ತುಮಕೂರು: ಲೇಖಕಿ ವಿವೇಕ ಕೆ.ವಿ. ಅವರು ರಚಿಸಿರುವ ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕಥಾ ಸಂಕಲನವು ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ ೧೦.೩೦ಕ್ಕೆ ತುಮಕೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿದೆ.
ಬಹುಮುಖಿ ಬಳಗ, ತುಮಕೂರು ಹಾಗೂ ಅಪೂರ್ವ ಪ್ರಕಾಶನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಜಕೀಯ ವಿಶ್ಲೇಷಕರು ಹಾಗೂ ಹಿರಿಯ ಪತ್ರಕರ್ತರಾದ ಟಿ.ಕೆ. ತ್ಯಾಗರಾಜ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದು, ಕವಯತ್ರಿ ಡಾ. ಕೆ. ಷರೀಫಾ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಲೇಖಕಿ ಬಾ.ಹ. ರಮಾಕುಮಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಮರ್ಶಕ ರವಿ ಕುಮಾರ್ ನೀಹ ಅವರು ಕೃತಿಯ ಪರಿಚಯ ಮಾಡಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕಿ ಆಶಾ ಬಗ್ಗನಡು, ಸಂಘಟಕರಾದ ಸತೀಶ್ ಜವರೇಗೌಡ, ಲೇಖಕಿ ರಂಗಮ್ಮ ಹೊದೇಕಲ್, ಕೃತಿಯ ಲೇಖಕಿ ವಿವೇಕ ಕೆ.ವಿ ಸೇರಿದಂತೆ ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.
ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯು ಬದುಕಿನ ವಿವಿಧ ಅನುಭವಗಳು, ಮಾನವ ಸಂಬAಧಗಳು ಹಾಗೂ ಸಮಾಜದ ಸೂಕ್ಷ÷್ಮ ಸಂಗತಿಗಳನ್ನು ಕಥೆಗಳ ಮೂಲಕ ಕಟ್ಟಿಕೊಡುವ ಪ್ರಯತ್ನವಾಗಿದೆ. ಸರಳ ಹಾಗೂ ಸಹಜ ನಿರೂಪಣೆಯ ಮೂಲಕ ಓದುಗರನ್ನು ತಲುಪುವ ಕಥೆಗಳು ಈ ಸಂಕಲನದಲ್ಲಿವೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಹುಮುಖಿ ಬಳಗದ ಅಧ್ಯಕ್ಷರಾದ ಹಡವನಹಳ್ಳಿ ವೀರಣ್ಣಗೌಡ ಹಾಗೂ ಕಾರ್ಯದರ್ಶಿ ಮಂಜುನಾಥ್ ದಂಡಿನಶಿವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(Visited 1 times, 1 visits today)




