ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೋಲಹಲ ಎಬ್ಬಿಸಿದ್ದ ಶೃತಿ ಹರಿಹರನ್ಗೆ ಇದೀಗ ಸಂಕಷ್ಟ ಎದುರಾಗಿದ್ದು, ಶ್ರುತಿ ಹರಿಹರನ್ ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಿರುವ ಕಾರಣ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಹಾಗೂ ವಕೀಲರು ಲಿಖಿತ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಐಟಿ ಆ್ಯಕ್ಟ್ 200 ಅಡಿಯಲ್ಲಿ ಶ್ರುತಿ ಹರಿಹರನ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಬ್ಬರ ನಡುವೆ ಸಂಧಾನ ನಡೆಸಲು ಚಲನಚಿತ್ರ ರಂಗದ ಪ್ರಮುಖರು ಪ್ರಯತ್ನಿಸುತ್ತಿರುವ ಮಧ್ಯೆಯೇ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Trending
- ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್
- ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ
- ೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ
- ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್ಪಿ
- ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ
- ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ
- ೨೦೨೭ಕ್ಕೆ ಎತ್ತಿನಹೊಳೆ ಕಾಮಗಾರಿ ಪೂರ್ಣ: ಪರಂ
- ಐದು ಜನರ ಮೇಲೆ ಚಿರತೆ ದಾಳಿ