BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ
  • ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಫೆ.1 ರಿಂದ ಹಾಲು ಉತ್ಪಾದಕರಿಗೆ ನೀಡುವ ದರ ಹೆಚ್ಚಳ
Trending

ಫೆ.1 ರಿಂದ ಹಾಲು ಉತ್ಪಾದಕರಿಗೆ ನೀಡುವ ದರ ಹೆಚ್ಚಳ

By News Desk BenkiyabaleUpdated:January 29, 2019 5:17 pm

 ತುಮಕೂರು :

      ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಫೆಬ್ರುವರಿ 1 ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1.50ರೂ.ಗಳಷ್ಟು ಹೆಚ್ಚಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದರು.

      ಸರ್ಕಾರಿ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 22 ರೂ.ಗಳನ್ನು ನೀಡುತ್ತಿದ್ದು, ಫೆಬ್ರುವರಿ 1ರಿಂದ 23.50 ರೂ.ಗಳಿಗೆ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ದಿನವೊಂದಕ್ಕೆ 10.30ಲಕ್ಷ ರೂ.ಗಳಷ್ಟು ಹೆಚ್ಚುವರಿ ಖರ್ಚು ಬರಲಿದೆ. ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮಾತ್ರ ಈ ದರವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

       ಇದಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕ ಸದಸ್ಯರುಗಳ 70ಸಾವಿರ ರಾಸುಗಳಿಗೆ 5ಕೋಟಿ ರೂ. ವೆಚ್ಚದಲ್ಲಿ ವಿಮಾ ಸೌಲಭ್ಯ ಒದಗಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 59 ವರ್ಷ ಮೀರದ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಒಕ್ಕೂಟ, ರೈತ ಕಲ್ಯಾಣ ಟ್ರಸ್ಟ್ ಹಾಗೂ ಫಲಾನುಭವಿಗಳ ವಂತಿಕೆಯ 50:20:30 ಅನುಪಾತದಲ್ಲಿ 456 ರೂ. ಪ್ರೀಮಿಯಂನಂತೆ ಒಟ್ಟು 70ಸಾವಿರ ಸದಸ್ಯರಿಗೆ ಗುಂಪು ವಿಮಾ ಯೋಜನೆಯಡಿ ಒಕ್ಕೂಟದಿಂದ 3 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಲಾಗಿದೆ ಹಾಗೂ 59 ವರ್ಷದೊಳಗಿನ ಸದಸ್ಯರು ಮತ್ತು ಸಂಘಗಳ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸಲಾಗುವುದು. ಅಲ್ಲದೆ 60 ವರ್ಷ ಮೀರಿದ ಸದಸ್ಯರಗಳು ಮರಣ ಹೊಂದಿದಲ್ಲಿ ಅವರಿಗೆ ವಿಮಾ ಪರಿಹಾರ ಮೊತ್ತ ದೊರೆಯದ ಕಾರಣ ಕಲ್ಯಾಣ ಟ್ರಸ್ಟ್ ಹಾಗೂ ಒಕ್ಕೂಟದ ವತಿಯಿಂದ 25ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

      ಒಕ್ಕೂಟವು ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಗರದಲ್ಲಿ ಉಚಿತ ವಸತಿ ನಿಲಯವನ್ನು ಪ್ರಾರಂಭಿಸಿದ್ದು, ಜಿಲ್ಲೆಯ 200 ವಿದ್ಯಾರ್ಥಿನಿಯರು ಈ ವಸತಿ ನಿಲಯದ ಪ್ರಯೋಜನ ಪಡೆಯುತ್ತಿದ್ದಾರೆ. ಒಕ್ಕೂಟದ ಮಾರಾಟ ಜಾಲವನ್ನು ವಿಸ್ತರಿಸುವ ಹಿನ್ನಲೆಯಲ್ಲಿ ಮುಂಬೈ ಮಹಾನಗರದಲ್ಲಿ ದಿನವಹಿ 85ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದಿನವಹಿ 1.50ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಒಕ್ಕೂಟದ ಡೈರಿ ಆವರಣದಲ್ಲಿ 25ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿರುವ ತೃಪ್ತಿ ಬ್ರಾಂಡ್ ಹೆಸರಿನಲ್ಲಿ 80ಸಾವಿರ ಲೀಟರ್ ಹಾಲನ್ನು ಪ್ಯಾಕ್ ಮಾಡುವ ಹಾಗೂ 90 ದಿನಗಳ ಜೀವಿತಾವಧಿಯುಳ್ಳ ಹಾಲನ್ನು ತಯಾರಿಸುವ ಯುಹೆಚ್‍ಟಿ ಫ್ಲೆಕ್ಸಿ ಪ್ಯಾಕ್ ಘಟಕದಲ್ಲಿ ಸ್ಥಳೀಯವಾಗಿ ಹಾಗೂ ಜಮ್ಮು-ಕಾಶ್ಮೀರ, ಮುಂಬೈ, ಆಂಧ್ರಪ್ರದೇಶ, ದೆಹಲಿ, ಮತ್ತಿತರ ರಾಜ್ಯಗಳಿಗೆ ದಿನವಹಿ 50ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ ಎಂದರಲ್ಲದೆ, ಒಕ್ಕೂಟದ ಮೊಸರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ದಿನವಹಿ ಇರುವ 40ಸಾವಿರ ಕೆ.ಜಿ. ಮೊಸರು ಉತ್ಪಾದನೆಯನ್ನು ಒಂದು ಲಕ್ಷ ಕೆ.ಜಿ.ಗೆ ವಿಸ್ತರಿಸುವ ಪ್ರತ್ಯೇಕ ಘಟಕವನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದರು.

