BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ
  • ಕನ್ನಡ ನಾಡಿನ ಗತವೈಭವ ದರ್ಶನ
  • ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ
  • ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ
  • ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ
  • ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ
  • ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?
  • ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನ್ನಡ ನಾಡಿನ ಗತವೈಭವ ದರ್ಶನ
news

ಕನ್ನಡ ನಾಡಿನ ಗತವೈಭವ ದರ್ಶನ

By News Desk BenkiyabaleUpdated:October 22, 2026 5:21 pm

ತುಮಕೂರು: ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ ಕರುನಾಡಿನ ವೈಭವ ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ, ಇತಿಹಾಸದ ಗತವೈಭವವನ್ನು ಪರಿಚಯಿಸಿತು.
ಮನಸೂರೆಗೊಂಡ ನೃತ್ಯರೂಪಕ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ೧೦ನೇ ದಿನವಾದ ಮಂಗಳವಾರ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನವಾದ ಈ ನೃತ್ಯರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು.
ನೃತ್ಯರೂಪಕದಲ್ಲಿ ಹೊಯ್ಸಳರ ಶೌರ್ಯ, ದಕ್ಷಿಣಾಪತೇಶ್ವರ ಶ್ರೀ ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಕೀರ್ತಿ, ಪ್ರಪಂಚದಲ್ಲಿಯೇ ಅತೀ ಎತ್ತರದ ಏಕಶಿಲಾ ಮೂರ್ತಿ ಶ್ರವಣ ಬೆಳಗೊಳದ ಬಾಹುಬಲಿ ಕೆತ್ತನೆ, ಬೆಂದಕಾಳೂರಿನಿAದ ರಾಜಧಾನಿ ಬೆಂಗಳೂರಾದ ಇತಿಹಾಸ, ಕನ್ನಡಿಗರ ಸತ್ಯ ಹಾಗೂ ನಿಷ್ಠೆಯನ್ನು ಸಾರುವ ಪುಣ್ಯಕೋಟಿ ಕತೆ, ತುಮಕೂರಿನ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷಿö್ಮÃನರಸಿಂಹಸ್ವಾಮಿಯ ಪುರಾಣ, ನಾಮದ ಚಿಲುಮೆ, ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ: ಶ್ರೀಶ್ರೀಶ್ರೀ ಶಿವಕುಮಾರಸ್ವಾಮೀಜಿ ಹಾಗೂ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಅವರ ಸ್ಮರಣೆ ಸೇರಿದಂತೆ ಕರುನಾಡಿನ ಇತಿಹಾಸ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಯಿತು.
ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಮೈತುಂಬಾ ಕಣ್ಣುಗಳಿರಬೇಕು: ಅಮೆರಿಕಾ-ಅಮೆರಿಕಾ ಚಲನಚಿತ್ರದ ನೂರು ಜನ್ಮಕೂ ನೂರಾರು ಜನ್ಮಕೂ ಗೀತೆಯೊಂದಿಗೆ ವೇದಿಕೆಗೆ ಆಗಮಿಸಿದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ತುಮಕೂರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಮೈತುಂಬಾ ಕಣ್ಣುಗಳಿರಬೇಕೆಂದು ಅಭಿಪ್ರಾಯಪಟ್ಟರು.
ದಸರಾ ಉತ್ಸವದ ಸಾಂಸ್ಕೃತಿಕ ವೇದಿಕಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು, ಮೊಬೈಲ್ ಯುಗದಲ್ಲಿಯೂ ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ತುಮಕೂರಿನ ಜನತೆಯ ಉತ್ಸಾಹ ನೋಡುತ್ತಿದ್ದರೆ ಹಳೆಯ ಮೈಸೂರು ದಸರಾ ಎಷ್ಟೊಂದು ಸುಂದರ ಹಾಡಿನಂತೆ ತುಮಕೂರು ದಸರಾ ಎಷ್ಟೊಂದು ಸುಂದರ ಎಂದು ಹೊಸ ಹಾಡು ಬರೆಯುವಂತೆ ಭಾಸವಾಗುತ್ತದೆ ಎಂದರು.
ದಸರಾ ಉತ್ಸವದ ಅಂಗವಾಗಿ ಇಲ್ಲಿ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ, ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ, ಹೆಲಿಕಾಪ್ಟರ್ ಪ್ರದರ್ಶನ, ಫ್ಲೋಟಿಂಗ್ ರೆಸ್ಟೋರೆಂಟ್, ಮತ್ತಿತರ ವಿನೂತನ ಕಾರ್ಯಕ್ರಮಗಳು ಜನಾಕರ್ಷಕವಾಗಿವೆ ಎಂದರು.
ಸಣ್ಣ-ಪುಟ್ಟ ತಪ್ಪು ಮಾಡಿದರೂ ಕ್ಷಮಿಸಿ ನಮ್ಮ ಆಸೆ-ಗುರಿಯನ್ನು ಈಡೇರಿಸಿಕೊಳ್ಳಲು ಅನುಗ್ರಹಿಸುವ ತಾಯಿ ಚಾಮುಂಡೇಶ್ವರಿ ದೇವಿಯು ಕಲ್ಪತರು ನಾಡಿದ ಎಲ್ಲರ ಕನಸನ್ನು ನನಸಾಗಿಸಲಿ ಎಂದು ಶುಭ ಹಾರೈಸಿದರು.
