BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ
  • ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
  • ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ
  • ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು
  • ದಲಿತ ಯುವಕನ ಹತ್ಯೆ ಖಂಡಿಸಿ ಬಿಜೆಪಿ ಎಸ್.ಸಿ ಮೋರ್ಚಾ ಪ್ರತಿಭಟನೆ
  • ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ
  • ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ
  • ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಖಾಸಗಿಕರಣ ವಿರೋಧಿಸಿ ಎಲ್‍ಐಸಿ ನೌಕರರ ಸಾಂಕೇತಿಕ ಪ್ರತಿಭಟನೆ
ಇತರೆ ಸುದ್ಧಿಗಳು

ಖಾಸಗಿಕರಣ ವಿರೋಧಿಸಿ ಎಲ್‍ಐಸಿ ನೌಕರರ ಸಾಂಕೇತಿಕ ಪ್ರತಿಭಟನೆ

By News Desk BenkiyabaleUpdated:February 03, 2020 7:05 pm

ತುಮಕೂರು :

      ಭಾರತೀಯ ಜೀವವಿಮಾ ನಿಗಮವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಜೀವವಿಮಾ ನೌಕರರ ಸಂಘ, ಅಭಿವೃದ್ಧಿ ಅಧಿಕಾರಿಗಳ ಸಂಘ ಮತ್ತು ಅಧಿಕಾರಿಗಳ ಸಂಘಟನೆಗಳು ನೇತೃತ್ವದಲ್ಲಿ ತುಮಕೂರಿನ ಗಾಂಧೀನಗರದಲ್ಲಿರುವ ಕಚೇರಿ ಮುಂದೆ ನೌಕರರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಡಸ್ವಾಮಿ, ಬಜೆಟ್‍ನಲ್ಲಿ ಎಲ್‍ಐಸಿ ಶೇರು ವಿಕ್ರಯಕ್ಕೆ ತೀರ್ಮಾನಿಸಿರುವುದು ಆಘಾತಕಾರಿ ಬೆಳವಣಿಗೆ. ಸಧ್ಯಕ್ಕೆ ಗ್ರಾಹಕರ ಹಣಕ್ಕೆ ಭಯವಿಲ್ಲ. ಆದರೆ ಭಾರತೀಯ ಜೀವ ವಿಮಾ ನಿಗಮ ಖಾಸಗೀಕರಣಗೊಳಿಸಿದರೆ ಸಾರ್ವಜನಿಕರ ಹಣಕ್ಕೆ ಭದ್ರತೆ ಇರುವುದಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವ ಎಲ್‍ಐಸಿ ಲಾಭದಲ್ಲಿದೆ. ಇಂತಹ ಸಂಸ್ಥೆಯ ಷೇರು ವಿಕ್ರಯಕ್ಕೆ ಸರ್ಕಾರ ಮುಂದಾಗುವುದು ಸರಿಯಲ್ಲ ಎಂದರು.

      ಭಾರತೀಯ ಜೀವ ವಿಮಾನ ನಿಗಮ ಇದುವರೆಗೂ ಸಾವಿರಾರು ಕೋಟಿ ರೂಪಾಯಿ ಲಾಭವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತ ಬಂದಿದೆ. 2017ರಲ್ಲಿ, 2206 ಕೋಟಿ, 2018ರಲ್ಲಿ 2430 ಕೋಟಿ, 2019ರಲ್ಲಿ 2611 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರದ ಬೊಕ್ಕಸಕ್ಕೆ ನೀಡಿದೆ. ಎಲ್‍ಐಸಿ ಲಾಭದಲ್ಲಿದ್ದು ಗ್ರಾಹಕರ ವಿಶ್ವಾಸ ಗಳಿಸಿದೆ. ಸಂಸ್ಥೆ ಇಷ್ಟು ಸುದೀರ್ಘ ವರ್ಷಗಳಲ್ಲಿ ಒಬ್ಬ ಗ್ರಾಹಕರಿಗೂ ಮೋಸ ಮಾಡಿಲ್ಲ. ಹಾಗಾಗಿ ಸಂಸ್ಥೆಯ ಮೇಲೆ ಪಾಲಿಸಿದಾರರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