      ಡೈರಿ ಆವರಣದಲ್ಲಿ 6ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಟರ್ ಡೀ-ಫ್ರೀಜರ್ ಮತ್ತು ಡ್ರೈ ಪ್ರಾಡಕ್ಟ್ಸ್ ಗೋದಾಮು ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಹಾಲು ಶೇಖರಣೆಗೆ ತಕ್ಕಂತೆ ಮಾರಾಟವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಅನುದಾನ ಪಡೆದು 150ಕೋಟಿ ರೂ. ಅಂದಾಜು ವೆಚ್ಚದಲ್ಲಿ ದಿನವಹಿ 8ಲಕ್ಷ ಲೀಟರ್‍ಗಳಿಂದ 10ಲಕ್ಷ ಲೀಟರ್ ಸಾಮಥ್ರ್ಯಕ್ಕೆ ವಿಸ್ತರಿಸಬಹುದಾದ ಸ್ವಯಂ ಚಾಲಿತ ಮೆಗಾ ಡೈರಿಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

      ಸರ್ಕಾರದಿಂದ ಜಾರಿಯಾಗಿರುವ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು 1190 ಮೆ.ಟನ್ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗಿದೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡಲು ಒಕ್ಕೂಟದಲ್ಲಿ 736 ಮೆ.ಟನ್ ಬೆಣ್ಣೆಯನ್ನು ದಾಸ್ತಾನು ಇಡಲಾಗಿದೆ ಎಂದು ತಿಳಿಸಿದರು.

ಲಿಂ.ಶ್ರೀಗಳ ಪುಣ್ಯಸ್ಮರಣೆಗೆ ಉಚಿತ ತುಪ್ಪ:-

      ಕರ್ನಾಟಕ ಹಾಲು ಮಹಾಮಂಡಳಿಯು ಜನವರಿ 31ರಂದು ನಡೆಯಲಿರುವ ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ನಿಮಿತ್ತ 2ಲಕ್ಷ ರೂ. ಮೌಲ್ಯದ 500 ಲೀಟರ್ ತುಪ್ಪವನ್ನು ಉಚಿತವಾಗಿ ಇಂದು ಮಠಕ್ಕೆ ನೀಡಲಾಗುತ್ತಿದೆ. ತುಮಕೂರು ಹಾಲು ಒಕ್ಕೂಟದ ವತಿಯಿಂದ ಅತಿ ಕಡಿಮೆ ದರದಲ್ಲಿ 100 ಟನ್ ತುಪ್ಪ ಹಾಗೂ ಉಚಿತವಾಗಿ 7ಸಾವಿರ ಲೀಟರ್ ಹಾಲನ್ನು ಮಠಕ್ಕೆ ನೀಡಲಾಗುವುದು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಕೊಂಡವಾಡಿ ಚಂದ್ರಶೇಖರ್, ನಿರ್ದೇಶಕರಾದ ಈಶ್ವರಯ್ಯ ಹಾಗೂ ಚನ್ನಮಲ್ಲಯ್ಯ, ವ್ಯವಸ್ಥಾಪಕ ನಿರ್ದೇಶಕ ಮುನೇಗೌಡರು, ವ್ಯವಸ್ಥಾಪಕರಾದ ನಾಗರಾಜ ಹಾಗೂ ವಿಶ್ವನಾಥ್ ನಾಡಿಗ್, ಉಪ ವ್ಯವಸ್ಥಾಪಕ ಕೃಷ್ಣ ನಾಯಕ್ ಉಪಸ್ಥಿತರಿದ್ದರು.

(Visited 36 times, 1 visits today)
Previous Articleಇಂದಿನಿಂದ ಫೆ.13ರವರೆಗೆ ಕುಷ್ಠರೋಗ ಅರಿವು ಆಂದೋಲನ
Next Article ಪ್ರತಿ ಕುಟುಂಬಕ್ಕೆ ಒಂದು ಹಸು:ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ
News Desk Benkiyabale

Related Posts

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm ಕರ್ನಾಟಕ ಸುದ್ಧಿಗಳು

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm ತುಮಕೂರು

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news
ತಾಜಾ ಸುದ್ಧಿಗಳು
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm
ತುಮಕೂರು

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

By News Desk BenkiyabaleSeptember 11, 2026 4:32 pm

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನದಡಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳ ವಿಲೇವಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು…

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.