BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ
  • ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
  • ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
  • ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ
  • ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ
  • ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಾದಾವರದಿ0ದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ
ಇತರೆ ಸುದ್ಧಿಗಳು

ಮಾದಾವರದಿ0ದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ

ಡಾ.ಜಿ.ಪರಮೇಶ್ವರ್  ಮತ್ತು ಸರ್ಕಾರದ ವಿಶೇಷ ಆಸಕ್ತಿ ಮೆಚ್ಚುವಂತದ್ದು: ಮಾಜಿ ಸಂಸದ
By News Desk BenkiyabaleUpdated:November 21, 2025 3:10 pm

ತುಮಕೂರು: ಮಾದಾವರದಿಂದ – ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ. ಮಾದಾವರದಿಂದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ನನ್ನ ಅವಧಿಯಲ್ಲಿ ಶ್ರಮಿಸಿದ್ದರೂ ಈ ಹಂತಕ್ಕೆ ಹೋಗಿರಲಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್  ಮತ್ತು ಸರ್ಕಾರದ ವಿಶೇಷ ಆಸಕ್ತಿ ಮೆಚ್ಚುವಂತದ್ದು. ಭವಿಷ್ಯದ ದೃಷ್ಟಿಯಿಂದ ವಸಂತನರಸಾಪುರದವರೆಗೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ ಎಂದರು.

ಯೋಜನೆಯ ಬಗ್ಗೆ ಬಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯರವರನ್ನು ತುಮಕೂರಿಗೆ ಆಹ್ವಾನಿಸಿ, ಒಂದು ಸಂವಾದ ನಡೆಸುವುದು ಅಗತ್ಯವಾಗಿದೆ. ಕೇಂದ್ರ ಸಚಿವರಾದ  ವಿ.ಸೋಮಣ್ಣ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ತುಮಕೂರು ಗ್ರಾಮಾಂತರದ ಶಾಸಕ ಸುರೇಶ್ ಗೌಡ ಮತ್ತು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶ್ರಮಿಸುವ ಭರವಸೆ ಇದೆ ಎಂದಿದ್ದಾರೆ.

ಬೆಂಗಳೂರಿನ ೨ ನೇ ಅಂತರರಾಷ್ಟಿçÃಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ನನ್ನ ಅವಧಿಯಲ್ಲಿ  ಆರಂಭಿಸಲಾಗಿತ್ತು. ಈಗ ಬೆಂಗಳೂರಿನ ಅಕ್ಕ-ಪಕ್ಕದ ಸ್ಥಳಗಳಿಗೆ, ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾ ನೀಡಿರುವ ಸಲಹೆಗಳನ್ನು ಪರಿಗಣಿಸಿ, ತುಮಕೂರು ಏರ್ ಪೋರ್ಟ್ ಸ್ಥಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮೇಕೆ ದಾಟು ನ್ಯಾಯಾಲಯದ ತೀರ್ಪು ಸ್ವಾಗತವಾಗಿದೆ. ೧೯೪೮ ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆರಂಭಿಸಿದ್ದರೂ, ಈಗ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರಕ್ಕೆ ಆತ್ಮ ವಿಶ್ವಾಸ ಹೆಚ್ಚಿಸಿದೆ. ಸರ್ಕಾರ ಶೀಘ್ರವಾಗಿ ವರದಿ ಸಲ್ಲಿಸಿದ ನಂತರ ಪಕ್ಷಾತೀತವಾಗಿ ಪ್ರಧಾನಿ ನರೇಂದ್ರಮೋದಿ ಅವರ ಬಳಿ ನಿಯೋಗ ಹೋಗಿ ಮನವಿ ಮಾಡುವುದು ಅಗತ್ಯವಾಗಿದೆ. ಯೋಜನೆಗೆ ಶ್ರಮಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ, ರಾಜ್ಯದ ಎಲ್ಲಾ ಅವಧಿಯ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ ಸಚಿವರುಗಳಿಗೂ, ತಜ್ಞರುಗಳಿಗೂ, ಅಧಿಕಾರಿಗಳಿಗೂ. ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ  ಡಿ.ಕೆ.ಶಿವಕುಮಾರ್ ರವರು ಬರೆದಿರುವ ‘ನೀರಿನ ಹೆಜ್ಜೆ’ ವಿವಾದ ಒಪ್ಪಂದ- ತೀರ್ಪು, ಪುಸ್ತಕದಲ್ಲಿನ ಬರಡು ಇಳೆಗೆ ನೀರುಣಿಸುವಲಿರುವ ಎತ್ತಿನಹೊಳೆ ಯೋಜನೆಯಲ್ಲಿ ದಿ. ‘ಜಿ.ಎಸ್.ಪರಮಶಿವಯ್ಯ ಶ್ರಮ’ವನ್ನು ಉಲ್ಲೇಖ ಮಾಡಿರುವುದು ನಿಜಕ್ಕೂ ಅಭಿನಂದನೀಯ.ವಿವಿಧ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ, ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ಒದಗಿಸಲು ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ, ಕರ್ನಾಟಕ ಸಮಗ್ರ ನೀರಾವರಿ ಯೋಜನೆಗಳ ವಸ್ತು ನಿಷ್ಠ ವರದಿಯನ್ನು ಶೀಘ್ರವಾಗಿ ಹೊರತರಲಾಗುವುದು ಎಂದರು.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಹಾಗೂ ಆಸಕ್ತ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯಲು ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯದ್ಯಾಂತ, ೨೨೪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ತಲಾ ೫ ರಂತೆ ರಚನೆಯಾಗುತ್ತಿರುವ ೧೧೨೦ ಕಳೆ-ಬೆಳೆ ನಾಲೇಡ್ ಬ್ಯಾಂಕ್‌ಗಳ/ಕೃಷಿ ಆಶ್ರಮಗಳ, ಪ್ರಗತಿಪರ ರೈತ ತಜ್ಞರ ಸಹಭಾಗಿತ್ವದೊಂದಿಗೆ, ರಾಜ್ಯದ ಮೂಲೆ ಮೂಲೆಗಳಲ್ಲಿರುವ ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು, ನೀರಾವರಿ ಅಧ್ಯಯನ ಸಂಸ್ಥೆಗಳು, ೨೮ ಲೋಕಸಭಾ, ೧೪ ರಾಜ್ಯಸಭಾ, ೨೨೫ ವಿಧಾನ ಸಭಾ, ೭೫ ವಿಧಾನಪರಿಷತ್ ಮತ್ತು ೨ ದೆಹಲಿ ವಿಶೇಷ ಜನಪ್ರತಿನಿಧಿಯವರು ಸೇರಿದಂತೆ ೩೪೪ ಜನರ ಅಭಿಪ್ರಾಯಗಳನ್ನು ಸಹ ಪಡೆಯಲಾಗುವುದು ಎಂದರು.

