BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ
  • ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ
  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ
  • ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ
  • ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
  • ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ
  • ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : ಬೇಡಿಕೆ ಈಡೇರಿಸದಿದ್ದರೆ ಖಾಸಗಿ ಬಸ್ ಸೇವೆ ಇಲ್ಲ!!
ತುಮಕೂರು ಜಿಲ್ಲಾ ಸುದ್ಧಿಗಳು

ತುಮಕೂರು : ಬೇಡಿಕೆ ಈಡೇರಿಸದಿದ್ದರೆ ಖಾಸಗಿ ಬಸ್ ಸೇವೆ ಇಲ್ಲ!!

By News Desk BenkiyabaleUpdated:June 02, 2020 6:35 pm

ತುಮಕೂರು:

      ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಯಾದ ವಿಮೆ ವಿನಾಯಿತಿ ಹಾಗೂ ಮಾಸಿಕ ಕಂತಿನ ರಿಯಾಯಿತಿಯನ್ನು ನೀಡಿದರೆ ಮಾತ್ರ ಖಾಸಗಿ ಬಸ್ ಗಳ ಸೇವೆ ಪುನರಾರಂಭವಾಗಲಿದೆ ಎಂದು ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಬಲಶ್ಯಾಮಸಿಂಗ್ ತಿಳಿಸಿದರು.

      ನಗರದ ಹೊರವಲಯ ಹಿರೇಹಳ್ಳಿಯಲ್ಲಿ ವಿವಿಧ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಸರ್ಕಾರಕ್ಕೂ ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಲಾಗಿದ್ದು, ಎಲ್ಲರೂ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ, ಸರ್ಕಾರ ಒಪ್ಪಿದರೆ ಮಾತ್ರ ಸೇವೆ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.

      ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈಗಾಗಲೇ ಬಸ್ ಮಾಲೀಕರ ಬೇಡಿಕೆಯನ್ನು ತಿಳಿಸಲಾಗಿದೆ, ಬಸ್ ಮೇಲಿನ ತ್ರೈಮಾಸಿಕ ತೆರಿಗೆಗೆ ಡಿಸೆಂಬರ್ ವರೆಗೆ ವಿನಾಯ್ತಿ ನೀಡಬೇಕು ಮತ್ತು ಜೂನ್ ವರೆಗೆ 50ರಷ್ಟು ತೆರಿಗೆ ಕಟ್ಟಲು ಅವಕಾಶ ನೀಡಬೇಕು, ಹಾಗೆಯೇಮಾಸಿಕ ಕಂತು ಹಾಗೂ ವಿಮೆಯಲ್ಲಿ ವಿನಾಯ್ತಿ ನೀಡಿದರೆ ಮಾತ್ರ ಬಸ್ ಗಳು ಓಡಾಡಲು ಸಾಧ್ಯವಾಗುತ್ತದೆ ಎಂದರು.

      ಕೇಂದ್ರ ಸರ್ಕಾರ ಇಂಡಸ್ಟ್ರೀಗಳಿಗೆ 5ರೂ ಕಡಿಮೆಗೆ ಡಿಸೇಲ್ ನೀಡುತ್ತದೆ, ಬಸ್ ಗಳಿಗೂ ಮಾರುಕಟ್ಟೆ ದರಕ್ಕೆ ಡಿಸೇಲ್ ಮಾರಾಟ ಮಾಡುತ್ತಿದ್ದು, ಇದು ಸೇವೆಯೊಂದಿಗೆ ದುಡಿಮೆಯನ್ನು ಮಾಡುವ ಉದ್ಯಮವಾಗಿದ್ದು, ಕೊರೋನಾದಿಂದಾಗಿ ಜನರ ಬಳಿ ಹಣವಿಲ್ಲ, ಇಂತಹ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಿಸಿ, ಸರ್ಕಾರದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ಹೇಳಿದರು.

      ಸಿಎಂ ಬಿಎಸ್ ವೈ ಖಾಸಗಿ ಬಸ್ ಮಾಲೀಕರ ಸಂಘದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ, ಇದುವರೆಗೆ ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಕೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ರಾಜ್ಯದ ಎಲ್ಲ ಜಿಲ್ಲೆಯ ಸದಸ್ಯರನ್ನು ಒಳಗೊಂಡ ನಿಯೋಗವನ್ನು ಮಾಡಿ, ಸಿಎಂ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

