ತುಮಕೂರು
ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆ ಶನಿವಾರ ವಿಜೃಂಭಣೆಯಿAದ ನಡೆಯಿತು. ನಗರದ ವಿವಿಧ ಗಣೇಶ ಸಮಿತಿಗಳ ೨೦ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದವು. ಆಯಾ ಸಮಿತಿಯವರು ಪ್ರತ್ಯೇಕ ಅಲಂಕೃತ ವಾಹನಗಳಲ್ಲಿ ತಮ್ಮ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಶೋಭಾಯಾತ್ರೆಯಲ್ಲಿ ಸಾಗಿಬಂದರು. ಸಾಮೂಹಿಕ ವಿಸರ್ಜನೆ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ಧ ಭಕ್ತರು ಕಲಾತಂಡಗಳ ನಾದಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಹಿಂದೂ ಮಹಾ ಗಣಪತಿಗೆ ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳು ಗಣೇಶನಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷಿö್ಮÃಕಾಂತ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್, ಅಂಬಿಕಾ ಹುಲಿನಾಯ್ಕರ್, ಬಿ.ಎಸ್. ಮಂಜುನಾಥ್, ಟಿ.ಎಸ್. ಕುಂಭಿನರಸಯ್ಯ, ಎಚ್.ಜಿ. ಚಂದ್ರಶೇಖರ್, ಟಿ.ಬಿ. ಹರೀಶ್, ಸಿ.ಎಸ್. ಭಾಸ್ಕರ್, ವಾಸವಿ ಗುಪ್ತ, ಸ್ವಚ್ಛ ಮಂಜುನಾಥ್, ಜುಮರ್ ಲಾಲ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಕೆ. ಶ್ರೀನಿವಾಸ್, ಬಿ.ಜಿ. ಪ್ರದೀಪ್, ಕಾರ್ಯದರ್ಶಿಗಳಾದ ಮಧುಸೂದನ್, ಬಾಲಾಜಿ, ಕೆ. ವೇದಮೂರ್ತಿ, ಸುರೇಶ್ ರಾವ್, ಖಜಾಂಚಿ ಜೀವನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ಮುಖಂಡರಾದ ಟಿ.ಹೆಚ್. ಹನುಮಂತರಾಜು, ನವಚೇತನ್, ಧನುಷ್, ಖಜಾಂಚಿ ಜೀವನ್ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಸಂಘಸAಸ್ಥೆಗಳ ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಸೇರಿದ್ದರು.
ಎಲ್ಲಾ ಗಣೇಶ ಮೂರ್ತಿಗಳನ್ನು ಸಾಲಿನಲ್ಲಿ ಕೊಂಡೊಯ್ಯಲಾಯಿತು. ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನ ಶೋಭಾಯಾತ್ರೆಯ ವೈಭವ ಹೆಚ್ಚಿಸಿತ್ತು. ಕರಿಬಸವೇಶ್ವರ ಮಠದ ಆನೆ ಲಕ್ಷಿö್ಮ ಮೆರವಣಿಗೆಯುದ್ದಕ್ಕೂ ಗಮನ ಸೆಳೆಯಿತು. ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಕೇÀಸರಿ ಬಾವುಟಗಳು ರಾರಾಜಿಸಿದವು. ಅಲಂಕಾರ ಮಾಡಲಾಗಿತ್ತು. ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಸಂಭ್ರಮದಿAದ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಕಾರ್ಯಕರ್ತರು ಕೇಸರಿ ಕಲರವ ಮೆರೆದು. ಉರಿಯುವ ಬಿಸಿಲನ್ನೂ ಲೆಕ್ಕಿಸದೆ ಕಲಾತಂಡಗಳ ನಾದಕ್ಕೆ ತಕ್ಕಂತೆ ಕುಣಿದು ಸಡಗರಪಟ್ಟರು.
ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ಆಧುನಿಕ ಡಿ.ಜೆ. ಸೆಟ್, ನಾಸಿಕ್ ಡೋಲು, ವಿದ್ಯುತ್ ದೀಪಾಲಂಕಾರ ಹಾಗೂ ಕಣ್ಮನ ತಣಿಸುವ ಬಾಣ-ಬಿರುಸುಗಳ ಮದ್ದಿನ ವೈಖರಿಯೊಂದಿಗೆ ಶೋಭಾಯಾತ್ರೆ ವಿಜೃಂಭಣೆಯಿAದ ನಡೆಯಿತು. ಸಂಜೆ ಕೆಎನ್ಎಸ್ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನೆರವೇರಿತು.
(Visited 1 times, 1 visits today)




