ಹುಳಿಯಾರು: ಇಂದಿನ ದಿನಗಳಲ್ಲಿ ಹಳ್ಳಿಯ ಸಣ್ಣಪುಟ್ಟ ಟಿ ಸ್ಟಾಲ್‌ಗಳು ಕೂಡ ಸಿಗರೇಟ್ ಜೋನ್‌ಗಳಾಗಿ (ಸ್ಮೋಕಿಂಗ್ ಜೋನ್) ಪರಿವರ್ತನೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಧೂಮಪಾನ ಹಾಗೂ ಮದ್ಯಪಾನದ ಜೊತೆಗೆ ಯುವಜನತೆ ಮತ್ತು ವಿದ್ಯಾರ್ಥಿಗಳು ‘ಡ್ರಗ್ಸ್’ ನಂತಹ ಮಾರಕ ಪಿಡುಗಿಗೆ ಅಡಿಯಾಗುತ್ತಿರುವುದು ಕಳವಳ ತಂದಿದೆ. ಈ ವ್ಯಸನಗಳಿಂದ ಯುವಪೀಳಿಗೆಯನ್ನು ಪಾರು ಮಾಡಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹುಳಿಯಾರಿನಲ್ಲಿ ಆಯೋಜಿಸಲಾಗಿದ್ದ ’ಗಾಂಧೀ ಸ್ಮöÈತಿ ಹಾಗೂ ಜೀವನೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದÀರು.
ಇಂದಿನ ಮಕ್ಕಳು ಮತ್ತು ವಿದ್ಯಾರ್ಥಿಗಳು ಮೊಬೈಲ್‌ಗೆ ತೀವ್ರವಾಗಿ ಅಡಿಕ್ಟ್ ಆಗುತ್ತಿದ್ದಾರೆ. ಶಾಲೆಯಿಂದ ಅಸೈನ್‌ಮೆಂಟ್ಸ್ ಹಾಗೂ ನೋಟ್ಸ್ ಕೊಡುತ್ತಿರುವುದರಿಂದ ಪೋಷಕರು ಮೊಬೈಲ್ ನೀಡುತ್ತಿದ್ದು, ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದ್ದು, ಮೊಬೈಲ್ ಬಳಕೆಯನ್ನು ಆದಷ್ಟು ದೂರವಿಡುವ ಪ್ರಯತ್ನ ಮಾಡಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.
೨೦೦೭ ರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಡಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮವು ೨೫ ವರ್ಷಗಳ ಸವಿ ನೆನಪಿಗಾಗಿ ಪ್ರಾರಂಭವಾಯಿತು. ನಮ್ಮ ತುಮಕೂರು ಜಿಲ್ಲೆಯಲ್ಲಿ (ಚಿಕ್ಕನಾಯಕನಹಳ್ಳಿ, ಶಿರಾ, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಸೇರಿದಂತೆ ೫ ತಾಲೂಕುಗಳಲ್ಲಿ) ಕಳೆದ ೨೦ ವರ್ಷಗಳಲ್ಲಿ ರೂ. ೨.೫ ಕೋಟಿಯಷ್ಟು ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇನ್ನು ರಾಜ್ಯಾದ್ಯಂತ ಒಟ್ಟು ರೂ. ೧೪೬ ಕೋಟಿ ಮೊತ್ತದ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಬೃಹತ್ ಸತ್ಕಾರ್ಯವನ್ನು ಪೂಜ್ಯ ಹೆಗ್ಗಡೆಯವರು ಮಾಡಿದ್ದಾರೆ ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಸ್ಥಳದ ಹಣದಿಂದ ಸಾಲ ನೀಡುವುದಿಲ್ಲ ಅಥವಾ ಬಡ್ಡಿ ವಸೂಲಿ ಮಾಡುವುದಿಲ್ಲ. ಬದಲಾಗಿ, ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಒಟ್ಟು ೬ ಪ್ರಮುಖ ರಾಷ್ಟಿçÃಕೃತ ಬ್ಯಾಂಕ್‌ಗಳೊAದಿಗೆ ಒಡಂಬಡಿಕೆ ಮಾಡಿಕೊಂಡು ಬ್ಯಾಂಕಿAಗ್ ಕರೆಸ್ಪಾಂಡೆAಟ್ (ಬಿಸಿ) ಆಗಿ ಕಾರ್ಯನಿರ್ವಹಿಸುತ್ತಿದೆ. ಪೂಜ್ಯ ಹೆಗ್ಗಡೆಯವರು ಸ್ವತಃ ಸಾಲಕ್ಕೆ ಜಾಮೀನುದಾರರಾಗಿ ನಿಂತು ಬಡವರಿಗೆ ಬ್ಯಾಂಕ್ ಮೂಲಕ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ತಹಸೀಲ್ದಾರ್ ಎಂ.ಮಮತಾ, ಪಿಎಸ್‌ಐ ರೇಣುಕಾಯಾದವ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರುಗಳಾದ ಆರ್.ಚನ್ನಬಸವಯ್ಯ, ಎಂ.ಮಲ್ಲೇಶಯ್ಯ, ಜಿ.ದಾಸಪ್ಪ, ಡಿ.ಪಿ.ಲಕ್ಷಿö್ಮÃಕಾಂತ್, ಟಿ.ಎಚ್.ಉಮೇಶ್, ಯೋಜನಾಧಿಕಾರಿಗಳಾದ ರಾಮಚಂದ್ರ, ಶಾಲಿನಿ ಅನೇಕÀರಿದ್ದರು.
(Visited 1 times, 1 visits today)



