BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವೈಭವದಿಂದ ನಡೆದ ಕಳಸೋತ್ಸವ
  • ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ
  • ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್
  • ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ
  • ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ
  • ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
  • ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ
  • ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಾಕಿ ವೇತನ, ಭತ್ಯೆ, ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ
ತುಮಕೂರು ಜಿಲ್ಲಾ ಸುದ್ಧಿಗಳು

ಬಾಕಿ ವೇತನ, ಭತ್ಯೆ, ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

By News Desk BenkiyabaleUpdated:February 04, 2020 6:54 pm

ತುಮಕೂರು :

      ಮನೆ ಬಾಡಿಗೆ ಭತ್ಯೆ, ಪ್ರಯಾಣ ಭ್ಯತೆ ನಿಲ್ಲಿಸಿರುವುದನ್ನು ಖಂಡಿಸಿ, ಕನಿಷ್ಠ ವೇತನ ಬಾಕಿ ನೀಡುವುದು, ಪ್ರೋತ್ಸಾಹಧನ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘದ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.

      ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ರಜೆಗಳನ್ನು ನೀಡದೆ ಕಿರುಕುಳ ನೀಡಲಾಗುತ್ತಿದೆ. ಉತ್ಪಾದನಾ ಆಧಾರದಲ್ಲಿ ಕೊಡುತ್ತಿದ್ದ ಪ್ರೋತ್ಸಾಹ ಧನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಅದನ್ನು ಮುಂದುವರಿಸಬೇಕು. 2108, 2019ನೇ ಸಾಲಿನ ವಾರ್ಷಿಕ ಬೋನಸ್ 20ರಷ್ಟು ನೀಡಬೇಕು. ಎಕ್ಸ್‍ಗ್ರೇಸಿಯಾ ಶೇ.5ರಷ್ಟು ನೀಡಬೇಕು, 200 ಮಂದಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಆದೇಶ ನಿಡಬೇಕು. ಸೇವಾ ಭದ್ರತೆ ಒದಗಿಸಬೇಕು.ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಮ್ಮ ಬೇಡಿಕೆಗಳ ಕುರಿತು ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದೆ. ಆದರೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ.

       ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 15 ಮಂದಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ತೆಗೆದುಹಾಕಿರುವುದು ಖಂಡನೀಯ. ಅವರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

      ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ನಾಯಕ್ ಮಾತನಾಡಿ, ನವೆಂಬರ್ 29ರಂದು ನಡೆದ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಅನಂತ್, ಸೆನ್ಸಾರ್ ಕಂಪನಿಯ ಮಧುಕುಮಾರ್, ರಾಘವೇಂದ್ರ ಉಪಸ್ಥಿತರಿದ್ದರು. ಆಗ ಸಿಐಟಿಯು ಮುಖಂಡರಾದ ಮೀನಾಕ್ಷಿ ಸುಂದರಂ, ಎನ್.ಕೆ.ಸುಬ್ರಮಣ್ಯ ಮತ್ತು ಸುಜಿತ್ ನಾಯಕ್, 12 ಬೇಡಿಕೆಗಳ ಪಟ್ಟಿಯನ್ನು ನೀಡಿದಾಗ, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದಿರಿ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಜನವರಿ 5, 2020ರಂದು ಮುಷ್ಕರದ ನೋಟಿಸ್ ನೀಡಿತು. ಆದರೂ ಆಡಳಿತ ಮಂಡಳಿ ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಮೊದಲ ಹಂತವಾಗಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದೆವು. ಎರಡನೇ ಹಂತದಲ್ಲಿ ಕಾರ್ಖಾನೆಯ ಮುಂದೆ ಘೋಷಣೆ ಕೂಗಿ ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದೇವೆ. ಆದರೂ ಆಡಳಿತ ಮಂಡಳಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಸುಜಿತ್ ಹೇಳಿದರು.

      ಆಡಳಿತ ಮಂಡಳಿಯ ಬೇಜವಾಬ್ದಾರಿತನ, ಮತ್ತು ನಿರ್ಲಕ್ಷ್ಯತನದಿಂದ ಕಾರ್ಮಿಕರ ಹಿತಕ್ಕೆ ಧಕ್ಕೆಯಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮುಖಂಡರನ್ನು ಮಾತುಕತೆಗೆ ಆಹ್ವಾನ ನೀಡಬೇಕು. ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಮುಂದಾಗಬೇಕು.
ಇಲ್ಲದೆ ಹೋದರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಎನ್. ಮುತ್ತುರಾಜು, ಖಜಾಂಚಿ ಎಚ್.ಆರ್. ಸಂಪತ್‍ಕುಮಾರ್, ಮುಖಂಡರಾದ ರಾಮಕೃಷ್ಣಯ್ಯ, ಶಶಿಧರ, ಚಂದ್ರಶೇಖರ್, ನರಸಿಂಹಮೂರ್ತಿ, ಯೋಗೀಶ್, ಪಾಂಡುಕುಮಾರ್, ರಂಗನಾಥ್, ವೈ.ಎನ್. ಹರೀಶ್ ಮೊದಲಾದವರು ಹಾಜರಿದ್ದರು.

(Visited 15 times, 1 visits today)
Previous Articleಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ-ಶಾಸಕ
Next Article ಕೊರೋನಾ ವೈರಸ್: ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ವೈಭವದಿಂದ ನಡೆದ ಕಳಸೋತ್ಸವ

February 06, 2026 3:45 pm
ಇತರೆ ಸುದ್ಧಿಗಳು

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm
ಇತರೆ ಸುದ್ಧಿಗಳು

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm
ಇತರೆ ಸುದ್ಧಿಗಳು

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm
ಇತರೆ ಸುದ್ಧಿಗಳು

ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ

February 06, 2026 3:37 pm
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm
Our Youtube Channel
Our Picks

ವೈಭವದಿಂದ ನಡೆದ ಕಳಸೋತ್ಸವ

February 06, 2026 3:45 pm

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm

ಕಾನೂನು ರೀತಿಯ ಮಾನದಂಡಗಳನ್ನು ಪಾಲಿಸಿ

February 06, 2026 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ವೈಭವದಿಂದ ನಡೆದ ಕಳಸೋತ್ಸವ

By News Desk BenkiyabaleFebruary 06, 2026 3:45 pm

ಹುಳಿಯಾರು: ಹುಳಿಯಾರಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮ ದೇವಿಯವರ ೧೩ ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ಏರ್ಪಡಿಸಿದ್ದ…

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

February 06, 2026 3:44 pm

ಶಿಕ್ಷಕರಿಗೆ, ಶಿಕ್ಷಕರೇತರರ ಸಮಸ್ಯೆಗೆ ಸ್ಪಂದಿಸುವೆ ನನಗೆ ಮತ ನೀಡಿ: ಶಶಿ ಹುಲಿಕುಂಟೆ ಮಠ್

February 06, 2026 3:42 pm

ಕಾರ್ಪೊರೇಟ್ ಕಣ್ಣೆಗೆ ಬೆಣ್ಣೆ, ಶ್ರಮಜೀವಿಗಳ ಕಣ್ಣೆಗೆ ಸುಣ್ಣ

February 06, 2026 3:39 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.