ತಾಯಿಯ ಪೂಜೆಗಿಂತ ಮಿಗಿಲಾದ ಮತ್ತೊಂದು ಪೂಜೆಯಿಲ್ಲ. ಮಹಿಳೆಯರಿಗೆ ಸ್ಥಾನಮಾನ, ಸುರಕ್ಷತೆ, ಪ್ರೋತ್ಸಾಹ ನೀಡುವುದು ದೇವಿಯನ್ನು ಪೂಜೆ ಮಾಡಿದಷ್ಟೇ ಪುಣ್ಯ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇದಕ್ಕೂ ಮುನ್ನ ರ‍್ಯಾಂಪ್ ವಾಕ್ ಮೂಲಕ ಅಭಿಮಾನಿಗಳ ಬಳಿ ಸಾಗಿ ಹಸ್ತಲಾಘವ ಮಾಡಿದರಲ್ಲದೆ, ದಸರಾ ಉತ್ಸವದ ಶುಭಾಶಯಗಳನ್ನು ಕೋರಿದರು.
ಬಹುಮುಖ ಪ್ರತಿಭೆ ರಮೇಶ್ ಅರವಿಂದ್: ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಮಾತನಾಡಿ, ಚಿತ್ರರಂಗದಲ್ಲಿ ಮಾನವೀಯತೆ ಮೌಲ್ಯವುಳ್ಳ ಕಲಾಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಕನ್ನಡದ ಏಕೈಕ ಬಹುಮುಖ ಪ್ರತಿಭೆ ರಮೇಶ್ ಅರವಿಂದ್ ಅವರು ಎಂದರೆ ತಪ್ಪಾಗಲಾರದು. ಇವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಖ್ಯಾತಿ ಗಳಿಸಲು ದೇವಿಯು ಆಶೀರ್ವದಿಸಲಿ ಎಂದು ಶುಭ ಹಾರೈಸಿದರು.
ನಂತರ ಸಂಜಿತ್ ಹೆಗ್ಡೆ ಮತ್ತು ತಂಡದಿAದ ಏರ್ಪಡಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.
ಉಪಮುಖ್ಯಮಂತ್ರಿಗಳಿAದ ಗೌರವ: ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ದಸರಾ ಮಹೋತ್ಸವ ಯಶಸ್ಸಿಗೆ ಕಾರಣರಾದ ಅಧಿಕಾರಿಗಳು, ಅಧಿಕಾರೇತರರು, ಪಾಲಿಕೆಯ ಎಲ್ಲಾ ಪೌರಕಾರ್ಮಿಕರು, ಪಂಜಿನ ಕವಾಯತಿನಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ತರಬೇತಿದಾರರು, ದಸರಾ ಉತ್ಸವ ಆಚರಣೆಯ ವಿವಿಧ ಸಮಿತಿಗಳ ಸದಸ್ಯರು, ಸೇರಿದಂತೆ ಮತ್ತಿತರರನ್ನು ಗೌರವಿಸಿ ಸನ್ಮಾನಿಸಿದರು.
ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಉಪಮುಖ್ಯಮಂತ್ರಿಗಳ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)
dcm dr.g.parameshwar kannada news karnataka local news tumakur tumkur TUMKUR DASARA tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ
Next Article ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ
News Desk Benkiyabale

Related Posts

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm news

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm news

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm news
ತಾಜಾ ಸುದ್ಧಿಗಳು
news

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm
news

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm
news

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm
news

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm
news

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

October 22, 2026 5:16 pm
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm
Our Youtube Channel
Our Picks

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

October 22, 2026 5:16 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

By News Desk BenkiyabaleOctober 22, 2026 5:22 pm

ಹುಳಿಯಾರು: ಹುಳಿಯಾರು ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ರಾಷ್ಟಿçÃಯ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಬವಿಸುವಂತಾಗಿದೆ.…

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.