನು ಸಾಕಾಣಿಕೆ ಮಾಡಲುಗುತ್ತಿಗೆ ತೆಗೆದುಕೊಳ್ಳಲಾಗಿದೆ. ನೀರನ್ನು ಏಕೆ ತೋಟಕ್ಕೆ ಹರಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಲು ಹೋದಾಗ ತಮ್ಮೊಂದಿಗೆ ಅಸಭ್ಯವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಲಾಗಿದ್ದು, ಕೆರೆಯ ನೀರು ಬಳಸಿಕೊಂಡರೆ ನಾನು ಬೀದಿಗೆ ಬರುತ್ತೇನೆ ಎಂದು ತಮ್ಮ ಅಳಲನ್ನ ತೊಡಿಕೊಂಡರು.
ರೈತ ರವಿ ಮಾತನಾಡಿ ಕೆರೆಯ ನೀರನ್ನು ಖಾಸಗಿ ಜಮೀನಿಗೆ ಬಳಸಲು ಅನುಮತಿ ಇದೆಯೋ ಇಲ್ಲವೋ ಅಧಿಕಾರಿಗಳು ಪರಿಶೀಲಿಸಬೇಕು. ನೀರು ಹೀಗೆ ನಿರಂತರವಾಗಿ ತೋಟಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರೇ ಉಳಿಯುವುದಿಲ್ಲ. ಸರ್ಕಾರ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ತಪ್ಪು ಯಾರದ್ದು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ. ನಮಗೆ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷ ಇಲ್ಲ, ಕೆರೆಯ ನೀರು ಉಳಿಯಬೇಕು ಎಂದರು. ಇದೆ ಸಂದರ್ಭದಲ್ಲಿ ರೈತರು ಹಾಗೂ ಸಾರ್ವಜನಿಕರು ಹಾಜರಿದ್ದರು.

(Visited 1 times, 1 visits today)