BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ
  • ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು
  • ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು
  • ಜನಿವಾರ, ಶಿವದಾರ ಧರಿಸಬಹುದು: ಕೆ.ವಿ.ಅಶೋಕ್
  • ಪದೋನ್ನತಿಗೆ ಜಿಲ್ಲಾಡಳಿತ ಮೀನಾಮೇಷ
  • ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ
  • ಗ್ರಾ.ಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ: ಅಧಿಸೂಚನೆ
  • ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪ್ರತಿ ಕುಟುಂಬಕ್ಕೆ ಒಂದು ಹಸು:ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ
Trending

ಪ್ರತಿ ಕುಟುಂಬಕ್ಕೆ ಒಂದು ಹಸು:ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ

By News Desk BenkiyabaleUpdated:January 29, 2019 5:26 pm

 ತುಮಕೂರು:

      ಸತತ ಬರದಿಂದ ಬೆಸತ್ತಿರುವ ಜಿಲ್ಲೆಯ ಜನರಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಒಂದು ಹಸು ನೀಡುವ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

      ತಾಲೂಕಿನ ಬೆಳ್ಳಾವಿ ಹೋಬಳಿ ನಾಗಾರ್ಜುನಹಳ್ಳಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ನಿರಂತರ ಬರದಿಂದ ಬದುಕು ಕಷ್ಟವಾಗಿದೆ. ಬೇರೆ ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ರೂಗಳನ್ನು ಸರಕಾರ ಖರ್ಚು ಮಾಡುತ್ತಿದೆ. ಈ ಹಣದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ವಿತರಿಸುವ ಮೂಲಕ ಅವರು ಸಹ ಬರವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡಲಿ ಎಂಬ ಉದ್ದೇಶದಿಂದ ಬಜೆಟ್ ಮಂಡನೆಗು ಮುನ್ನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

      ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಸರಕಾರ ಹಲವು ಯೋಜನೆಗಳ ಸೇರಿಸುವ ಮೂಲಕ ರೈತರ ನೆರವಿಗೆ ಸರಕಾರದ ಧಾವಿಸುತ್ತಿದೆ.ಇದರಲ್ಲಿ ಕಾಲುಬಾಯಿ ಜ್ವರದ ವಿರುದ್ದ ಲಸಿಕೆಯೂ ಒಂದು.ಜನರಿಗೆ ಖಾಯಿಲೆಯಾದರೆ ಹೇಳಿಕೊಳ್ಳಲು ಬಾಯಿ ಇದೆ.ಆದರೆ ಮೂಕ ಪ್ರಾಣಿಗಳಿಗೆ ಹೇಳಿಕೊಳ್ಳಲಾಗದು.ಆದ್ದರಿಂದ ಕಾಲ ಕಾಲಕ್ಕೆ ನಾವುಗಳೇ ಅಗತ್ಯವಿರುವ ಲಸಿಕೆ ಕೊಡುವ ಮೂಲಕ ಅವುಗಳ ಆರೋಗ್ಯ ಕಾಪಾಡಬೇಕಿದೆ.ಜನರು ಹಾಲು ಕಡಿಮೆಯಾಗುತ್ತದೆ ಎಂದು ಹಸುಗಳಿಗೆ ಲಸಿಕೆ ಹಾಕಿಸುವುದನ್ನು ಬಿಡಬಾರದು. ಒಂದೆರಡು ದಿನ ಕಡಿಮೆಯಾದರೂ ನಂತರ ಸರಿಯಾಗುತ್ತದೆ. ಒಂದು ವೇಳೆ ಕಾಯಿಲೆಯಿಂದ ಸತ್ತರ ಹತ್ತಾರು ಸಾವಿರ ನಷ್ಟ.ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಹಾಗೆಯೇ ಅಧಿಕಾರಿಗಳು ಸಹ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಶಾಸಕ ಡಿ.ಸಿ.ಗೌರಿಶಂಕರ್ ಸಲಹೆ ನೀಡಿದರು.

      ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅಗತ್ಯವಿದ್ದಾಗ ರೈತರ ಹೊಲ, ಗದ್ದೆಗಳಿಗೆ ಹೋಗಿ ಅವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಬೆಳೆ ನಷ್ಟವಾಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ ಅವರು,ಜಾನುವಾರುಗಳಿಗೆ ತೊಂದರೆ ಉಂಟಾದ ಮಾಹಿತಿ ಬಂದರೆ, ಹಗಲು ರಾತ್ರಿ ಎನ್ನದೆ ವೈದ್ಯರು ರೈತರಿಗೆ ಸಹಕಾರ ನೀಡುವಂತೆ ಡಿ.ಸಿ.ಗೌರಿಶಂಕರ್ ಸೂಚಿಸಿದರು.

      ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜೀವರಾಯ, ಜಿಲ್ಲೆಯಲ್ಲಿ ಒಟಟು 69491 ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಬೇಕಾಗಿದೆ.ಇವುಗಳಲ್ಲಿ 57363 ದನ, 11824 ಎಮ್ಮೆ, 304 ಹಂದಿಗಳಿದ್ದು, ಇವುಗಳಿಗೆ ಲಸಿಕೆ ಹಾಕಲು,ತುಮಕೂರು ಹಾಲು ಒಕ್ಕೂಟದ ಸಹಕಾರದೊಂದಿಗೆ 3 ತಂಡಗಳನ್ನು ರಚಿಸಿ, 21 ಪಶು ವೈದ್ಯರನ್ನು ಮೇಲ್ವಿಚಾರಕರಾಗಿ,43 ಜನ ಲಸಿಕೆದಾರರನ್ನು ನೇಮಕ ಮಾಡಿ ಮುಂದಿನ ಫೆಬ್ರವರಿ 16ರ ವರೆಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾಲು ಬಾಯಿ ಜ್ವರದ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಪ್ರತಿನಿತ್ಯ 4-5 ಹಳ್ಳಿಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ವಿರುತ್ತದೆ.ರೈತರು, ಹಸುಗಳ ಮಾಲೀಕರ ಗಾಳಿ ಸುದ್ದಿಗೆ ಕಿವಿಗೊಡದೆ ಹಾಲು ಕರೆಯುತ್ತಿರುವ ಹಸುಗಳು ಸೇರಿದಂತೆ ಎಲ್ಲಾ ಹಸುಗಳಿಗೂ ಲಸಿಕೆ ಹಾಕಿಸುವ ಮೂಲಕ ಈ ರೋಗದ ಹತೋಟಿಗೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

 

(Visited 15 times, 1 visits today)
Previous Articleಫೆ.1 ರಿಂದ ಹಾಲು ಉತ್ಪಾದಕರಿಗೆ ನೀಡುವ ದರ ಹೆಚ್ಚಳ
Next Article ಪುಣ್ಯ ಸ್ಮರಣಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣಾ ವ್ಯವಸ್ಥೆ
News Desk Benkiyabale

Related Posts

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm news

ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು

August 01, 2026 2:39 pm news

ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು

August 01, 2026 2:37 pm news
ತಾಜಾ ಸುದ್ಧಿಗಳು
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm
news

ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು

August 01, 2026 2:39 pm
news

ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು

August 01, 2026 2:37 pm
news

ಜನಿವಾರ, ಶಿವದಾರ ಧರಿಸಬಹುದು: ಕೆ.ವಿ.ಅಶೋಕ್

August 01, 2026 2:36 pm
news

ಪದೋನ್ನತಿಗೆ ಜಿಲ್ಲಾಡಳಿತ ಮೀನಾಮೇಷ

August 01, 2026 2:34 pm
news

ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ

August 01, 2026 2:32 pm
Our Youtube Channel
Our Picks

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm

ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು

August 01, 2026 2:39 pm

ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು

August 01, 2026 2:37 pm

ಜನಿವಾರ, ಶಿವದಾರ ಧರಿಸಬಹುದು: ಕೆ.ವಿ.ಅಶೋಕ್

August 01, 2026 2:36 pm

ಪದೋನ್ನತಿಗೆ ಜಿಲ್ಲಾಡಳಿತ ಮೀನಾಮೇಷ

August 01, 2026 2:34 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

By News Desk BenkiyabaleAugust 01, 2026 2:41 pm

ತುಮಕೂರು: ತಮಿಳುನಾಡಿಗೆ ಪ್ರತಿದಿನ ೩,೫೦೦ ಕ್ಯೂಸೆಕ್ಸ್ ನೀರು ಬಿಡಬೇಕೆಂದುಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸ್ಸಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ…

ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು

August 01, 2026 2:39 pm

ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು

August 01, 2026 2:37 pm

ಜನಿವಾರ, ಶಿವದಾರ ಧರಿಸಬಹುದು: ಕೆ.ವಿ.ಅಶೋಕ್

August 01, 2026 2:36 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.