      ರಾಜ್ಯದಲ್ಲಿ 8500 ಸಾವಿರ ಖಾಗಿ ಬಸ್ ಗಳಿವೆ, ಜಿಲ್ಲೆಯಲ್ಲಿ 540 ಬಸ್ ಗಳಿವೆ, ಪ್ರತಿ ತಿಂಗಳು ಒಂದು ಲಕ್ಷ ನಷ್ಟವನ್ನು ಬಸ್ ಮಾಲೀಕರು ಅನುಭವಿಸುತ್ತಿದ್ದಾರೆ, ಕೆಎಸ್‍ಆರ್ಟಿಸಿ ಬಸ್ ಗಳು ಸಹ ನಷ್ಟ ಅನುಭವಿಸುತ್ತಿವೆ, ಇಂತಹ ಸಂದರ್ಭದಲ್ಲಿ ಖಾಸಗಿ ಬಸ್ ಕಾರ್ಯಾಚರಣೆ ನಡೆಸುವುದು ಹೇಗೆ? ಈ ಬಗ್ಗೆ ಮುಖ್ಯಮಂತ್ರಿಗಳು ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಸರ್ಕಾರ ಖಾಸಗಿ ಬಸ್ ಗಳ ಮೇಲೆ ವಿಧಿಸುವ ಟ್ಯಾಕ್ಸ್ ಮತ್ತು ಡಿಸೇಲ್ ಬೆಲೆ ಹೆಚ್ಚಳವಾಗಿದೆ, ಸರ್ಕಾರದ ಮಾರ್ಗಸೂಚಿಯಂತೆ ಪ್ರಯಾಣಿಕರನ್ನು ಕರೆದೊಯ್ದರೆ ಬಸ್ ಮಾಲೀಕರು ನಷ್ಟಕ್ಕೆ ಒಳಗಾಗುತ್ತಾರೆ, ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರನ್ನು ಹಾಳುಗೆಡವುತ್ತಿದೆ, ಅನಾರೋಗ್ಯಕಾರಿ ಬೆಲೆ ನಿಗದಿ ಮಾಡಿ ಖಾಸಗಿ ಬಸ್ ಗಳು ನಷ್ಟ ಅನುಭವಿಸುವಂತೆ ಮಾಡುವುದರ ಜೊತೆಗೆ ಕೆಎಸ್‍ಆರ್ ಟಿಸಿ ಸಂಸ್ಥೆಯೂ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಹೇಳಿದರು.

      ಸ್ವತಂತ್ರ್ಯ ಪೂರ್ವದಿಂದಲೂ ಖಾಸಗಿ ಬಸ್ ಗಳುಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬೇರೆ ಚಾಲಕರಿಗೆ ನೀಡಿದಂತೆ ಬಸ್ ಚಾಲಕರಿಗೆ ಪರಿಹಾರಧನವನ್ನು ನೀಡಬೇಕೆಂದು ಒತ್ತಾಯಿಸಿದ ಅವರು, ಎರಡು ಮೂರು ದಿನದಲ್ಲಿ ಸಿಎಂ ಬೇಟಿ ಮಾಡುತ್ತೇವೆ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಬಸ್ ಕಾರ್ಯಾಚರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

      ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ್, ನಿರ್ದೇಶಕರಾದ ಪಿ.ಆರ್.ಮಂಜುನಾಥ್, ಎಸ್.ಬಿ.ಕೃಷ್ಣಮೂರ್ತಿ, ಎ.ಎಸ್.ರುದ್ರಮೂರ್ತಿ ಸೇರಿದಂತೆ ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ನಿರ್ದೇಶಕರುಗಳು ಸದಸ್ಯರು ಮತ್ತು 13 ಜಿಲ್ಲೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

(Visited 7 times, 1 visits today)
Previous Articleಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಮಾಡಿ: ಜಿ.ಪಂ ಅಧ್ಯಕ್ಷೆ ಲತಾರವಿಕುಮಾರ್
Next Article ತುಮಕೂರು : ಕಂಟೈನ್‍ಮೆಂಟ್ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಅವಕಾಶವಿಲ್ಲ!!
News Desk Benkiyabale

Related Posts

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm news

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm news
ತಾಜಾ ಸುದ್ಧಿಗಳು
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm
news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm
news

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm
news

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm
news

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

August 24, 2026 5:43 pm
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm
Our Youtube Channel
Our Picks

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

August 24, 2026 5:43 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

By News Desk BenkiyabaleAugust 24, 2026 5:49 pm

ಯುಪಿಎಸ್ ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ – ಶಿಸ್ತು ಅಗತ್ಯ. ಕೆಲಸ ಮಾಡುವಾಗ ಸಣ್ಣಪುಟ್ಟ ತಪುö್ಪಗಳು ಆಗುವುದು ಸಹಜ. ಆದರೆ,…

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.