ತುಮಕೂರು :

      ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 13 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು,

ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆ ಆದಂತಾಗಿದೆ.

ತಾಲ್ಲೂಕುವಾರು ಸೋಂಕಿತರ ವಿವರ :

ತುಮಕೂರು -6

ಪಾವಗಡ – 3

ಮಧುಗಿರಿ-2,

ಕುಣಿಗಲ್-2

      ಜಿಲ್ಲೆಯ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದೆ. 

     ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.

      ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.

(Visited 585 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp