ಹುಳಿಯಾರು: ಜನಸಾಮಾನ್ಯರ ಹಾಗೂ ಬಡವರ ಹಸಿವು ನೀಗಿಸಬೇಕಿದ್ದ ಹುಳಿಯಾರಿನ ಇಂದಿರಾ ಕ್ಯಾಂಟೀನ್ ಸೂಕ್ತ ನಿರ್ವಹಣೆ ಮತ್ತು ನಿರ್ಲಕ್ಷ÷್ಯದಿಂದಾಗಿ ಕಳೆದ ಒಂದು ತಿಂಗಳಿAದ ಸಂಪೂರ್ಣವಾಗಿ ಬಾಗಿಲು ಹಾಕಿತ್ತು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಳೆಗುಂದಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಆದರೆ, ಈ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯು ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕ್ಯಾಂಟೀನ್ ಮರುಪ್ರಾರಂಭಗೊAಡು ಹೊಸ ಕಳೆ ಪಡೆದುಕೊಂಡಿದೆ.
ಹಿಂದಿನ ದುಸ್ಥಿತಿ: ಸಿಬ್ಬಂದಿ ಸಂಕಷ್ಟ ಮತ್ತು ಕುಡುಕರ ಅಡ್ಡೆ: ಕಳೆದ ನಾಲ್ಕು ತಿಂಗಳಿAದ ಅಡುಗೆ ಸಿಬ್ಬಂದಿಗೆ ಯಾವುದೇ ವೇತನ ನೀಡಿರಲಿಲ್ಲ. ದಿನನಿತ್ಯ ಮಾರಾಟದ ಹಣದಲ್ಲೇ ರೇಷನ್ ತಂದು, ಸ್ವಂತ ದುಡ್ಡಿನಲ್ಲಿ ವಿದ್ಯುತ್ ಬಲ್ಬ್, ಪೈಪ್‌ಲೈನ್ ರಿಪೇರಿ ಮಾಡಿಕೊಳ್ಳಲಾಗಿತ್ತು. ಮೋಟಾರ್ ಇಲ್ಲದೆ ತೊಟ್ಟಿಯಿಂದ ನೀರನ್ನು ಸಿಬ್ಬಂದಿಯೇ ಹೊತ್ತು ತಂದು ಅಡುಗೆ ಮಾಡುವ ದಯನೀಯ ಸ್ಥಿತಿ ಇತ್ತು. ಕ್ಯಾಂಟೀನ್ ಮುಚ್ಚಿದ್ದರಿಂದ ಈ ಕಟ್ಟಡವು ಕುಡುಕರ ತಾಣವಾಗಿ ಮಾರ್ಪಟ್ಟಿತ್ತು. ಸುತ್ತಮುತ್ತ ಮದ್ಯದ ತ್ಯಾಜ್ಯಗಳು ಬಿದ್ದಿದ್ದವು. ಶೌಚಾಲಯದ ನೀರಿನ ನಲ್ಲಿಗಳು ಹಾಗೂ ವಿದ್ಯುತ್ ಬಲ್ಬ್ಗಳನ್ನು ಕಿಡಿಗೇಡಿಗಳು ಬಿಚ್ಚಿಕೊಂಡು ಹೋಗಿದ್ದರು. ರೋಗಿಗಳು, ವಿದ್ಯಾರ್ಥಿಗಳು, ನಿರ್ಗತಿಕರು ಮತ್ತು ಅಲೆಮಾರಿಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು.
ಪತ್ರಿಕಾ ವರದಿಯ ಫಲಶುÈತಿ: ಹೊಸ ಸ್ವರೂಪದಲ್ಲಿ ಕ್ಯಾಂಟೀನ್ ಪುನರಾರಂಭ: ಪತ್ರಿಕೆಯಲ್ಲಿ ಬಂದ ವಿಶೇಷ ವರದಿ ಹಾಗೂ ಸಾರ್ವಜನಿಕರ ಅಳಲಿಗೆ ಸ್ಪಂದಿಸಿದ ನೂತನ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಮಮತಾ ಅವರು, ತಕ್ಷಣವೇ ಕ್ರಮ ಕೈಗೊಳ್ಳಲು ಮುಖ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಆಗಾಗ ಕ್ಯಾಂಟೀನ್‌ಗೆ ಭೇಟಿ ನೀಡಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದರು. ಗುತ್ತಿಗೆದಾರರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ಈಗ ಪಟ್ಟಣ ಪಂಚಾಯಿತಿಯ ಮುಖಾಂತರವೇ ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಶೌಚಾಲಯ ದುರಸ್ತಿ, ಕೈ ತೊಳೆಯುವ ನಲ್ಲಿಗಳ ಅಳವಡಿಕೆ, ವಿದ್ಯುತ್ ಸಂಪರ್ಕ ಹಾಗೂ ಭದ್ರತೆಗಾಗಿ ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ತುರ್ತಾಗಿ ಸಿದ್ಧಪಡಿಸಿ ಕ್ಯಾಂಟೀನ್ ಅನ್ನು ಪುನಃ ಆರಂಭಿಸಲಾಗಿದೆ.
ಹೊಸ ಮೆನು ಹಾಗೂ ಸೌಲಭ್ಯಗಳು: ಸರ್ಕಾರ ಒದಗಿಸಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಉಪಕರಣಗಳನ್ನು ಈಗ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲಾಗುವುದು. ಜನರ ಬಹುದಿನದ ಬೇಡಿಕೆಯಂತೆ, ಇನ್ಮುಂದೆ ಪ್ರತಿದಿನ ಬೆಳಿಗ್ಗೆ ಬಿಸಿಯಾದ ಇಡ್ಲಿ ಹಾಗೂ ಮಧ್ಯಾಹ್ನ ಪೌಷ್ಟಿಕವಾದ ಮುದ್ದೆ ಊಟವನ್ನು ಸರ್ಕಾರದ ನಿಗದಿತ ಮೆನು ಪ್ರಕಾರ ನಿತ್ಯವೂ ಸಾರ್ವಜನಿಕರಿಗೆ ಪೂರೈಸಲಾಗುವುದು ಎಂದು ಮುಖ್ಯ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಮಾಧ್ಯಮದ ವರದಿ ಮತ್ತು ಅಧಿಕಾರಿಗಳ ಸಕರಾತ್ಮಕ ಸ್ಪಂದನೆಯಿAದಾಗಿ ಪಾಳುಬಿದ್ದಿದ್ದ ಇಂದಿರಾ ಕ್ಯಾಂಟೀನ್ ಈಗ ಮತ್ತೆ ಚೇತರಿಸಿಕೊಂಡಿದ್ದು, ಬಡವರು, ರೋಗಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಸಿವು ನೀಗಿಸಲು ಸಜ್ಜಾಗಿದೆ.
(Visited 1 times, 1 visits today)