      ಖಾಸಗಿಯವರು ಎಲ್‍ಐಸಿಯಲ್ಲಿ ಹೂಡಿಕೆ ಮಾಡುವುದು ಲಾಭದ ಉದ್ದೇಶವಿಟ್ಟುಕೊಂಡು ಮಾತ್ರ. ಅವರಿಗೆ ಜನರ ನಂಬಿಕೆಗಳು ಮುಖ್ಯವಲ್ಲ. ಸಾರ್ವಜನಿಕ ಸಂಸ್ಥೆಗಳಲ್ಲಿ ಲಾಭ ಪಡೆಯುವುದೇ ಖಾಸಗಿಯವರ ಮುಖ್ಯ ಉದ್ದೇಶ. ಇಲ್ಲಿನ ಸಾವಿರಾರು ಕೋಟಿ ಹಣವನ್ನು ಕಂಪನಿಗಳಲ್ಲಿ ಹೂಡಿ ನಂತರ ನಷ್ಟವಾಯಿತೆಂದು ಜನರ ಹಣವನ್ನು ಲೂಟಿ ಹೊಡೆಯುತ್ತಾರೆ. ಹೀಗಾಗಿ ಖಾಸಗೀಕರಣಗೊಳಿಸುವುದು ಬೇಡ. ಪಾಲಿಸಿದಾರರು ತಮ್ಮ ಹಣವನ್ನು ರಕ್ಷಿಸಿಕೊಳ್ಳಲು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

     ಎಲ್‍ಐಸಿಯಲ್ಲಿ 1 ಲಕ್ಷ ನೌಕರರು, 50 ಸಾವಿರ ಮಂದಿ ಅಧಿಕಾರಿಗಳು ಒಟ್ಟು ಎರಡು ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 10 ಲಕ್ಷ ಮಂದಿ ಏಜೆಂಟರಿದ್ದಾರೆ. 30 ಕೋಟಿ ಗ್ರಾಹಕರಿದ್ದಾರೆ. 30 ಲಕ್ಷ ಕೋಟಿ ಹಣವಿದೆ. ಇದಕ್ಕೆ ಭದ್ರತೆ ಇದೆ. ಇಷ್ಟೊಂದು ಹಣ ಹೊಂದಿದ್ದರೂ ಷೇರು ವಿಕ್ರಯಕ್ಕೆ ಮುಂದಾಗಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು.  

       ದ್ವಿತೀಯ, ತೃತೀಯ, ಡಿ ದರ್ಜೆ ನೌಕರರು ಅಧಿಕಾರಿಗಳು ಕೂಡ ನಾಳೆ ಮಧ್ಯಾಹ್ನ 12.30ರಿಂದ 1.30ರವರೆಗೆ ಎಲ್ಲಾ ಶಾಖೆಗಳಲ್ಲೂ ಪ್ರತಿಭಟನೆ ನಡೆಸಿ ಖಾಸಗೀಕರಣವನ್ನು ವಿರೋಧಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಸಿ.ವಿ.ಸಾವಂತ್, ಚಂದ್ರಶೇಖರಯ್ಯ, ಅಧಿಕಾರಿಗಳ ಸಂಘಟನೆಯ ಕ.ಕೆ. ಜಯಲಕ್ಷ್ಮೀ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದು ಕೇಂದ್ರದ ನಿರ್ಧಾರವನ್ನು ಖಂಡಿಸಿದರು.

(Visited 21 times, 1 visits today)
Previous Articleಅಲ್ಪಸಂಖ್ಯಾತರ ಅನುದಾನವನ್ನು ಸಮರ್ಪಕವಾಗಿ ಬಳಸಿ
Next Article ತುಮಕೂರು : ಕಣ್ಮನಸೆಳೆದು ಯಶಸ್ವಿಯಾದ ಫಲಪುಷ್ಪ ಪ್ರದರ್ಶನ
News Desk Benkiyabale

Related Posts

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm news

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm news

ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

September 23, 2026 5:47 pm news
ತಾಜಾ ಸುದ್ಧಿಗಳು
news

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm
news

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm
news

ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

September 23, 2026 5:47 pm
news

ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು

September 23, 2026 5:45 pm
news

ದಲಿತ ಯುವಕನ ಹತ್ಯೆ ಖಂಡಿಸಿ ಬಿಜೆಪಿ ಎಸ್.ಸಿ ಮೋರ್ಚಾ ಪ್ರತಿಭಟನೆ

September 23, 2026 5:43 pm
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm
Our Youtube Channel
Our Picks

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm

ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

September 23, 2026 5:47 pm

ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು

September 23, 2026 5:45 pm

ದಲಿತ ಯುವಕನ ಹತ್ಯೆ ಖಂಡಿಸಿ ಬಿಜೆಪಿ ಎಸ್.ಸಿ ಮೋರ್ಚಾ ಪ್ರತಿಭಟನೆ

September 23, 2026 5:43 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

By News Desk BenkiyabaleSeptember 23, 2026 5:52 pm

ತುಮಕೂರು: ಸಾರ್ವಜನಿಕರಿಗೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. ಅವರಿಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ…

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm

ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

September 23, 2026 5:47 pm

ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು

September 23, 2026 5:45 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.