ತುಮಕೂರು: ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಮಹಾತ್ಮಗಾಂಧಿ ಕನಸು ಕಂಡಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಂಸ್ಥೆ ಮದ್ಯವರ್ಜನ ಶಿಬಿರಗಳ ಮೂಲಕ ಮದ್ಯ ವ್ಯಸನಿಗಳಿಗೆ ಹೊಸ ಬದುಕು ನೀಡುತ್ತಾ ಅವರ ಮನೆಯ, ಮನೆದ ದೀಪ ಬೆಳಗುತ್ತಿದೆ.ಆದರೆ ಸರ್ಕಾರ ಹಾಗೂ ರಾಜಕಾರಣಿಗಳು ಮದ್ಯವನ್ನು ಪ್ರೋತ್ಸಾಹಿಸುತ್ತಾ ಮನೆಗಳ ದೀಪ ಆರಿಸುತ್ತಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ ವಿಷಾದಿಸಿದರು.
ಗಾಂಧಿಜಯAತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ನಗರದ ಹನುಮಂತಪುರ ಕೊಲ್ಲಾಪುರದಮ್ಮ ಸಭಾಭವನದಲ್ಲಿ ಶುಕ್ರವಾರ ನಡೆದದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿಗಾಂಧಿ ಸ್ಮೃತಿ ಮತ್ತು ಬೃಹತ್‌ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಕುಡುಕರನ್ನು ಅವಹೇಳನ ಮಾಡುವ ಈ ಸಮಾಜದಲ್ಲಿ ಇಡೀ ಜಗತ್ತಿನಲ್ಲಿ ಕುಡುಕರಿಗೆ ವೇದಿಕೆ ನೀಡಿ, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಸಂಸ್ಥೆ. ಒಂದು ಸರ್ಕಾರ ಮಾಡಬೇಕಾದ ಸಮಾಜ ಸುಧಾರಣಾ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಅಭಿನಂದಿಸಿದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದರಿಂದ ಹಿಡಿದು, ದೇವಾಲಯಗಳ ಜೀಣೋದ್ಧಾರ, ಅಶಕ್ತರಿಗೆ ಮನೆ ಕಟ್ಟಿಸಿಕೊಡುವುದು, ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಶಾಲೆಗಳಿಗೆ ಡೆಸ್ಕ್ ಕೊಡುವುದು ಮುಂತಾದ ಹಲವಾರು ಕಾರ್ಯಕ್ರಮಗಳ ಮೂಲಕ ಧರ್ಮಸ್ಥಳ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಸ್ವಾಸ್ಥö್ಯ ಸಮಾಜ ನಿರ್ಮಾಣದ ಗಾಂಧೀಜಿ ಕನಸನ್ನು ನನಸು ಮಾಡುವ ಕಡೆ ಮುನ್ನಡೆದಿದೆ ಎಂದು ಹೇಳಿದರು.
ಈಗ ದೇವಸ್ಥಾನಗಳು, ಮಠಮಾನ್ಯಗಳು ಜಾತಿ ಆಧಾರಿತವಾಗಿವೆ. ಆದರೆ ಜಾತಿ, ಧರ್ಮ, ಲಿಂಗ, ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಮೂಲಕ ಮಾದರಿ ಸಮಾಜ ನಿರ್ಮಾಣ ಕಟ್ಟುವ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ಥಾಪನೆ ಮಾಡಿದ ಈ ಸಂಸ್ಥೆ ಮಾಡುತ್ತಿದೆ. ಕುಡಿತ ಚಟ ಅನೇಕ ಕುಟುಂಬಗಳ ನೆಮ್ಮದಿ ಹಾಳು ಮಾಡಿದೆ. ಸಂಸಾರಗಳನ್ನು ಬೀದಿಗೆ ತಂದಿದೆ.ಅAತಹ ವ್ಯಸನಿಗಳನ್ನು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿ ಅವರನ್ನು ಹೊಸ ಬದುಕಿನತ್ತ ಕರೆದೊಯ್ಯುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.
ಜನಜಾಗೃತಿ ವೇದಿಕೆ ಟ್ರಸ್ಟ್ನ ಜಿಲ್ಲಾ ಅಧ್ಯಕ್ಷ ಆರ್. ಕಾಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಾಪೂಜಿಯವರ ರಾಮರಾಜ್ಯ ಸ್ಥಾಪನೆ ಕನಸಿಗೆ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. ೩೦ ವರ್ಷಗಳ ಹಿಂದೆಡಾ. ವೀರೇಂದ್ರ ಹೆಗ್ಗಡೆಯವರು ಸ್ಥಾಪನೆ ಮಾಡಿದ ಜನ ಜಾಗೃತಿ ವೇದಿಕೆ ಮೂಲಕ ಮದ್ಯ ವ್ಯಸನಿಗಳನ್ನು ಮನ: ಪರಿವರ್ತನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡುತ್ತಿದೆ ಎಂದರು.
ಮಹಾತ್ಮ ಗಾಂಧಿಯವರ ಚಿಂತನೆ, ಆದರ್ಶಗಳನ್ನು ಜನರಿಗೆ ತಲುಪಿಸಬೇಕಾದ ಜನನಾಯಕರು ಗಾಂಧಿಯನ್ನು ತಮ್ಮ ರಾಜಕೀಯ ಅಸ್ತçವಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಮದ್ಯ ಮಾರಾಟದಿಂದ ಸರ್ಕಾರ ನಡೆಯುತ್ತಿದೆ ಎಂದು ಹೇಳಿಕೊಳ್ಳುವ ನಾಯಕರಿಗೆ ಧಿಕ್ಕಾರ ಹೇಳಬೇಕು ಎಂದ ಅವರು, ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಅವರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಆರ್.ಕಾಮರಾಜ್ ಮನವಿ ಮಾಡಿದರು.
ಲೇಖಕಿ ಮಲ್ಲಿಕಾ ಬಸವರಾಜು ಅವರು ಮಹಾತ್ಮ ಗಾಂಧೀಜಿ ಬಗ್ಗೆ ಉಪನ್ಯಾಸ ನೀಡಿದರು.
ಸ್ಫೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕಾದ ಸರ್ಕಾರ ಮದ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ? ಮದ್ಯ ವ್ಯಸನದಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ.ಕುಡಿತದಿಂದ ಆರೋಗ್ಯವೂ ಹಾಳಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ಮೂಲಕ ವ್ಯವಸನಿಗಳಿಗೆ ನವಜೀವನ ನೀಡುತ್ತಿದೆ ಎಂದರು.
ಉದ್ಯಮಿ ಡಾ.ಆರ್.ಎಲ್. ರಮೇಶ್ ಬಾಬು ಮಾತನಾಡಿ, ಮನುಷ್ಯನಾದವರಿಗೆ ಸರಿ, ತಪ್ಪುಗಳ ಬಗ್ಗೆ ವಿವೇಚನೆ ಇರಬೇಕು.ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಬೇಕು, ತಮ್ಮ ಜವಾಬ್ದಾರಿಗಳ ಅರಿವು ಹೊಂದಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅ.ನ. ಲಿಂಗಪ್ಪ, ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಕೋತಿತೋಪು ವೃತ್ತದಿಂದ ಜಾಗೃತಿ ಜಾಥಾ ನಡೆಸಲಾತಿತು.

(Visited 1 times, 1 visits today)