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ, ಮಾಜಿ ಮುಖ್ಯಮಂತ್ರಿಯವರ ಮತ್ತು ಮಾಜಿ ನೀರಾವರಿ ಸಚಿವರ ದೂರದೃಷ್ಟಿಗಳಿಗೂ ಒತ್ತು ನೀಡಲಾಗುವುದು. ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗೆ ಜಮೀನು ಸ್ವಾಗತ. ನಾನು ೧೯೮೪ ರಲ್ಲಿ ಲೋಕಸಭೆಗೆ ಪಾದಾರ್ಪಣೆ ಮಾಡಿದ ಆರಂಭದಲ್ಲಿ ಲೋಕಸಭೆ ಆವರಣದಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಮಾಡಲು ಶ್ರಮಿಸಿದ್ದೆ. ೫ ಭಾರಿ ಲೋಕಸಭಾ ಸದಸ್ಯನಾಗಿ ಕೊನೆಯಲ್ಲಿ, ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳೆರವರಿಗೆ, ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ದೆಹಲಿ ರೆಸಿಡೆಂಟ್ ಕಮೀಷನರ್ ರವರಿಗೆ ಮನವಿ ಸಲ್ಲಿಸಿದ್ದೆ. ಜಮೀನು ಮಂಜೂರು ಮಾಡಲು ಸಹಕರಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲರಿಗೂ ಅಭಿನಂದನೆಗಳು. ೨೦೨೩ ರಿಂದ ಇದೂವರೆಗೂ ನಿರಂತರವಾಗಿ ಕಡತದ ಅನುಸರಣೆ ಮಾಡಿರುವ ಕುಂದರನಹಳ್ಳಿ ರಮೇಶ್ ಕೆಲಸವೂ ಮೆಚ್ಚುವಂತದ್ದು. ಶೀಘ್ರವಾಗಿ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಇದ್ದರು.

 

 

(Visited 1 times, 1 visits today)
Previous Articleಗೂಳೂರು ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ
Next Article ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಅನುಮೋದನೆ ಇಲ್ಲ
News Desk Benkiyabale

Related Posts

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm news
ತಾಜಾ ಸುದ್ಧಿಗಳು
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm
news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm
news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm
news

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
news

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
news

ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ

August 08, 2026 4:26 pm
Our Youtube Channel
Our Picks

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

By News Desk BenkiyabaleAugust 08, 2026 5:13 pm

ತುಮಕೂರು: ಕೇಂದ್ರ ಸರಕಾರ ಸುಮಾರು ೩೦೦೦ ಕೋಟಿ ರೂಖರ್ಚು ಮಾಡುತ್ತಿರುವ ರಾಷ್ಟಿçÃಯ ಹೆದ್ದಾರಿ ೨೦೬ರಲ್ಲಿ ತಿಪಟೂರು ಸಮೀಪದ ಅಯ್ಯನ ಭಾವಿ…

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.