BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಸೂಚನೆ
Trending

ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಸೂಚನೆ

By News Desk BenkiyabaleUpdated:May 06, 2020 7:02 pm

ತುಮಕೂರು:

      ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ಸರಿಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಿ, ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪೂರೈಸಲು ಅವಕಾಶ ಕಲ್ಪಿಸಲಾಗಿದ್ದು, ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು

       ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದುರಸ್ಥಿಯಲ್ಲಿರುವ ಆರ್.ಓ ಪ್ಲಾಂಟ್‍ಗಳನ್ನು ಪಟ್ಟಿ ಮಾಡಿ, ದುರಸ್ಥಿಯಾಗಿರುವ ಘಟಕದಲ್ಲಿ ದುರಸ್ಥಿಯಲ್ಲಿದೆ ಎಂದು ಬೋರ್ಡ್ ಹಾಕಬೇಕು. ಅಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳಲ್ಲಿ ಕಾರ್ಯನಿರ್ವಹಿಸುವ ವಾಟರ್ ಮ್ಯಾನ್‍ಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಘಟಕ ನಿರ್ವಹಿಸುವ ಬಗ್ಗೆ, ಸಣ್ಣ ಪುಟ್ಟ ರಿಪೇರಿ ಬಗ್ಗೆ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಅಧ್ಯಕ್ಷರು ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಡಿಹೆಚ್‍ಓ ಡಾ|| ಚಂದ್ರಿಕಾ ಅವರು, ಜಿಲ್ಲೆಯಲ್ಲಿ ಈವರೆಗೂ 1769 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದ್ದು, 633 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರಲ್ಲಿ 560 ಜನರು ಡಿಸ್ಚಾರ್ಜ್ ಆಗಿದ್ದಾರೆ. 3315 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಅದರಲ್ಲಿ 2701 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ.

      474 ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದ್ದು, ಈವರೆಗೂ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗುಣಮುಖ ಹಾಗೂ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಂದ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

       ಸಿಇಓ ಶುಭಾ ಕಲ್ಯಾಣ್ ಅವರು ಮಾತನಾಡಿ, ಐಸಿಆರ್‍ಎಂ ನಿರ್ದೇಶನದ ಮೇರೆಗೆ ತಾಲೂಕುವಾರು ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಬೇಕು. ಅಲ್ಲದೇ ಸ್ಥಳೀಯ/ಹೊರ ರಾಜ್ಯ ಅಥವಾ ಹಾಟ್‍ಸ್ಪಾಟ್ ಪ್ರದೇಶಗಳಿಂದ ಬಂದವರು ಸರ್ಕಾರಿ ಅಥವಾ ಖಾಸಗಿ ವೈದ್ಯರ ಬಳಿ ಬಂದಾಗ “ಸ್ಕೋರ್ ಶೀಟ್” ನಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ಭರ್ತಿ ಮಾಡಬೇಕು. ಅದರಲ್ಲಿ 6ಕ್ಕಿಂತ ಹೆಚ್ಚಿನ ಸ್ಕೋರ್ ಬಂದರೆ ಅಂತಹವರ ಗಂಟಲು ದ್ರವ ಮಾದರಿಯನ್ನು  ಪರೀಕ್ಷೆಗೊಳಪಡಿಸುವಂತೆ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸ್ವಚ್ಛತಗಾರರಿಗೆ ಮಾಸ್ಕ್, ಸ್ಯಾನಿಟೈಜರ್ ಒದಗಿಸುವಂತೆ ಅವರು ಸೂಚಿಸಿದರು.

      ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಅಂಗನವಾಡಿಗೆ ಬರುತ್ತಿದ್ದು, ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಅವರು, ಲಾಕ್‍ಡೌನ್ ಆದಾಗಿನಿಂದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಒಂದು ತಿಂಗಳ ಆಹಾರ ಧಾನ್ಯವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

      ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಓಗಳ ಸಭೆ ಕರೆದು, ಗ್ರಾಮಗಳಲ್ಲಿನ ಜನರು ಶೌಚಾಲಯವನ್ನು ಬಳಸುವಂತೆ ಸೂಚಿಸಿ, ಯಾರು ಹೊರಗಡೆ ಹೋಗದಂತೆ ತಿಳಿಸಬೇಕು. 15 ದಿನಗಳಿಗೊಮ್ಮೆ ವಾಟರ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಬೇಕು. ಸಾರ್ವಜನಿಕರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪಾಧ್ಯಕ್ಷರು ಸೂಚನೆ ನೀಡಿದರು.

       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 47 times, 1 visits today)
Previous Articleತುಮಕೂರಿನಿಂದ 765 ವಲಸೆ ಕಾರ್ಮಿಕರಿಗೆ ಬಸ್ಸಿನಲ್ಲಿ ಪ್ರಯಾಣ ವ್ಯವಸ್ಥೆ
Next Article ಆರ್.ಆರ್. ಅಭಿಮಾನಿ ಬಳಗದ ದಾಸೋಹಕ್ಕೆ ಎಸ್‍ಪಿ ಮೆಚ್ಚುಗೆ
News Desk Benkiyabale

Related Posts

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm news
ತಾಜಾ ಸುದ್ಧಿಗಳು
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
Our Youtube Channel
Our Picks

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

By News Desk BenkiyabaleAugust 07, 2026 5:05 pm

ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು…

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.