ಮಧುಗಿರಿ:

      ಮುಂಗಾರು ಹಂಗಾಮಿನಲ್ಲಿ ಮೂಬೈಲ್ ಆಫ್ ಮೂಲಕ ಜಿಐಎಸ್ ಮತ್ತು ಜಿಪಿಎಸ್ ಬಳಸಿ ಮುಂಗಾರು ಬೆಳೆ ಸಮೀಕ್ಷೆ ಮಾಡಿದ ಕೆಲ ಪಿಆರ್‍ಗಳಿಗೆ ಹಣ ನೀಡಿಲ್ಲಾ ಎಂದು ಬೆಳೆ ಸಮೀಕ್ಷೆ ಮಾಡಿದ ಪಿಆರ್‍ಗಳು ಆರೋಪಿಸಿದ್ದಾರೆ.

      ಮಧುಗಿರಿಯ ವ್ಯಾಪ್ತಿಯಲ್ಲಿ ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ನೇತೃತ್ವದಲ್ಲಿ ಖಾಸಗಿ ವ್ಯಕ್ತಿಗಳಿಂದ ಮೊಬೈಲ್ ಆಪ್ ಮೂಲಕ ಮುಂಗಾರು ಹಾಗು ಹಿಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು.

      ಖಾಸಗಿ ಪಿಆರ್‍ಗಳು ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಪ್ರತಿ ಸರ್ವೆ ನಂಬರ್‍ನ ಎಲ್ಲಾ ಫ್ಲಾಟ್‍ಗಳ ತೆರಳಿ ಬೆಳೆ ಇದ್ದರೆ ಬೆಳೆಯ ಮಾಹಿತಿಯನ್ನು ಫೋಟೋ ಸಹಿತ ಅಪ್ಲೋಡ್ ಮಾಡಿದ್ದಾರೆ, ಇದರಿಂದ ಎಲ್ಲಿ ಮತ್ತು ಯಾವ ಬೆಳೆ ಬೆಳೆಯಲಾಗಿದೆ ಎಂಬ ಮಾಹಿತಿಯೊಂದಿಗೆ ಸಮೀಕ್ಷೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

      ಪ್ರತಿ ಸರ್ವೆ ನಂಬರ್‍ಗೆ ಇಂತಿಷ್ಟು ಹಣ ನಿಗದಿಪಡಿಸಿ ಸಮೀಕ್ಷೆ ಮಾಡಿಸಿದ್ದು, ಬಳಕೆದಾರರ ಸಂಖ್ಯೆ ಕೆಎಐಎಸ್00539 ಐಡಿಯಲ್ಲಿ 484, 180, 721 ಒಟ್ಟು 1385 ಸರ್ವೆ ನಂಬರ್‍ಗಳು ಸರ್ವೆ ಬೆಳೆ ಸಮೀಕ್ಷೆ ಮಾಡಿದ್ದು, ಕೇವಲ 7880 ರೂ ಗಳು ಖಾತೆಗೆ ಜಮೆ ಮಾಡಲಾಗಿದೆ, ಇದೇ ರೀತಿ ಹಲವು ಪಿಆರ್‍ಗಳು ಉಳಿದ ಹಣ ಬಂದಿಲ್ಲವೆಂದು ಕಳೆದ ಎಂಟು ತಿಂಗಳಿಂದ ಅಲೆಯುತ್ತಿದ್ದರೂ ಯಾರೊಬ್ಬರು ತಲೆ ಕೆಳಡಿಸಿಕೊಳ್ಳುತ್ತಿಲ್ಲಾ, ಎನ್‍ಐಸಿ ಬೆಂಗಳೂರಿನಲ್ಲಿ ವಿಚಾರಿಸಿ ಎಂದು ಸಬೂಬು ಹೇಳುತಿದ್ದಾರೆ.

      ಕರೋನಾ ವೇಳೆ ಉದ್ಯೂಗವಿಲ್ಲದೆ ಪರದಾಡುತ್ತಿದ್ದು ನಮಗೆ ಬರಬೇಕಿರುವ ಹಣ ಕೊಡಿಸಿ ಎಂದು ಪಿಆರ್‍ಗಳು ತಹಶಿಲ್ದಾರ್‍ಗೆ ದೂರವಾಣಿ ಮೂಲಕ ಮನವಿ ಮಾಡಿದ್ದು, ಈ ಬಗ್ಗೆ ತಹಶಿಲ್ದಾರ್ ಡಾ ವಿಶ್ವನಾಥ್ ಪ್ರತಿಕ್ರಿಯಿಸಿ ಲಿಖಿತವಾಗಿ ದೂರು ನೀಡಿದರೆ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರವುದಾಗಿ ತಿಳಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನಹರಿಸಿ ಪಿಆರ್‍ಗಳಿಗೆ ಬರೆಬೇಕಿದ್ದ ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ.

(Visited 15 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp