BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗುರಿ, ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ
  • ಕೊರಟಗೆರೆ ಕ್ಷೇತ್ರದಿಂದ ೨೦೨೮ಕ್ಕೆ ಸ್ಪರ್ಧಿಸುತ್ತೇನೆ: ಪಿ.ಎನ್.ಕೃಷ್ಣಮೂರ್ತಿ
  • ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ
  • ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ
  • ಕೊಲೆ ಆರೋಪಿಗಳು ಕೇರಳದಲ್ಲಿ ಅರೆಸ್ಟ್
  • ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ
  • ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ
  • ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅ.14 ರಿಂದ ಝೆನ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವ!
Trending

ಅ.14 ರಿಂದ ಝೆನ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವ!

By News Desk BenkiyabaleUpdated:October 12, 2019 6:51 pm

ತುಮಕುರು:

      ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 14 ಮತ್ತು 15 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ 6.30 ಕ್ಕೆ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.

      14 ರ ಸೋಮವಾರ ಸಂಜೆ 6.30 ಕ್ಕೆ ಗಿರೀಶ್ ಕಾರ್ನಾಡ್ ರಚಿಸಿರುವ ರಾಕ್ಷಸ- ತಂಗಡಿ ನಾಟಕ ಪ್ರದರ್ಶನವಿದೆ.
ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ. 15 ರ ಮಂಗಳವಾರ ಸಂಜೆ ಕರ್ಣ ಸಾಂಗತ್ಯ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಗಣೇಶ್ ಮಂದರ್ತಿ ನಿರ್ದೇಶಿಸುತ್ತಿದ್ದಾರೆ.

      ನಾಟಕ ಪ್ರದರ್ಶನಕ್ಕೂ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಮುಕುಂದರಾವ್ ಮತ್ತು ಗೋಮಾರದಹಳ್ಳಿ ಮಂಜುನಾಥ್ ಆಗಮಿಸಲಿದ್ದಾರೆ. 15 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಆಗಮಿಸಲಿದ್ದಾರೆ.
ಪ್ರತಿ ನಾಟಕಕ್ಕೆ 30 ರು. ಪ್ರವೇಶ ದರ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

      ರಾಕ್ಷಸ- ತಂಗಡಿ ನಾಟಕ ವಿಜಯನಗರ ಸಾಮ್ರಾಜ್ಯ ಮತ್ತು ಅದರ ಪತನವನ್ನು ರಾಷ್ಟ್ರೀಯತೆಗಳ ಸಂಘರ್ಷವಾಗಿ ಮತ್ತು ಧರ್ಮಗಳ ತಿಕ್ಕಾಟವಾಗಿ ಹಲವು ಇತಿಹಾಸಕಾರರು ಕಟ್ಟಿದ್ದರೆ, ಗಿರೀಶ ಕಾರ್ನಾಡರ ಪ್ರಸ್ತುತ ನಾಟಕವು ರಾಜಕೀಯ-ಸಾಮಾಜಿಕ ವಾಸ್ತವಗಳ ನ್ನೆಲೆಯಲ್ಲಿ ಮತ್ತು ಇದರಲ್ಲಿ ಪಾಲ್ಗೊಂಡ ವ್ಯಕ್ತಿತ್ವಗಳ ನೆಲೆಯಿಂದ ಈ ಕಥನವನ್ನು ಗ್ರಹಿಸಲು ಪ್ರಯತ್ನಿಸುತ್ತದೆ ರಾಕ್ಷಸ – ತಂಗಡಿ. ಯುದ್ಧವು ನಿರರ್ಥಕ ಮತ್ತು ಅನರ್ಥಕಾರಿಯೆಂಬುದನ್ನು ಮಹಾಭಾರತವೇ ತೋರಿಸಿದ್ದರೂ ಭಾರತದ ಇತಿಹಾಸದಲ್ಲಿ ಇಂದಿನವರೆಗೂ ನಡೆದು ಮುನ್ನಡೆಯುತ್ತಿರುವ ಯುದ್ಧೋತ್ಸಾಹ ಯುದ್ಧೋನ್ಮಾದಗಳ ಹಿನ್ನೆಲೆಯಲ್ಲಿ ಈ ನಾಟಕವನ್ನು ರಂಗಕ್ಕೆ ತರಬೇಕೆಂಬುದು ಪ್ರಸ್ತುತ ಪ್ರಯೋಗದ ಪ್ರೇರಣೆ.

      ಇನ್ನು ಗಣೇಶ್ ಮಂದರ್ತಿ ಅವರು ನಿರ್ದೇಶಿಸಿರುವ ಕರ್ಣ ಸಾಂಗತ್ಯ ನಾಟಕವು ಜನಪದ ಮಹಾಭಾರತ, ಕುಮಾರವ್ಯಾಸಭಾರತ, ಪಂಪಭಾರತ ಮತ್ತು ಅಮೃತ ಸೋಮೇಶ್ವರರ ಒಂದು ಯಕ್ಷಗಾನ ಪ್ರಸಂಗ – ಇವುಗಳನ್ನು ಸಹಯೋಗ ಗೊಳಿಸಿ ಕಟ್ಟಿರುವ ಈ ರಂಗಪಠ್ಯವು ಮಹಾಭಾರತದ ಕರ್ಣಕಥನಗಳ ಒಂದು ಮರುನಿರೂಪಣೆ.

      ತಾಯಿಯಿಂದ ಮೊದಲುಗೊಂಡು ಲೋಕದ ಹಲವರು ಕೈಬಿಡುತ್ತ ಹೋದರೂ ಕವಿಗಳು ಮಾತ್ರ ಕರ್ಣನನ್ನು ಕೈಬಿಡದೆ ಉಳಿಸಿಕೊಂಡಿದ್ದರೆ – ಎಂಬ ಆಶಯದೊಂದಿಗೆ ಕರ್ಣನ ಬದುಕಿನ ಮತ್ತು ಅವನ ಕಾವ್ಯಕಥನಗಳ ಸಾಂಗತ್ಯದ ರಂಗಕೃತಿಯೊಂದನ್ನು ಕಟ್ಟುವ ಪ್ರಯೋಗವನ್ನಿಲ್ಲಿ ಮಾಡಲಾಗಿದೆ.

(Visited 32 times, 1 visits today)
Previous Articleಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು!!
Next Article ತುಮಕೂರು : ರೋಗಿಗಳ ತ್ವರಿತ ಸೇವೆಗಾಗಿ ಡಿಜಿಟಲ್ ನರ್ವ್ ಸೆಂಟರ್!!
News Desk Benkiyabale

Related Posts

ಗುರಿ, ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ

June 27, 2026 5:34 pm news

ಕೊರಟಗೆರೆ ಕ್ಷೇತ್ರದಿಂದ ೨೦೨೮ಕ್ಕೆ ಸ್ಪರ್ಧಿಸುತ್ತೇನೆ: ಪಿ.ಎನ್.ಕೃಷ್ಣಮೂರ್ತಿ

June 27, 2026 5:32 pm news

ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ

June 27, 2026 5:29 pm news
ತಾಜಾ ಸುದ್ಧಿಗಳು

ಗುರಿ, ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ

June 27, 2026 5:34 pm

ಕೊರಟಗೆರೆ ಕ್ಷೇತ್ರದಿಂದ ೨೦೨೮ಕ್ಕೆ ಸ್ಪರ್ಧಿಸುತ್ತೇನೆ: ಪಿ.ಎನ್.ಕೃಷ್ಣಮೂರ್ತಿ

June 27, 2026 5:32 pm

ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ

June 27, 2026 5:29 pm

ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ

June 27, 2026 5:27 pm

ಕೊಲೆ ಆರೋಪಿಗಳು ಕೇರಳದಲ್ಲಿ ಅರೆಸ್ಟ್

June 26, 2026 5:28 pm

ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ

June 25, 2026 5:38 pm
Our Youtube Channel
Our Picks

ಗುರಿ, ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ

June 27, 2026 5:34 pm

ಕೊರಟಗೆರೆ ಕ್ಷೇತ್ರದಿಂದ ೨೦೨೮ಕ್ಕೆ ಸ್ಪರ್ಧಿಸುತ್ತೇನೆ: ಪಿ.ಎನ್.ಕೃಷ್ಣಮೂರ್ತಿ

June 27, 2026 5:32 pm

ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ

June 27, 2026 5:29 pm

ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ

June 27, 2026 5:27 pm

ಕೊಲೆ ಆರೋಪಿಗಳು ಕೇರಳದಲ್ಲಿ ಅರೆಸ್ಟ್

June 26, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಗುರಿ, ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ

By News Desk BenkiyabaleJune 27, 2026 5:34 pm

ತುಮಕೂರು: ಮನುಷ್ಯನಿಗೆಗುರಿ ಮತ್ತು ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ ಎಂದು ಮಾಜಿ ಸಚಿವ, ಮಧುಗಿರಿ ಕ್ಷೇತ್ರದ ಶಾಸಕ…

ಕೊರಟಗೆರೆ ಕ್ಷೇತ್ರದಿಂದ ೨೦೨೮ಕ್ಕೆ ಸ್ಪರ್ಧಿಸುತ್ತೇನೆ: ಪಿ.ಎನ್.ಕೃಷ್ಣಮೂರ್ತಿ

June 27, 2026 5:32 pm

ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ

June 27, 2026 5:29 pm

ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ

June 27, 2026 5:27 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.