ನವದೆಹಲಿ:  

      ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರ ಸ್ಮರಣೆಗಾಗಿ ನಿರ್ಮಿಸಲಾಗಿರುವ ‘ಏಕತಾ ಪ್ರತಿಮೆ’ ಇಂದು ಲೋಕರ್ಪಣೆಗೊಂಡಿದೆ.

      ಸರ್ದಾರ್​ ಜೀ ಅವರ 143ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬುಧವಾರ ಕೆವಾಡಿಯಾ ಪಟ್ಟಣಕ್ಕೆ ಆಗಮಿಸಿದ ಪ್ರಧಾನಿ ಅವರು ವೇದಿಕೆ ಹಿಂಭಾಗದಲ್ಲಿನ ಎಲ್​ಇಡಿ ಪರದೆಯ ಮೇಲೆ ಸರ್ದಾರ್​ ಜೀ ಅವರ ಏಕತಾ ಪ್ರತಿಮೆಯ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದರು.

      ಗುಜರಾತಿನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ಎದ್ದು ನಿಂತಿರುವ ಈ ಭವ್ಯ ಮೂರ್ತಿ ಭಾರತದ ಏಕತೆಯ ಪ್ರತೀಕವಾಗಿದೆ.

      ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ ‘ಏಕತೆಗೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು.
sardar vallabhai patel statue by modi ಗೆ ಚಿತ್ರದ ಫಲಿತಾಂಶ
      ದೇಶದ ಮೊದಲ ಉಪ ಪ್ರಧಾನಿ ಪಟೇಲ್‌ ಅವರು ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಹೀಗಾಗಿ ಪ್ರತಿಮೆಗೆ ‘ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಸರ್ದಾರ್‌ ಪಟೇಲ್‌ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ‘ಏಕೀಕರಣ’ದ ಸಂದೇಶ ಸಾರಿದ್ದಾರೆ.
      ಹರಿದುಹಂಚಿ ಹೋಗಿದ್ದ ಭಾರತದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಏಕತೆಯ ಪರಿಕಲ್ಪನೆ ನೀಡಿದ ಪಟೇಲ್ ಅವರ ಅನನ್ಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತಿದೆ. 

      ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​, ಮಧ್ಯ ಪ್ರದೇಶ ರಾಜ್ಯಪಾಲ ಆನಂದಿಬೆನ್​ ಪಟೇಲ್​ ಸೇರಿದಂತೆ ಅನೇಕ ಗಣ್ಯರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

 

 

(Visited 19 times, 1 visits today)
FacebookTwitterInstagramFacebook MessengerEmailSMSTelegramWhatsapp