ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೋಲಹಲ ಎಬ್ಬಿಸಿದ್ದ ಶೃತಿ ಹರಿಹರನ್ಗೆ ಇದೀಗ ಸಂಕಷ್ಟ ಎದುರಾಗಿದ್ದು, ಶ್ರುತಿ ಹರಿಹರನ್ ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಿರುವ ಕಾರಣ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಹಾಗೂ ವಕೀಲರು ಲಿಖಿತ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಐಟಿ ಆ್ಯಕ್ಟ್ 200 ಅಡಿಯಲ್ಲಿ ಶ್ರುತಿ ಹರಿಹರನ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಬ್ಬರ ನಡುವೆ ಸಂಧಾನ ನಡೆಸಲು ಚಲನಚಿತ್ರ ರಂಗದ ಪ್ರಮುಖರು ಪ್ರಯತ್ನಿಸುತ್ತಿರುವ ಮಧ್ಯೆಯೇ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Trending
- ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಅನುಮೋದನೆ ಇಲ್ಲ
- ಮಾದಾವರದಿ0ದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ
- ಗೂಳೂರು ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ
- ವಾಣಿಜ್ಯ ಮಳಿಗೆಗಳೆ ಈ ಕಳ್ಳರ ಟಾರ್ಗೆಟ್
- ಪ್ರಶಸ್ತಿ ಮುಖ್ಯವಲ್ಲ ಪಾಲ್ಗೊಳ್ಳುವಿಕೆಯೇ ಭಾಗ್ಯ: ಬಿ.ಆರ್ ಮಂಜುನಾಥ್
- ಕಲ್ಪತರು ಉತ್ಸವ-ಪ್ರಗತಿಪರ ರೈತರಿಗೆ ಗೌರವಾರ್ಪಣೆ
- ಭೂಮಿಯು ವ್ಯಾಪಾರದ ವಸ್ತುವಲ್ಲ: ಪ್ರೊ. ರಾಜೇಂದ್ರ ಚೆನ್ನಿ
- ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆ ಬೆಳಸಿಕೊಳ್ಳಿ


