ತುಮಕೂರು: ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿಯಿಂದ ನಡೆಯಿತು.
ಗ್ರಾಮ ಪ್ರದಕ್ಷಿಣೆ, ಗಂಗಾಪೂಜೆ, ವಿಶ್ವಕ್ಷೇನ ಮಹಾಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ ಪುಣ್ಯಾಃ, ರಕ್ಷಾಬಂಧನ, ಆಚಾರ್ಯ ಋತ್ವಿಕ್ ಗ್ವರಣ ಮೃತಿಕಾ ಸಂಗ್ರಹಣ, ಯಾಗಶಾಲಾ ಪ್ರವೇಶ, ಜೀವತತ್ವಾದಿ ಹೋಮ, ಪೂರ್ಣಾಹುತಿ, ಅಂಕುರಾರ್ಪಣೆ, ಪಂಚಗವ್ಯ ಸ್ನಪನ, ಧ್ಯಾನ್ಯಾಧಿವಾಸ, ಪುಷ್ಪಾಧಿವಾಸ, ಮಹಾಮಂಗಳಾರತಿ ನೆರವೇರಿದವು.
ಬ್ರಾಹ್ಮೀ ಲಗ್ನದಲ್ಲಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ವಿವಿಧ ಪೂಜೈ ಕೈಂಕರ್ಯಗಳೊAದಿಗೆ ನಡೆಯಿತು. ವಾಸುದೇವ ಪುಣ್ಯಾಃ, ದ್ವಾರಾಧನೆ, ಮಹಾಕುಂಭಾರಾಧನೆ, ಪ್ರಾಣಪ್ರತಿಷ್ಠಾಪನಾ ಹೋಮ, ಪುರುಷಸೂಕ್ತ ಶ್ರೀಸೂಕ್ತ ಹೋಮ, ದುರ್ಗಾ ಸೂಕ್ತ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾ ಪೂರ್ಣಾಹುತಿ, ಕುಂಭ ಉದ್ಘಾಟನೆ ಜರುಗಿತು.
ಜತೆಗೆ ಶ್ರೀ ವೀರಾಂಜನೇಯಸ್ವಾಮಿ ದೇವಾಲ ಯದಲ್ಲಿ ಶ್ರೀ ಆಂಜನೇಯ ಮೂಲ ಮಂತ್ರ ಹೋಮ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮರಳೂರಿನ ಸುಮಂಗಲಿಯರು ಆರತಿ ಹೊತ್ತು ಅಮ್ಮನವರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸಿದರು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯದ್ವಾರ ಉದ್ಘಾಟನೆ: ನೂತನವಾಗಿ ನಿರ್ಮಿಸಲಾಗಿರುವ ಮರಳೂರಿನ ಮುಖ್ಯ ದ್ವಾರವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು, ತುಮಕೂರು ನಗರದಲ್ಲಿ ಮರಳೂರು ಮೂಲತಃ ಹಳೆಯೂರು. ಇದು ದಕ್ಷಿಣ ದಿಕ್ಕಿನಲ್ಲಿದ್ದು, ಒಳ್ಳೆಯ ಜನರಿದ್ದಾರೆ. ಈ ಭಾಗದ ಜನತೆ ಸಜ್ಜನ ಶಾಸಕರು, ಕಾರ್ಪೋರೇಟರ್ ಪಡೆದಿದ್ದಾರೆ. ಈ ಭಾಗದಲ್ಲಿ ಉತ್ತಮವಾಗಿ ಧಾರ್ಮಿಕ ಕಾರ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಶಂಸಿಸಿದರು.
ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೇ ಜಾತಿ, ಮತ ಬೇಕಾಗಿಲ್ಲ. ಎಲ್ಲ ವರ್ಗದ ಜನರು ಒಟ್ಟಾಗಿ ಸೇರಿ ಮಾಡುವ ಕಾರ್ಯಕ್ರಮಗಳು ಅಭೂತಪೂರ್ವವಾಗಿ ಮೂಡಿ ಬರುತ್ತವೆ. ಮರಳೂರಿನ ಗ್ರಾಮಸ್ಥರು ಈ ನಿಟ್ಟಿನಲ್ಲಿ ಒಟ್ಟಾಗಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆದಿದೆ ಎಂದರು.
ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗಿವೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ದೇವಸ್ಥಾನಗಳು ನಿರ್ಮಾಣ ವಾಗುತ್ತಿರುವುದರಿಂದ ಜನರಲ್ಲಿ ಭಕ್ತಿ ಭಾವನೆ ಮೂಡಲು ಸಹಕಾರಿಯಾಗುತ್ತದೆ. ಪ್ರತಿ ಗ್ರಾಮಗಳಲ್ಲಿ ದೇವಸ್ಥಾನದ ಜತೆಗೆ ಶಾಲೆಗಳು ಅಭಿವೃದ್ಧಿ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರದಲ್ಲಿ ಮರಳೂರು ಅತ್ಯಂತ ಹಳೆಯದಾದ ಊರು. ತುಮಕೂರು ನಗರ ಈ ಭಾಗದಲ್ಲಿ ವಿಸ್ತರಣೆಯಾಗಲು ಮರಳೂರಿನ ಜನರ ಕೊಡುಗೆ ಅಪಾರವಾಗಿದೆ. ಈ ಭಾಗದ ಜನರ ಭೂಮಿಯಿಂದಲೇ ತುಮಕೂರಿನ ಈ ಭಾಗ ಬೆಳೆದಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿ ಸುವುದರಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ. ಜತೆಗೆ ಇಂದಿನ ಯುವ ಪೀಳಿಗೆಗೂ ಧಾರ್ಮಿಕ ಕಾರ್ಯಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದರು.
ಊರು, ಮನೆಗಳಲ್ಲಿ ಸಂಪ್ರದಾಯ ಬದ್ಧ ಆಚರಣೆಗಳು ಆಗಿಂದಾಗ್ಗೆ ನಡೆಯುತ್ತಿರಬೇಕು. ಆಗ ಮಾತ್ರ ಎಲ್ಲರಲ್ಲೂ ಸಹಬಾಳ್ವೆ ಮೂಡಲು ಸಾಧ್ಯವಾಗುತ್ತದೆ. ಅಲ್ಲದೆ ಶಿಕ್ಷಣದ ಜತೆಗೆ ಸಂಸ್ಕಾರಗಳು ಬೆಳೆಯಲು ಇಂತಹ ಧಾರ್ಮಿಕ ಕಾರ್ಯಕ್ರಮ ಸಹಕಾರಿಯಾಗುತ್ತವೆ ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್. ನಿಂಗಪ್ಪ, ಸನತ್, ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್, ಪ್ರಧಾನರಾದ ಅಶೋಕ್ ಕುಮಾರ್, ಲಕ್ಷಿ÷್ಮÃನಾರಾಯಣ (ಚಿಕ್ಕಣ್ಣಯ್ಯ), ಶಿವರಾಮ್, ರಾಮಣ್ಣ, ಸುರೇಶ್, ಸೋಮಣ್ಣ, ಹರೀಶ್, ಪಟೇಲ್ ರಾಜು, ಪ್ರಾಣೇಶ್ ಹಾಗೂ ಮರಳೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
(Visited 1 times, 1 visits today)





